ಬೆಂಗಳೂರು: ವಿಧಾನ ಪರಿಷತ್ ಶಾಸಕ ಟಿ.ಎ. ಶರವಣ ಅವರು ಒಂದಲ್ಲ ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಈಗಾಗಲೇ ಸರ್ವಜನಿಕರ ಮನದಲ್ಲಿ ಹಚ್ಚ ಹಸಿರಾಗಿದ್ದರೆ.
ಹೌದು, ಶರವಣ ಅವರು ಹಬ್ಬಗಳು ಬಂತೆಂದರೆ ಸಾಕು ಸಾರ್ವಜನಿಕರ ಜೊತೆ ಬಹಳ ಕನೆಕ್ಟಿವ್ ಆಗಿರತ್ತಾರೆ. ದೀಪಾವಳಿ ಹಬ್ಬದ ಕುರಿತಾಗಿ ಬೆಂಗಳೂರು ನಗರದಲ್ಲಿರುವ ಪೌರಕಾರ್ಮಿಕರಿಗೆ ಉಡುಗೊರೆ ನೀಡಿ ಸಿಹಿಯನ್ನು ಹಂಚಿ ಗೌರವಿಸಿದ್ದಾರೆ.
ಪೌರ ಕಾರ್ಮಿಕರು ಎಂದರೆ ಕೇವಲ ಕೆಲಸಗಾರರಲ್ಲ, ಅವರು ಸ್ವಚ್ಛತೆಯ ರೂವಾರಿಗಳು ಮತ್ತು ಜನರ ಆರೋಗ್ಯ ಕಾಪಾಡುವ ದೇವರು. ಮಳೆ, ಬಿಸಿಲು, ಚಳಿ ಎನ್ನದೆ, ತಮ್ಮ ವೈಯಕ್ತಿಕ ಕಷ್ಟಗಳನ್ನು ಬದಿಗಿಟ್ಟು ನಗರದ ಪರಿಸರವನ್ನು ಶುಭ್ರವಾಗಿಡಲು ಶ್ರಮಿಸುವ ಈ ಸೈನಿಕರ ಸೇವೆ ಅನನ್ಯ ಎಂದು ಬಣ್ಣಿಸಿದರು.
ಇನ್ನು ಪೌರ ಕಾರ್ಮಿಕರು ಮಾಡುವ ಕೆಲಸದಿಂದಲೇ ನಗರದಲ್ಲಿ ರೋಗರುಜಿನಗಳು ದೂರವಾಗುತ್ತವೆ. ಹಾಗಾಗಿ ಪೌರ ಕಾರ್ಮಿಕರು ನಿಜವಾದ ಆರೋಗ್ಯ ರಕ್ಷಕರು. ನಿಮ್ಮ ಪಾದಗಳಿಗೆ ನಮಸ್ಕರಿಸುವುದು ನಮ್ಮ ಕರ್ತವ್ಯ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನು ಸದಾ ಸಿದ್ಧ ಎಂದು ಅವರು ಈ ವೇಳೆ ಶಿರಬಾಗಿ ನಮಿಸಿದರು. ಇದನ್ನೂ ಓದಿ: ಬಿಜೆಪಿ ಸಂಸದರ ಕೊಡುಗೆ ರಾಜ್ಯಕ್ಕೆ ಶೂನ್ಯ
ಹಬ್ಬದ ದಿನಗಳಲ್ಲಿ ಎಲ್ಲರೂ ತಮ್ಮ ಕುಟುಂಬದೊಂದಿಗೆ ಸಂಭ್ರಮಿಸುತ್ತಿದ್ದರೆ, ನೀವು ರಸ್ತೆಯಲ್ಲಿ ನಿಂತು ಕಸ ಗುಡಿಸುತ್ತೀರಿ. ನಿಮ್ಮ ತ್ಯಾಗಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ದೀಪಾವಳಿ ಬೆಳಕಿನ ಹಬ್ಬ. ನಿಮ್ಮ ಜೀವನದಲ್ಲಿ ಸುಖ, ಸಮೃದ್ಧಿ, ಉತ್ತಮ ಆರೋಗ್ಯದ ಬೆಳಕು ತುಂಬಲಿ ಎಂದು ನಾನು ಹಾರೈಸುತ್ತೇನೆ ಎಂದರು.
