Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಮುರಿದು ಬಿದ್ದ ವಿದ್ಯುತ್ ಕಂಬ ತೆರವು ಕಾರ್ಯಚರಣೆ: ಸ್ನೇಹಲ್ ಆರ್
  • Bangalore
  • State

ಮುರಿದು ಬಿದ್ದ ವಿದ್ಯುತ್ ಕಂಬ ತೆರವು ಕಾರ್ಯಚರಣೆ: ಸ್ನೇಹಲ್ ಆರ್

admin August 8, 2025
WhatsApp Image 2025-08-08 at 15.50.46
Spread the love

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ವಿಪರೀತ ಮಳೆ ಯಾಗುತ್ತಿದ್ದು, ಇದರಿಂದ ವಿದ್ಯುತ್ ಕಂಬಗಳು ಮುರಿದು ಬಿದ್ದು ಅದೆಷ್ಟೋ ತೊಂದರೆಗಳಾಗುತ್ತಿವೆ. ವಿದ್ಯುತ್ ಕಂಬ ಹರಿದು ಬಿದ್ದು ಯಾವುದೇ ರೀತಿ ತೊಂದರೆಯಾಗದಂತೆ ಇಂದು (ಶುಕ್ರವಾರ ಆಗಸ್ಟ್‌ 08) ಪೂರ್ವ ವಲಯ ವ್ಯಾಪ್ತಿಯ ಸಿ.ವಿ. ರಾಮನ್ ರಸ್ತೆಯಿಂದ ಮೆಖ್ರಿ ವೃತ್ತದ ದಿಕ್ಕಿನಲ್ಲಿ ಬಲಭಾಗದಲ್ಲಿರುವ ಮುರಿದು ಬಿದ್ದ ವಿದ್ಯುತ್ ಕಂಬಗಳು ಹಾಗೂ ಹಾನಿಗೊಂಡ ಸೂಚನಾ ಫಲಕಗಳನ್ನು ತಕ್ಷಣವೇ ತೆರವುಗೊಳಿಸಲು ಪೂರ್ವ ವಲಯ ಆಯುಕ್ತರಾದ ಶ್ರೀಮತಿ ಸ್ನೇಹಲ್ ಆರ್. ರವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ನಡೆದ ಸ್ಥಳ ಪರಿಶೀಲನೆ ವೇಳೆ, ವಲಯ ಆಯುಕ್ತರು ಮೆಖ್ರಿ ವೃತ್ತ, ಹೆಚ್.ಕ್ಯೂ.ಟಿ.ಸಿ. ಹಾಗೂ ಪ್ಯಾಲೆಸ್ ರೋಡ್‌ ಪ್ರದೇಶಗಳಲ್ಲಿ ಕಂಡುಬಂದ ಸ್ವಚ್ಛತೆ ಮತ್ತು ನಿರ್ವಹಣಾ ಸಮಸ್ಯೆಗಳ ಕುರಿತು ಹಲವು ತುರ್ತು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದರು.

ಡ್ರೈನ್ ಸ್ಲ್ಯಾಬ್ ಸುತ್ತಲಿನ ಜಲ್ಲಿ‌ ತೆರವಿಗೆ ಸೂಚನೆ

ಹೆಚ್.ಕ್ಯೂ.ಟಿ.ಸಿ. ಗೇಟಿನ ಸಮೀಪದ ಪ್ರದೇಶದಲ್ಲಿ ಹೊಸದಾಗಿ ಅಳವಡಿಸಲಾದ ಡ್ರೈನ್ ಸ್ಲ್ಯಾಬ್ ಸುತ್ತಲಿನ ಸಣ್ಣ ಕಲ್ಲುಗಳು ಹಾಗೂ ಜಲ್ಲಿಯನ್ನು ತಕ್ಷಣವೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಸುರಕ್ಷತೆಗಾಗಿ ಹೆಚ್.ಕ್ಯೂ.ಟಿ.ಸಿ ಮುಂಭಾಗದಲ್ಲಿನ ಫುಟ್‌ಪಾತ್ ಮರುಸ್ಥಾಪಿಸುವಂತೆ ವಲಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದನ್ನೂ ಓದಿ: ದೇಶರಕ್ಷಣೆಗಾಗಿ ತ್ಯಾಗ, ಬಲಿದಾನಗೈದಿದ್ದು ಕಾಂಗ್ರೆಸ್ ಪಕ್ಷ: ಸಿಎಂ

ಸಿಮೆಂಟ್ ಬೌಲ್ಡರ್ ತೆರವಿಗೆ ಸೂಚನೆ

ಮೆಖ್ರಿ ವೃತ್ತದ ಫುಟ್‌ಪಾತ್ ಬಳಿಯ ಸಿಮೆಂಟ್ ಬೌಲ್ಡರ್‌ಗಳನ್ನು ತೆಗೆದು ಹಾಕಿ, ಪಾದಚಾರಿ ಮಾರ್ಗ ಮತ್ತು ಕರ್ಬ್‌ಗಳನ್ನು ಸ್ವಚ್ಛಗೊಳಿಸುವಂತೆ ಅವರು ನಿರ್ದೇಶಿಸಿದರು.

ಪ್ಯಾಲೆಸ್ ಗುಟ್ಟಹಳ್ಳಿ ಫ್ಲೈಓವರ್ ಸ್ವೀಪಿಂಗ್ ಕಾರ್ಯ

ಪ್ಯಾಲೆಸ್ ಗುಟ್ಟಹಳ್ಳಿ ಫ್ಲೈಓವರ್ ಮೇಲೆ ಹಾಗೂ ಕೆಳಭಾಗದಲ್ಲೂ ಸ್ವಚ್ಛತಾ ಕಾರ್ಯಗಳನ್ನು ನಿರಂತರವಾಗಿ ನಡೆಸುವಂತೆ ಹಾಗೂ ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೋರ್ಶೆ ಶೋರೂಮ್‌ ಎದುರು ಭಾಗದಲ್ಲಿರುವ  ಅನುಪಯುಕ್ತ ತಂತಿಗಳು, ತ್ಯಾಜ್ಯ, ಕಸ ಮತ್ತು ಮುರಿದ ಸಾಮಗ್ರಿಗಳನ್ನು ತೆಗೆದು ಹಾಕಿ ಸಾರ್ವಜನಿಕರಿಗೆ ಅಡೆತಡೆಯಿಲ್ಲದ ಪಾದಾಚಾರಿ ಮಾರ್ಗ ಖಚಿತಪಡಿಸಲು ಸೂಚಿಸಿದರು.

ರಸ್ತೆಗಳು ಮತ್ತು ಪಾದಚಾರಿ ಮಾರ್ಗದ ಮೇಲಿನ ಜಲ್ಲಿ ಕಲ್ಲಿನ ತೆರವಿಗೆ ಸೂಚನೆ

ರಸ್ತೆಯ ಮೇಲಿನ ಹಾಗೂ ಪಾದಚಾರಿ ಮಾರ್ಗದಲ್ಲಿನ ಜಲ್ಲಿ, ಸಣ್ಣ ಕಲ್ಲುಗಳು, ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಪೌರಕಾರ್ಮಿಕರಿಗೆ ಸೂಚನೆ ನೀಡಿದರು.

.

About the Author

admin

Administrator

Visit Website View All Posts

Spread the love

Post navigation

Previous: ದೇಶರಕ್ಷಣೆಗಾಗಿ ತ್ಯಾಗ, ಬಲಿದಾನಗೈದಿದ್ದು ಕಾಂಗ್ರೆಸ್ ಪಕ್ಷ: ಸಿಎಂ
Next: ಬಿಜೆಪಿಗರ ಕರಾಳ ಬಂಡವಾಳ ಬಯಲು: ಹೆಚ್ ಸಿ ಮಹದೇವಪ್ಪ

Views:

15

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.