ಬೆಂಗಳೂರು: ಯಾವುದೇ ಒಬ್ಬ ಸರ್ಕಾರ ನೌಕರ ಮೃತ ಪಟ್ಟರೆ ಅವರ ಸಂಬಂಧಿಕರು ಅಂದರೆ ಮಕ್ಕಳು ಅಥವಾ ಸಹೋದರ, ಸಹೋದರಿಯರು ಉದ್ಯೋಗವನ್ನು ಪಡೆದುಕೊಳ್ಳಬಹುದು.
ಹೌದು, ಸರ್ಕಾರಿ ನೌಕರರು ಅಕಸ್ಮಾತಾಗಿ ಮೃತಪಟ್ಟರೆ ಅವರ ಉದ್ಯೋಗವನ್ನು ಅವರ ಸಂಬಂಧಿಕರು ಪಡೆದುಕೊಳ್ಳಬಹುದು. ಆದರೆ ಅನುಕಂಪದ ಆಧಾರದ ಮೇಲೆ ಇನ್ಮುಂದೆ ನೇಮಕಾತಿ ಮಾಡಿಕೊಳ್ಳಬೇಕಾದರೆ ಹಲವು ಪ್ರಮುಖ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಎಂದು ರಾಜ ಸರ್ಕಾರ ಆದೇಶ ಹೊರಡಿಸಿದೆ.
ಅರ್ಜಿ ಸಲ್ಲಿಸುವವರು ಮೃತ ಸರ್ಕಾರಿ ನೌಕರರ ಮಗಳು ಅಥವಾ ಸಹೋದರ / ಸಹೋದರಿ ಆಗಿದ್ದಲ್ಲಿ, ಅವರು ಅವಿವಾಹಿತರಾಗಿರುವ ಬಗ್ಗೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕಾಗಿದೆ. ಈ ಪ್ರಮಾಣಪತ್ರವನ್ನು ಸಂಬಂಧಿತ ತಹಶೀಲ್ದಾರರು ನೀಡಬೇಕಾಗಿದೆ ಎಂದು ಸರ್ಕಾರ ತಿಳಿಸಿದೆ. ನಿಯಮ 3(2) ರನ್ವಯ ಈ ಪ್ರಮಾಣಪತ್ರವು ಅರ್ಜಿಯೊಂದಿಗೆ ಸೇರಿಸಬೇಕಾದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣ ದರಗಳ ಕುರಿತು ಚರ್ಚೆ
ಅಗತ್ಯವಿರುವ ಮುಖ್ಯ ದಾಖಲೆಗಳು
ದಿವಂಗತ ಸರ್ಕಾರಿ ನೌಕರರ ವಿವರಗಳು
ದಿವಂಗತ ನೌಕರರ ಹೆಸರು ಮತ್ತು ಅವರು ನಿರ್ವಹಿಸಿದ್ದ ಹುದ್ದೆ.
ದಿವಂಗತ ನೌಕರರ ಸೇವಾ ಪುಸ್ತಕದ ನಕಲು.
ಅರ್ಜಿದಾರರ ದಾಖಲೆಗಳು:
ಅರ್ಜಿದಾರರ ಪೂರ್ಣ ಹೆಸರು, ವಿಳಾಸ ಮತ್ತು ಹುದ್ದೆಯ ಹೆಸರು ಸ್ಪಷ್ಟವಾಗಿ ನಮೂದಿಸಿದ ಡಾಕೆಟ್ ಪತ್ರ.
ಅರ್ಜಿದಾರರ ಶೈಕ್ಷಣಿಕ ಅರ್ಹತೆಗಳ ಪ್ರಮಾಣಪತ್ರಗಳು (ಉದಾಹರಣೆಗೆ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ).
ಅರ್ಜಿದಾರರ ಗುರುತಿನ ಚೀಟಿ ಮತ್ತು ವಿಳಾಸದ ಪುರಾವೆ.
ಸಂಬಂಧದ ಪುರಾವೆ:
ದಿವಂಗತ ನೌಕರರು ಮತ್ತು ಅರ್ಜಿದಾರರ relation ಅನ್ನು ಸಾಬೀತುಪಡಿಸುವ ದೃಢೀಕೃತ ದಾಖಲೆಗಳು (ಉದಾಹರಣೆಗೆ, ವಿವಾಹ ಪ್ರಮಾಣಪತ್ರ, ಜನನ ಪ್ರಮಾಣಪತ್ರ).
ಇತರ ದಾಖಲೆಗಳು:
ಮರಣ ಪ್ರಮಾಣಪತ್ರದ ನಕಲು.
ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ನಿರ್ದಿಷ್ಟವಾಗಿ ಒದಗಿಸಲಾದ ಅರ್ಜಿ ನಮೂನೆಗಳು.
