ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ನಿನ್ನೆ (ಶುಕ್ರವಾರ ಅ.10) ತಾನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯ ನಡೆಸಿತು.
ಹೌದು, ಇಷ್ಟು ದಿನ ಬಿಬಿಎಂಪಿ ಆಡಳಿತದಲ್ಲಿ ಎಲ್ಲಾ ಕೆಲಸಗಳು ನಡೆಯುತ್ತಿತ್ತು. ಆದರೆ ಇನ್ಮುಂದೆ ಜಿಬಿಎ ಡಿಯಲ್ಲಿ ಬೆಂಗಳೂರು ನಗರದ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಮಾತ್ರ ಜಿಬಿಎ ಮುಂದುವರೆಯುತ್ತದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ಜಿಬಿಎ ರದು ಪಡಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕರಾಗಿರುವಂತಹ ಅಶೋಕ್ ಅವರು ಹೇಳಿದ್ದಾರೆ. ಇದನ್ನೂ ಓದಿ: ನಶೆ ಯುವಕರ ಬದುಕನ್ನು ನರಕ ಮಾಡುತ್ತದೆ: ಬೊಮ್ಮಾಯಿ
ಈ ಕುರಿತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಂಪೇಗೌಡ ಕಟ್ಟಿದ ನಾಡನ್ನ ಒಂದೇ ಮಾಡ್ತೀವಿ. ಜಿಬಿಎ ನಾವು ರದ್ದು ಮಾಡ್ತೀವಿ. ಅಧಿಕಾರ ವಿಕೇಂದ್ರೀಕರಣ ಅಂದರೆ 5 ಪಾಲಿಕೆ ಮಾಡಿದ ಹಾಗೇ ರಾಜ್ಯವನ್ನು ಭಾಗ ಮಾಡ್ತೀರಾ? 5 ಸಿಎಂ ಆಗೋಕೆ ಒಪ್ಪುತ್ತೀರಾ? ಬೆಂಗಳೂರು ಗೆಲ್ಲೋಕೆ ಆಗೊಲ್ಲ ಅಂತ ಕಾಂಗ್ರೆಸ್ಗೆ ಗೊತ್ತು. ಅದಕ್ಕೆ ಜಿಬಿಎ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
