ಬೆಂಗಳೂರು: ಇಂದಿನಿಂದ ರಾಜದಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿದೆ. ದಸರಾ ರಜೆ ಹಾಗೂ ಸಾಮಾಜಿಕ ಶೈಕ್ಷಣಿಕ ಸರ್ವೆ ರಜೆಯ ನಂತರ ವಿದ್ಯಾರ್ಥಿಗಳು ಇಂದಿನಿಂದ ಶಾಲೆಗೆ ತೆರಳಲಿದ್ದಾರೆ.
ಹೌದು, ಇಂದಿನಿಂದ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಪುನರಾರಂಭವಾಗಿದ್ದು ಎಲ್ಲ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಹಾಜರಾಗುತ್ತಿದ್ದಾರೆ.
ಇನ್ನು ಸರ್ವೆ ಕಾರ್ಯಕ್ಕಾಗಿ ಶಿಕ್ಷಣ ಇಲಾಖೆಯು ಕೆಲ ದಿನಗಳ ಕಾಲ ಶಿಕ್ಷಕರನ್ನು ಬ್ಲಾಕ್ ಮಾಡಿದುದರಿಂದ ಶಾಲೆಗಳ ಪಾಠ್ಯಕ್ರಮ ಸ್ವಲ್ಪ ತಡವಾಗಿದೆ. ಈಗ ಶಿಕ್ಷಕರನ್ನು ಸರ್ವೆ ಕಾರ್ಯದಿಂದ ಬಿಡುಗಡೆ ಮಾಡಿರುವುದರಿಂದ, ಇಂದಿನಿಂದ ವಿದ್ಯಾರ್ಥಿಗಳು ಪಾಠ್ಯಕ್ರಮವನ್ನು ಮರುಪ್ರಾರಂಭ ಮಾಡುತ್ತಿದ್ದಾರೆ. ಇದನ್ನೂ ಓದಿ: ಪೌರ ಕಾರ್ಮಿಕರು ಪರಿಸರ ಶುಭ್ರವಾಗಿಡಲು ಶ್ರಮಿಸುವ ಸೈನಿಕರು: ಟಿ.ಎ. ಶರವಣ!
ಪಠ್ಯಕ್ರಮ ಮುಗಿಸಲು ಶಿಕ್ಷಕರಿಗೆ ವಿಶೇಷ ಸೂಚನೆ
ಡಿಸೆಂಬರ್–ಜನವರಿ ಒಳಗೆ ಸಂಪೂರ್ಣ ಸಿಲಬಸ್ ಮುಗಿಸಲು ತರಬೇತಿ ತರಗತಿಗಳನ್ನು ನಡೆಸಬೇಕು.
ಒಂದು ತಿಂಗಳ ಪಾಠದ ನಷ್ಟವನ್ನು ಭರಿಸಲು ಹೆಚ್ಚುವರಿ ತರಗತಿಗಳನ್ನು ಆಯೋಜಿಸಬೇಕು.
ಬೆಳಗ್ಗೆ ಶಾಲೆ ಆರಂಭಕ್ಕೂ ಮುಂಚೆ ಅಥವಾ ಸಂಜೆ ಶಾಲೆ ಮುಗಿದ ನಂತರ ವಿಶೇಷ ತರಗತಿಗಳನ್ನು ತೆಗೆದುಕೊಂಡು ಪಾಠ್ಯಕ್ರಮ ಪೂರ್ಣಗೊಳಿಸಬೇಕು.
ಶನಿವಾರ ಅರ್ಧ ದಿನದ ಬದಲಿಗೆ ಪೂರ್ಣ ದಿನ ತರಗತಿಗಳನ್ನು ನಡೆಸಿ ಪಾಠಗಳನ್ನು ಮುಗಿಸಬೇಕು.
ತೀವ್ರ ಅಗತ್ಯವಿದ್ದರೆ ರಜಾದಿನಗಳಲ್ಲೂ ವಿಶೇಷ ತರಗತಿಗಳನ್ನು ನಡೆಸಿ ಪಾಠ್ಯಕ್ರಮ ಪೂರ್ಣಗೊಳಿಸಬಹುದು.
ಶಿಕ್ಷಣ ಇಲಾಖೆಯು ತಿಳಿಸಿರುವಂತೆ, ವಿದ್ಯಾರ್ಥಿಗಳ ಶಿಕ್ಷಣದಲ್ಲಿ ವ್ಯತ್ಯಯ ಬಾರದಂತೆ ಶಿಕ್ಷಕರು ಮತ್ತು ಪೋಷಕರ ಸಹಕಾರ ಅತ್ಯಾವಶ್ಯಕವಾಗಿದೆ.
