ಮದ್ದೂರು: ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಶಾಸಕ ಕದಲೂರು ಉದಯ್ ಸುದ್ದಿಗೋಷ್ಠಿ ನಡೆಸಿ ವಿರೋಧ ಪಕ್ಷದವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೋ ಮಲೆನಾಡಿನಿಂದ ಬಂದು ಅಥವಾ ಬಯಲು ಸೀಮೆಯಿಂದ ಬಂದು ನಮಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಅವರ ತೂತುಗಳೆ ಸಾಕಷ್ಟಿವೆ. ಅವುಗಳನ್ನು ಮೊದಲು ಸರಿ ಮಾಡಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಅವನ್ಯಾರೋ ಬಂದು ಪ್ರತಾಪ್ ಸಿಂಹ ಅಂತ ಹೆಸರು ಇಟ್ಕೊಂಡಿದ್ದಾನೆ, ಅವನಿಗೆ ಪ್ರತಾಪ್ ಸಿಂಹ ಅನ್ನೋ ಹೆಸರು ಇಡುವ ಬದಲು ನಾಯಿ ಅಂತ ಹೆಸರು ಇದ್ದಿದ್ರೆ ಚೆನ್ನಾಗಿರುತ್ತಿತ್ತು ಎಂದು ಪ್ರತಾಪ್ ಸಿಂಹ ವಿರುದ್ಧ ಕೆಂಡಮಂಡಲವಾಗಿದ್ದಾರೆ.
ಪ್ರತಾಪ್ ಸಿಂಹ ಹಿನ್ನೆಲೆ ಗೊತ್ತ ಯಾರಿಗಾದರೂ? ಅವನ ಹೆಂಡತಿಯೇ ಅವನ ವಿರುದ್ಧವಾಗಿ ಬಿಜೆಪಿ ಹೈಕಮಾಂಡ್ಗೆ ದೂರು ನೀಡಲು ಹೋಗಿದ್ದರು. ಇವನು ಸರಿ ಇಲ್ಲ. ಇವನ ನಡತೆ ಸರಿ ಇಲ್ಲ ಎಂದು ಅವನ ಹೆಂಡತಿ ಬಿಜೆಪಿ ಹೈಕಮಾಂಡ್ಗೆ ದೂರಿದ್ದಾರೆ ಎಂದು ಯಾರೋ ಮೈಸೂರಿನಲ್ಲಿ ಮಾತನಾಡುತ್ತಿದ್ದರು.
ಈ ಕಾರಣಕ್ಕೋಸ್ಕರನೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅವನಿಗೆ ಉಗಿದು ಟಿಕೆಟ್ ನೀಡಿಲ್ಲ ಎಂದು ಹೇಳಿದರು. ಇಂಥವನು ಬಂದು ನಮ್ಮ ಜನಕ್ಕೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಯುವಕರ ದಾರಿ ತಪ್ಪಿಸುವ ಕೆಲಸವನ್ನು ಮಾಡುವುದರ ಜೊತೆಗೆ ಪ್ರಚೋದನಕಾರಿ ಹೇಳಿಕೆ ಹೇಳುತ್ತಿರುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಇದು ತಾಲಿಬಾನಲ್ಲ ಮಂಡ್ಯ ಜಿಲ್ಲೆ, ಇಂಥವೆಲ್ಲ ನಮ್ಮ ಜಿಲ್ಲೆಯಲ್ಲಿ ನಡೆಯೋದಿಲ್ಲ: ಶಾಸಕ ಕದಲೂರು ಉದಯ್
ಇನ್ಯಾರೋ ಬಂದು ನಾನು ವಿದೇಶಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ದೇನೆ ಎಂದು ಹೇಳಿದರು. ಆದರೆ ನಾನು ಮೋಜು ಮಸ್ತಿ ಮಾಡಲು ಹೋಗಿರಲಿಲ್ಲ. ನನ್ನ ಮಗಳ ವಿದ್ಯಾಭ್ಯಾಸ ಮತ್ತು ಅವಳ ಕಾಲೇಜ್ ಅಡ್ಮಿಷನ್ ಗೋಸ್ಕರ ನಾನು ವಿದೇಶಕ್ಕೆ ಹೋಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಆರೋಪಿಗಳನ್ನ ಬಂಧಿಸಲಾಯಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಯಶಸ್ವಿಯಾದರು. ಯಾವತ್ತು ನಡೆಯದೆ ಇರುವ ಘಟನೆ ಮದ್ದೂರಿನಲ್ಲಿ ನಡೆದಿದೆ. ಕಲ್ಲು ಹೊಡೆದ ಕಿಡಿಗೇಡಿಗಳು ಕಚಾಡಗಳು, ಅವರಿಗೆ ಕ್ಷಮೆಯೇ ಇಲ್ಲ ಎಂದರು.
