ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕೊಲೆ, ಸುಲಿಗೆ, ದರೋಡೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದೀಗ ವಿಧಾನಸೌಧದ ಮುಂದುಗಡೆ ಡಕಾಯಿತಿ ನಡೆಸಿ ಹಣ, ಮೊಬೈಲ್ ಕಸಿದುಕೊಂಡು ಪರರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಅಣ್ಣ-ತಮ್ಮ ಇಬ್ಬರೂ ಸಿನಿಮಾ ನೋಡಿ ವಿಧಾನಸೌಧದ ಲೈಟಿಂಗ್ ನೋಡಲು ಬಂದಿದ್ದರು. ಈ ವೇಳೆ ಹೈಕೋರ್ಟ್ ಮುಂಭಾಗ ಇರುವ ಮೆಟ್ರೋ ನಿಲ್ದಾಣದ ಮುಂದೆ ಡಕಾಯಿತಿ ನಡೆದಿದೆ. ಬಿಮಲ್ ಗಿರಿ ಎಂಬಾತನಿಗೆ ಹಲ್ಲೆ ನಡೆಸಿ ಡಕಾಯಿತಿ ಮಾಡಲಾಗಿದೆ. ಸುಮಾರು ಐದರಿಂದ ಆರು ಜನ ಆರೋಪಿಗಳಿಂದ ಡಕಾಯಿತಿ ನಡೆದಿದೆ.
ಮೊದಲಿಗೆ ನಮ್ಮನ್ನು ಹಿಡಿದುಕೊಂಡು ಬೆದರಿಕೆ ಹಾಕಿ ಹಲ್ಲೆ ನಡೆಸಿದರು. ಬಳಿಕ ನಮ್ಮ ಬಳಿಯಿದ್ದ ಹಣ ಮತ್ತು ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತರು ದೂರು ನೀಡಿದ್ದಾರೆ. ಹಲ್ಲೆ ಮಾಡಿ 36 ಸಾವಿರದ ಮೊಬೈಲ್ ಫೋನ್, 9,182 ರೂ. ಹಣ ಕಸಿದು ಪರಾರಿಯಾಗಿದ್ದಾರೆಂದು ದೂರಲಾಗಿದೆ. ಇದನ್ನೂ ಓದಿ: Breaking news: 14 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ
ಘಟನೆ ಸಂಬಂಧಿಸಿ ವಿಧಾಸೌಧದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಡಕಾಯಿತಿ ಎಂದು ಕೇಸ್ ದಾಖಲು ಮಾಡಿಕೊಂಡು ವಿಧಾನಸೌಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
