ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 ಪ್ರಾರಂಭವಾಗಿ ಈಗಾಗಲೇ ಹಲವಾರು ವಾರಗಳು ಕಳೆಯುತ್ತಾ ಬಂದಿದೆ.
ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ಬಿಗ್ ಬಾಸ್ ವಿಭಿನ್ನವಾಗಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ. ಅದರಲ್ಲೂ ಕೂಡ ಈ ಬಾರಿ ಇರುವ ಕಂಟೆಸ್ಟೆಂಟ್ಗಳು ಕೂಡ ವಿಭಿನ್ನವಾದ ಮನರಂಜನೆಯನ್ನು ನೀಡುತ್ತಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಕರ್ನಾಟಕದ ಮನೆ ಮಂದಿ ಮನ ಗೆದ್ದಿರುವ ಗಿಲ್ಲಿ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಿರುವ ಪೋಸ್ಟರ್ ಒಂದು ಚಿತ್ರ ತಂಡ ರಿವಿಲ್ ಮಾಡಿದ್ದು ಗಿಲ್ಲಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಯೆಸ್…ಬಿಗ್ ಬಾಸ್ ಮನೆಯಲ್ಲಿ ಸಕ್ಕತ್ ಕಾಮಿಡಿ ಮಾಡುವುದರ ಜೊತೆಗೆ ಎಲ್ಲಾ ಕಂಟೆಸ್ಟೆಂಟ್ಗಳಲ್ಲಿ ವಿಭಿನ್ನವಾಗಿ ಆಟವಾಡುತ್ತಿರುವ ಗಿಲ್ಲಿ ‘ಡೆವಿಲ್’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿರುವ ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಇಂದು ನಡೆದ ವಿಚಾರಣೆಯಲ್ಲಿ ಕೋರ್ಟ್ ಗೆ ‘ಡಿ’ ಗ್ಯಾಂಗ್ ಹೇಳಿದ್ದೇನು..?
ಇನ್ನು ಗಿಲ್ಲಿ ಚಿತ್ರದಲ್ಲಿ ಶರ್ಟ್ ಮತ್ತು ಟೈ ಧರಿಸಿ ಸೀರಿಯಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸದಿದ್ದರೂ, ಅದು ಪ್ರಮುಖ ಪಾತ್ರವಾಗಿರುವುದಾಗಿ ತಂಡ ಹೇಳಿದೆ.
ಸೋಶಿಯಲ್ ಮೀಡಿಯಾದಲ್ಲಿ ‘ಡೆವಿಲ್’ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ, ಇದೀಗ ಬಿಡುಗಡೆಗೊಂಡ ಪೋಸ್ಟರ್ನಲ್ಲಿ ಡಿಸೆಂಬರ್ 12ನೇ ತಾರೀಖು ಚಿತ್ರ ಬಿಡುಗಡೆ ಆಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
