ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಜಾಲಿವುಡ್ ಸ್ಟುಡಿಯೋಗೆ ಕಂದಾಯ ಇಲಾಖೆಯ ಅಧಿಕಾರಿಗಳು ನಿನ್ನೆ (ಮಂಗಳವಾರ ಅಕ್ಟೋಬರ್ 07) ರಂದು ಬೀಗ ಹಾಕಲಾಗಿದ್ದು, ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಕನ್ನಡ ಬಿಗ್ ಬಾಸ್ ಸೀಸನ್ 12 ಕೂಡ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು.
ಜಾಲಿವುಡ್ ಸ್ಟುಡಿಯೋ ನಿಯಮ ಪಾಲನೆ ಮಾಡದಿರುವ ಕಾರಣಕ್ಕೆ ಕಂದಾಯ ಅಧಿಕಾರಿಗಳು ಬಿಗ್ ಬಾಸ್ ಮನೆಯನ್ನು ಸೇರಿ ಲಾಕ್ ಮಾಡಿದ್ದಾರೆ. ಈಗ ತಾನೇ ಶುರುವಾಗಿದ್ದ ಬಿಗ್ ಬಾಸ್ ಮನೆಗೆ ಬಿಗ್ ಭ್ರಮೆ ಬಡದಂತಾಗಿದ್ದು ಎಲ್ಲಾ ಬಿಗ್ ಬಾಸ್ ಕಂಟೆಸ್ಟೆಂಟ್ಗಳನ್ನು ಈಗಲ್ಟನ್ ರೆಸಾರ್ಟ್ಗೆ ಶಿಫ್ಟ್ಮಾಡಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆ ಲಾಕ್ ಆಗಿದ್ದು ಯಾಕೆ ಗೊತ್ತಾ..?
ಇನು ಇನ್ನೋವಾ ಕಾರಿನಲ್ಲಿ ಸ್ಪರ್ಧಿಗಳು ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿದೆ. ಒಂದು ಕಾರಿನಲ್ಲಿ ತಲಾ 5 ಮಂದಿ ಪ್ರಯಾಣಿಸಿದರು. ಗೇಟ್ ನಂಬರ್ ಸಿ ಮೂಲಕ ಜಾಲಿವುಡ್ ಸ್ಟುಡಿಯೋದಿಂದ ಆಚೆ ಬಂದ ಬಿಗ್ ಬಾಸ್ ಸ್ಪರ್ಧಿಗಳು 5ಕ್ಕೂ ಹೆಚ್ಚು ಇನ್ನೋವಾ ಕಾರುಗಳ ಮೂಲಕ ಹೊರಟರು.
