ಚಿಕ್ಕೋಡಿ: ಇತ್ತೀಚಿನ ದಿನಗಳಲ್ಲಿ ಪ್ರೀತಿಸಿದವರ ಜೊತೆ ಓಡಿ ಹೋಗಿ ಮದುವೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಅದರಂತೆ ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ಪ್ರೀತಿಸಿದವನ ಜೊತೆ ಓಡಿ ಹೋಗಿ ಮದುವೆ ಆಗಿದ್ದಕ್ಕೆ ಹೆತ್ತ ಮಗಳು ಜೀವಂತವಾಗಿದ್ದರು ಕೂಡ ತಂದೆ ತನ್ನ ಮಗಳು ಸತ್ತು ಹೋಗಿದ್ದಾಳೆ ಎಂದು ತಿಥಿ ಊಟ ಹಾಕಿಸಿರುವ ಘಟನೆ ನಡೆದಿದೆ.
ಹೌದು, ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ಶಿವಗೌಡ ಪಾಟೀಲ್ ಎಂಬವವರು ತನ್ನ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ, ಕರುಳಬಳ್ಳಿ ಸಂಬಂಧವನ್ನ ತಂದೆ ಕತ್ತರಿಸಿಕೊಂಡಿದ್ದಾರೆ. ಶಿವಗೌಡ ಪಾಟೀಲ್ ಎಂಬವರಿಗೆ 4 ಹೆಣ್ಣುಮಕ್ಕಳಿದ್ದರು. ಕೊನೆಯ ಮಗಳು, ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ಆತನೊಂದಿಗೆ ಓಡಿಹೋಗಿದ್ದಳು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್
ಇನ್ನು ರಾಯಭಾಗ ಪೊಲೀಸ್ ಠಾಣೆಗೆ ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಮಗಳು ಓಡಿಹೋಗಿದ್ದಾಳೆ ಎಂಬ ವಿಚಾರ ತಿಳಿದ ತಂದೆ ಮನನೊಂದಿದ್ದರು. ಬಳಿಕ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು, ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭೋಜನ ಹಾಕಿಸಿ, ಆಕೆಯ ತಿಥಿ ಕಾರ್ಯವನ್ನ ಮಾಡಿ ಮುಗಿಸಿದ್ದಾರೆ.
