ಬೆಂಗಳೂರು: ಕನ್ನಡದಲ್ಲಿ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಶೋ. ಕನ್ನಡ ಬಿಗ್ ಬಾಸ್ ಶೋ 12 ಪ್ರಾರಂಭವಾಗಿ ಕೇವಲ ಒಂದು ವಾರ ಮಾತ್ರ ಕಳೆದಿದ್ದು, ಇದೀಗ ಬಿಗ್ ಬಾಸ್ ಮನೆಗೆ ಕಂಟಕ ಒಂದು ಎದುರಾಗಿದೆ.
ಹೌದು, ಕನ್ನಡ ಬಿಗ್ ಬಾಸ್ 12 ಪ್ರಾರಂಭವಾಗಿ ಕೇವಲ ಒಂದು ವಾರ ಕಳೆದಿದ್ದು ಇದೀಗ ಬಿಗ್ ಬಾಸ್ ಮನೆಗೆ ಲಾಕ್ ಜಡಿಯಲಾಗಿದೆ. ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್ ಸ್ಟುಡಿಯೋಸ್ಗೆ ಬೀಗ ಬಿದ್ದಿದ್ದು, ಅಲ್ಲೇ ನಡೆಯುವ ಬಿಗ್ಬಾಸ್ ಶೋ ಕೂಡ ಬಂದ್ ಆಗಿದೆ.
ಅಧಿಕೃತವಾಗಿ ಬಿಗ್ಬಾಸ್ ಮನೆಗೆ ಬೀಗ ಹಾಕಲಾಗಿದೆ. ಸ್ಪರ್ಧೆಯಲ್ಲಿದ್ದ ಎಲ್ಲರನ್ನೂ ರಾತ್ರಿ ಮನೆಯಿಂದ ಹೊರಹಾಕಲಾಗಿದೆ. ಸ್ವತಃ ತಹಶೀಲ್ದಾರ್ ತೇಜಸ್ವಿನಿಯವರು ಮುಂದೆ ನಿಂತು ಸ್ಪರ್ಧಿಗಳು ಹೊರಗೆ ಕರೆತಂದಿದ್ದಾರೆ. ಇದನ್ನೂ ಓದಿ: ಮಾರ್ಕ್ ಸಿನಿಮಾ; ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ಕಿಚ್ಚ
ಬಿಗ್ಬಾಸ್ ದಿಢೀರ್ ಸ್ಥಗಿತದಿಂದ ಸ್ಪರ್ಧಿಗಳು, ತಂತ್ರಜ್ಞರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಮನೆಗೆ ವಾಪಸ್ ಆಗುವಂತಾಗಿದೆ. 6 ತಿಂಗಳ ಕಾಲ 3 ಶಿಫ್ಟ್ನಲ್ಲಿ ತಂತ್ರಜ್ಞರು ಕೆಲಸ ಮಾಡುತ್ತಿದ್ದರು.
5 ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಗ್ ಬಾಸ್ ಮನೆ ನಿರ್ಮಾಣವಾಗಿತ್ತು. ಈಗ ತಾತ್ಕಾಲಿಕವಾಗಿ ಅನಾಥವಾಗಲಿದೆ. ಅರಮನೆ ವಿನ್ಯಾಸದಲ್ಲಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗಿತ್ತು. ಕಿಚ್ಚ ಸುದೀಪ್ ಆಶಯದಂತೆ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಮನೆ ನಿರ್ಮಾಣಗೊಂಡಿತ್ತು.
ಇಷ್ಟೆಲ್ಲಾ ಖರ್ಚು ಮಾಡಿ ಬಿಗ್ ಬಾಸ್ 12 ಪ್ರಾರಂಭ ಮಾಡುತ್ತಿದ್ದಂತೆ ಎರಡನೇ ವಾರದಲ್ಲಿ ಬಿಗ್ ಬಾಸ್ ಗೆ ಕಂಟಕ ಎದುರಾಗಿದ್ದು, ಇನ್ನೂ ಎಷ್ಟು ದಿನದ ನಂತರ ಬಿಗ್ ಬಾಸ್ ಮನೆ ಮತ್ತೆ ಓಪನ್ ಆಗುತ್ತದೆ ಎಂದು ಬಿಗ್ ಬಾಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
