ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಇತ್ತೀಚಿಗಷ್ಟೇ ಮದುವೆಯಾಗಿದ್ದು ಗಂಡನ ಜೊತೆ ಸುಖಕರ ಜೀವನ ನಡೆಸುತ್ತಿದ್ದಾರೆ.
ಇನ್ನು ಮದುವೆಯಾದ ನಂತರ ತಮ್ಮ ನಿರೂಪಣೆ ವೃತ್ತಿಗೆ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲಾಗುತ್ತಿದ್ದು, ಅನುಶ್ರೀ ಅವರು ತಮ್ಮ ಆಂಕರ್ ವೃತ್ತಿಗೆ ನಿವೃತ್ತಿ ನೀಡಲಿದ್ದಾರೆ ಎಂಬ ಸುದ್ದಿ ಇದೀಗ ಅನುಶ್ರೀ ಅವರ ಅಭಿಮಾನಿಗಳಲ್ಲಿ ಬೇಸರ ಮೂಡುವಂತ ಸುದ್ದಿ ಇದಾಗಿದೆ.
ಹೌದು, ತಮ್ಮ ಮಾತಿನ ಮೂಲಕವೇ ಇಡೀ ಕರ್ನಾಟಕದ ಜನತೆಯ ಮನೆ ಮಾತಾಗಿರುವ ಅನುಶ್ರೀ ಅವರು ಇತ್ತೀಚಿಗಷ್ಟೇ ಮದುವೆಯಾಗಿದ್ದು ತಮ್ಮ ನಿರೂಪಣೆಗೆ ನಿವೃತ್ತಿ ಹೊಂದಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯೆಸ್…ಕನ್ನಡ ಕಿರುತೆರೆ ಲೋಕದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಅನುಶ್ರೀ ಯಾವ ಸಿನಿಮಾ ಸ್ಟಾರ್ ಗಳಿಗೂ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತಮ್ಮ ನಿರೂಪಣೆ ಶೈಲಿಯ ಮೂಲಕವೇ ವೀಕ್ಷಕರನ್ನು ಸೆಳೆಯುವ ದೊಡ್ಡ ಶಕ್ತಿ ಆಂಕರ್ ಅನುಶ್ರೀ ಅವರಿಗೆ ಇದೆ. ಅನುಶ್ರೀ ಇಲ್ಲದೆ ಯಾವ ಕಾರ್ಯಕ್ರಮವು ನಡೆಯೊಲ್ಲ ಅನ್ನೋ ಮಟ್ಟದಲ್ಲಿ ಕಿರುತೆರೆ ವಾಹಿನಿ ಇದೆ. ಆದರೆ ಈ ಮಧ್ಯೆ ಅನುಶ್ರೀ ನಿರೂಪಣೆಗೆ ಗುಡ್ ಬೈ ಹೇಳ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ಮಲಯಾಳಂ ಬಿಗ್ ಪ್ರಾಜೆಕ್ಟ್ ನಲ್ಲಿ ನಟಿಸುತ್ತಿದ್ದಾರಾ ಮೇಘನಾ ರಾಜ್?
ಅಂದಹಾಗೆ ಅನುಶ್ರೀ ನಿವೃತ್ತಿ ಸುದ್ದಿ ಹರಿದಾಡುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ.ಇದು ಸುಳ್ಳು ಸುದ್ದಿಯಾಗಿದ್ದು ಸದ್ಯಕ್ಕೆ ಅನುಶ್ರೀ ಕನ್ನಡ ಕಿರುತೆರೆ ಲೋಕದಲ್ಲಿ ಹೋರ ಹೋಗುವ ಯಾವುದೇ ಮಾಹಿತಿಯೂ ಇಲ್ಲ. ಅನುಶ್ರೀ ಈಗಾಗಲೇ ತಮ್ಮ ವೃತ್ತಿ ಮತ್ತು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಕನ್ನಡ ಕಿರುತೆರೆ ಹಾಗೂ ಸುದ್ದಿ ಕಾರ್ಯಕ್ರಮಗಳಲ್ಲಿ ಮುಂದೆಯೂ ತಮ್ಮ ಕಾರ್ಯನಿರ್ವಹಣೆಯನ್ನು ಮುಂದುವರೆಸಲಿದ್ದಾರೆ.
