ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬಿಎಂಟಿಸಿ ಚಾಲಕರು ಬೇಜವಾಬ್ದಾರಿಯಿಂದ ಚಾಲನೆ ಮಾಡುವುದರಿಂದ ಸಾರ್ವಜನಿಕರ ಪ್ರಾಣಪಕ್ಷಿ ಹಾರಿ ಹೋಗುತ್ತಿದೆ.
ಹೌದು, ನಗರದಲ್ಲಿ ಬಿಎಂಟಿಸಿ ಚಾಲಕರು ಬಸ್ ಗಳನ್ನು ಚಾಲನೆ ಮಾಡುವಾಗ ಹಲವಾರು ಎಡಬಟ್ಟುಗಳನ್ನು ಮಾಡಿರೋದು ಎಷ್ಟೋ ಸಾಕ್ಷಿಗಳಿವೆ ಅದಕ್ಕೆ ಉದಾಹರಣೆ ಎಂಬಂತೆ ಇಂದು ನಡೆದ ಮಹಾ ಅಪಘಾತವೇ ದೊಡ್ಡ ಉದಾಹರಣೆಯಾಗಿದೆ.
ಎಂಜಿ ರೋಡ್ ನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸರಣಿ ಅಪಘಾತ ಸಂಭವಿಸಿದೆ. ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್, 9ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಭಯಾನಕ ಪರಿಸ್ಥಿತಿ ಉಂಟುಮಾಡಿತು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್
ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ. ಗಾಯಾಳುಗಳ ಸ್ಥಿತಿ ಹಾಗೂ ಚಾಲಕನ ಆರೋಗ್ಯ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.
