ಪಾಟ್ನಾ: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆಯಿಂದ ಅನುಕೂಲ ಆಗುವುದರ ಜೊತೆಗೆ ಅನಾನುಕೂಲವೂ ಕೂಡ ನಡೆಯುತ್ತಿವೆ..
ಹೌದು, AI ತಂತ್ರಜ್ಞಾನ ಬಂದಮೇಲಂತೂ ವಿವಿಧ ಬಗೆಯ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಅದ್ರಂತೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿಯವರ AI ಆಧರಿತ ವಿಡಿಯೋವನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಕಾಂಗ್ರೆಸ್ ಗೆ ಪಾಟ್ನಾ ಹೈಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ಮಾಜಿ ಸಿಎಂ ಬ್ಯಾಂಕ್ ಖಾತೆ ಹ್ಯಾಕ್; 3 ಲಕ್ಷ ದೋಚಿದ ಸೈಬರ್ ಕಳ್ಳರು
ಬಿಹಾರ ಕಾಂಗ್ರೆಸ್ ಪೋಸ್ಟ್ ಮಾಡಿದ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಂಗ್ರೆಸ್ಗೆ ಸೂಚನೆ ನೀಡಿದೆ. ವಿರೋಧ ಪಕ್ಷವು ಪ್ರಧಾನಿಯವರ ದಿವಂಗತ ತಾಯಿಗೆ ಅಗೌರವ ತೋರಿದೆ ಎಂದು ಬಿಜೆಪಿ ಆರೋಪಿಸಿತ್ತು. ವೀಡಿಯೊದಲ್ಲಿ ಎಲ್ಲಿಯೂ ಹೀರಾಬೆನ್ ಮೋದಿಗೆ ಅಗೌರವ ತೋರಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು.
