Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಇದು ತಾಲಿಬಾನಲ್ಲ ಮಂಡ್ಯ ಜಿಲ್ಲೆ, ಇಂಥವೆಲ್ಲ ನಮ್ಮ ಜಿಲ್ಲೆಯಲ್ಲಿ ನಡೆಯೋದಿಲ್ಲ: ಶಾಸಕ ಕದಲೂರು ಉದಯ್
  • Politics
  • State

ಇದು ತಾಲಿಬಾನಲ್ಲ ಮಂಡ್ಯ ಜಿಲ್ಲೆ, ಇಂಥವೆಲ್ಲ ನಮ್ಮ ಜಿಲ್ಲೆಯಲ್ಲಿ ನಡೆಯೋದಿಲ್ಲ: ಶಾಸಕ ಕದಲೂರು ಉದಯ್

Praja Vahini September 17, 2025 1 minute read
WhatsApp Image 2025-09-17 at 15.27.23
Spread the love

ಮದ್ದೂರು: ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಶಾಸಕ ಕದಲೂರು ಉದಯ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಸ್ಥಳೀಯವಾಗಿ ಮದ್ದೂರಿಗೆ ನಾವು ಏನು ಮಾಡಬೇಕು ಅದನ್ನೆಲ್ಲವನ್ನು ಮಾಡಿದ್ದೇವೆ. ಯಾರೋ ಬಂದು ನಮ್ಮ ಮೇಲೆ ಆರೋಪ ಮಾಡುವುದು, ನಮ್ಮ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ವಿರೋಧ ಪಕ್ಷದವರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

ಮದ್ದೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಯಾರಿಗೆ ದ್ರೋಹ ಮಾಡಿದ್ದೇವೆ? ನಾವೇನಾದರೂ ಹಿಂದೂ ದ್ರೋಹಿಗಳ ಅಥವಾ ಹಿಂದೂ ವಿರೋಧಿಗಳ? ನಾವು ಕೂಡ 97% ಹಿಂದುಗಳೇ ಇರೋದು. ಇವರ್ಯಾರು ಬಂದು ನಮಗೆ ಸರ್ಟಿಫಿಕೇಟ್ ಕೊಡೋದು ಸರಿಯಲ್ಲ. ಇವರ ಬೇಳೆ ಬೇಯಿಸಿಕೊಳ್ಳೋಕೆ, ಒಬ್ಬ ತೊಡೆತಗಿತಾನಂತೆ, ಇನ್ನೊಬ್ಬ ಕತ್ತುತಗಿತಾನಂತೆ ಎಂದು ಮಾತನಾಡುತ್ತಾರೆಲ್ಲ ಇದರ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.

ಇದು ತಾಲಿಬಾನಲ್ಲ ಮಂಡ್ಯ ಜಿಲ್ಲೆ. ಇಂಥವೆಲ್ಲ ನಮ್ಮ ಜಿಲ್ಲೆಯಲ್ಲಿ ನಡೆಯೋದಿಲ್ಲ. ಅವರು ಯಾವುದೇ ಪಕ್ಷದವರಾಗಿರಲಿ ಅದ್ದೂರು ಜನ ಮಂಡ್ಯ ಜಿಲ್ಲೆಯ ಜನ ಬಹಳ ಸ್ಟ್ರಾಂಗ್ ಆಗಿದ್ದಾರೆ ಎಂದು ಹೇಳಿದರು. ಮಂಡ್ಯದ ಜನತೆಯ ಮನಸ್ಸು ಮೃದುವಾಗಿದೆ ಆದರೆ ಮಂಡ್ಯದ ಜನದ ಸಾವಾಸಕ್ಕೆ ಬಂದರೆ ಸರಿ ಇರಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ಮುಂದೆಯಾದರೂ ಇಂತಹ ಕಚಡ ಕೆಲಸವನ್ನು ಮಾಡುವುದು ಬಿಡಬೇಕು. ಯಾವುದೇ ಕಾರಣಕ್ಕೂ ಯಾವುದೇ ಕ್ಷೇತ್ರದಲ್ಲಿ ಶಾಂತಿಭಂಗ ಮಾಡುವ ಕೆಲಸವನ್ನು ಮಾಡಬಾರದು. ಅಪರಾಧ ಮಾಡಿದವರು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳೋಕೆ ಕಾನೂನು ಇದೆ, ನ್ಯಾಯಾಲಯ ಇದೆ. ಯಾವ ರೀತಿ ಶಿಕ್ಷೆ ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ತೀರ್ಮಾನಿಸುತ್ತದೆ. ನಾವು ಕಾನೂನು  ಕೈಗೆ ತೆಗೆದುಕೊಳ್ಳಲು ನಾವೆಲ್ಲರೂ ಯಾರು ಎಂದು ಪ್ರಶ್ನಿಸಿದರು. ಇದನ್ನೂಓದಿ: ಮೋದಿ ತಾಯಿಯ AI ವಿಡಿಯೋ ತೆಗೆದುಹಾಕಿ: ಹೈಕೋರ್ಟ್ ಸೂಚನೆ

ನಾವು ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಮತ್ತೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಇಂದ ಘಟನೆ ನಡೆಯದಂತೆ ನಾವು ಮುನ್ನೆಚ್ಚರಿಕೆಯ ಕ್ರಮ ವಹಿಸುತ್ತೇವೆ ಎಂದರು.  ನಮ್ಮ ಜಿಲ್ಲೆಯ ಜನ ಶಾಂತಿಯಿಂದ ಬದುಕುತ್ತಾರೆ ಹಾಗಾಗಿ ನಮ್ಮ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕೆಂದರು.

ನಮ್ಮ ಜಿಲ್ಲೆಯಲ್ಲಿರುವ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಜಿಲ್ಲೆಗೆ ಬೇರೆಯವರು ಬಂದು ನಮ್ಮ ಸಮಸ್ಯೆಯನ್ನು ಬಗೆಹರಿಸುವ ಅವಶ್ಯಕತೆ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

About the Author

Praja Vahini

Editor

View All Posts

Spread the love

Post navigation

Previous: ಮೋದಿ ತಾಯಿಯ AI ವಿಡಿಯೋ ತೆಗೆದುಹಾಕಿ: ಹೈಕೋರ್ಟ್ ಸೂಚನೆ
Next: ಪ್ರತಾಪ್ ಸಿಂಹ ಅನ್ನೋ ಹೆಸರು ಇಡುವ ಬದಲು ನಾಯಿ ಅಂತ ಹೆಸರು ಇದ್ದಿದ್ರೆ ಚೆನ್ನಾಗಿರ್ತಿತ್ತು: MLA ಉದಯ್

Views:

55

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.