Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಲೋಕಾಯುಕ್ತ; ಒಟ್ಟು 34.90 ಕೋಟಿ ಜಪ್ತಿ!
  • Bangalore
  • State

ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಲೋಕಾಯುಕ್ತ; ಒಟ್ಟು 34.90 ಕೋಟಿ ಜಪ್ತಿ!

admin June 25, 2025 1 minute read
Spread the love

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು (ಮಂಗಳವಾರ ಜೂನ್‌ 24) ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದು, ಒಟ್ಟು 34.90 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಅಧಿಕಾರದ ಅಹಂನಲ್ಲಿ ಮನಬಂದಂತೆ ಆಸ್ತಿ ಮಾಡಿದ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಮುಲಾಜಿಲ್ಲದೆ ಚಳಿ ಬಿಡಿಸಿದ್ದಾರೆ. ಅದರಲ್ಲೂ ಕೂಡ ಗದಗ ಪಟ್ಟಣ ಪೊಲೀಸ್ ನಿರೀಕ್ಷಕ ಗದಗ ಟೌನ್ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಐ ಡಿಬಿ ಪಾಟೀಲ್ ಅವರಿಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಂತೂ ಎಷ್ಟೋ ನೋಂದಜೀವಗಳಿಗೆ ನೆಮ್ಮದಿ ಸಿಕ್ಕಂತಾಗಿದೆ.

ಶಹರ ಪೊಲೀಸ್ ಠಾಣೆ ಸಿಪಿಐ ಡಿ.ಬಿ ಪಾಟೀಲ ಇವರು ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ದಾಳಿ ಮಾಡಲಾಗಿದೆ. ಡಿ.ಬಿ ಪಾಟೀಲಗೆ ಸಂಬಂಧಿಸಿದ 7 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಶಿವಾನಂದ ನಗರದ ಬಾಡಿಗೆ ಮನೆ, ಶಹರ ಪೊಲೀಸ್ ಠಾಣೆ ಕಚೇರಿ, ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳ ಮೇಲೂ ದಾಳಿ ಮಾಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳಿಂದ ಇಂಚಿಂಚು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗದಗ ಶಹರ್ ಠಾಣೆಯ ಸಿಪಿಐ ಡಿಬಿ ಪಾಟೀಲ್ ಚಳಿ ಬಿಡಿಸಿದ ಲೋಕಾಯುಕ್ತ

ಅಲ್ಲದೆ ಶೌಚಾಲಯಕ್ಕೆ ಹೋದರು ಬಿಡದ ಲೋಕಾಯುಕ್ತ ಅಧಿಕಾರಿಗಳು. ಮನೆಯ ಹೊರಗಡೆ ಶೌಚಾಲಯದಲ್ಲಿ ಕುಳಿತುಕೊಂಡಿದ್ದ ಸಿಪಿಐ. ಇದನ್ನು ಗಮನಿಸಿದ ಲೋಕಾ ಅಧಿಕಾರಿಗಳು ಶೌಚಾಲಯ ಬಳಿ ಬಂದು ಕಿವಿ ಕೊಟ್ಟು ಕೇಳಿದರು. ಮೊಬೈಲ್ ನಲ್ಲಿ ಏನಾದರೂ ಮಾತನಾಡುತ್ತಿದ್ದಾರೆ ಎಂದು ಡೋರ್ ಗೆ ಕಿವಿಕೊಟ್ಟು ಕೇಳ್ತಾಯಿದ್ದರು. ಡೋರ್ ಬಡೆದು ಕೂಡಲೇ ಶೌಚಾಲಯದಿಂದ ಹೊರಗಡೆ ಬಂದ ಡಿ.ಬಿ ಪಾಟೀಲರಿಗೆ ಲೋಕಾಯುಕ್ತ ಅಧಿಕಾರಿಗಳ ನಡೆ ನೋಡಿ ಬೆಚ್ಚಿ ಬಿದ್ದಿದ್ದಾರೆ.

ದಾಳಿಗೊಳಗಾದ ಅಧಿಕಾರಿಗಳ ವಿವರ:

ಡಿ.ಬಿ.ಪಾಟೀಲ್, ಪೊಲೀಸ್ ನಿರೀಕ್ಷಕ, ಗದಗ ಟೌನ್ ಪೊಲೀಸ್ ಠಾಣೆ:

ಆರೋಪಿತ ಪೊಲೀಸ್ ಅಧಿಕಾರಿಗೆ ಸೇರಿದ ಒಟ್ಟು 8 ಕಡೆಗಳಲ್ಲಿ ದಾಳಿ. 4 ನಿವೇಶನಗಳು, 1 ವಾಸದ ಮನೆ, 4.89 ಲಕ್ಷ ನಗದು, 27 ಲಕ್ಷದ ಮೌಲ್ಯದ ಚಿನ್ನಾಭರಣ, 10 ಲಕ್ಷದ ಮೌಲ್ಯದ ವಾಹನಗಳು, 7 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು 1.48 ಕೋಟಿ ಆಸ್ತಿ ಪತ್ತೆ.

ಕೆ.ಜಿ.ಅಮರನಾಥ್, ಮುಖ್ಯಾಧಿಕಾರಿ ಪುರಸಭೆ, ಅನೇಕಲ್, ಬೆಂಗಳೂರು ಗ್ರಾಮಾಂತರ:

ಒಟ್ಟು 3 ಕಡೆಗಳಲ್ಲಿ ದಾಳಿ. ಆರೋಪಿತ ಅಧಿಕಾರಿಯ 2 ನಿವೇಶನಗಳು, 1 ವಾಸದ ಮನೆ, 14.75 ಲಕ್ಷ ನಗದು, 40 ಲಕ್ಷದ ಮೌಲ್ಯದ ಚಿನ್ನ, 38 ಲಕ್ಷ ಮೌಲ್ಯದ ವಾಹನಗಳು, 12 ಲಕ್ಷದ ಬೆಲೆಯ ಇತರ ವಸ್ತುಗಳು ಸೇರಿ ಒಟ್ಟು 3.85 ಕೋಟಿ ಆಸ್ತಿ ಪತ್ತೆ.

ಪ್ರಕಾಶ್, ಕೆ.ಎಸ್.ಇ.ಇ. ಬಿಬಿಎಂಪಿ ಗೋವಿಂದರಾಜನಗರ, ಪಶ್ಚಿಮ ಬೆಂಗಳೂರು:

ಇವರಿಗೆ ಸಂಬಂಧಿಸಿದ 6 ಕಡೆಗಳಲ್ಲಿ ಶೋಧ ಕಾರ್ಯ, 3 ನಿವೇಶನಗಳು, 2 ವಾಸದ ಮನೆ, 1 ಎಕರೆ ಕೃಷಿ ಜಮೀನು, 42 ಸಾವಿರ ನಗದು ಪತ್ತೆ, 43 ಲಕ್ಷದ ಮೌಲ್ಯದ ಚಿನ್ನಾಭರಣ, 15.70 ಲಕ್ಷ ಬೆಲೆಯ ವಾಹನಗಳು, 88.20 ಲಕ್ಷ ಬೆಲೆಬಾಳುವ ವಸ್ತುಗಳು ಸೇರಿ ಒಟ್ಟು 5.70 ಕೋಟಿ ಆಸ್ತಿ ಪತ್ತೆ.

ಮಲ್ಲಿಕಾರ್ಜುನ ಅಲ್ಲಿಪುರು, ಇ.ಇ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಲಬುರಗಿ

ಒಟ್ಟು 4 ಕಡೆಗಳಲ್ಲಿ ದಾಳಿ. 1 ನಿವೇಶನ, 3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು, 2.80 ಲಕ್ಷ ರೂ.ನಗದು, ಬ್ಯಾಂಕ್ ಖಾತೆಯಲ್ಲಿ 64.75 ಲಕ್ಷ ಹಣ, 1 ಕೋಟಿ ಮೌಲ್ಯದ ಚಿನ್ನಾಭರಣ, 35 ಲಕ್ಷ ಮೌಲ್ಯದ ವಾಹನಗಳು, 40 ಲಕ್ಷ ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 6.32 ಕೋಟಿ ಆಸ್ತಿ ಪತ್ತೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು ಹಲವೆಡೆ ಲೋಕಾಯುಕ್ತ ದಾಳಿ

ರಾಮಚಂದ್ರ ಮಸರಕಲ್, ಪಿಡಿಒ, ಸಣ್ಣೂರು ಗ್ರಾಮ ಪಂಚಾಯಿತಿ, ಕಲಬುರಗಿ:

4 ಸ್ಥಳಗಳಲ್ಲಿ ದಾಳಿ. 3 ನಿವೇಶನಗಳು, 3 ವಾಸದ ಮನೆಗಳು, 35 ಎಕರೆ ಕೃಷಿ ಜಮೀನು, 1 ಲಕ್ಷ ನಗದು, 8.50 ಲಕ್ಷ ಮೌಲ್ಯದ ಚಿನ್ನ, 18 ಲಕ್ಷ ಮೌಲ್ಯದ ವಾಹನಗಳು, 20.95 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ ಒಟ್ಟು 2.18 ಕೋಟಿ ಆಸ್ತಿ ಪತ್ತೆ.

ರಾಮಚಂದ್ರ ಮಸರಕಲ್, ಪಿಡಿಒ, ಸಣ್ಣೂರು ಗ್ರಾಮ ಪಂಚಾಯಿತಿ, ಕಲಬುರಗಿ:

4 ಸ್ಥಳಗಳಲ್ಲಿ ದಾಳಿ. 3 ನಿವೇಶನಗಳು, 3 ವಾಸದ ಮನೆಗಳು, 35 ಎಕರೆ ಕೃಷಿ ಜಮೀನು, 1 ಲಕ್ಷ ನಗದು, 8.50 ಲಕ್ಷ ಮೌಲ್ಯದ ಚಿನ್ನ, 18 ಲಕ್ಷ ಮೌಲ್ಯದ ವಾಹನಗಳು, 20.95 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ ಒಟ್ಟು 2.18 ಕೋಟಿ ಆಸ್ತಿ ಪತ್ತೆ.

ಡಾ.ಪ್ರದೀಪ್, ಪ್ರಾಧ್ಯಾಪಕ, ಕೋ-ಆರ್ಡಿನೇಟರ್, ಎಡಿಆರ್, ಕೆಎಸ್ಎನ್​ಯುಎಹೆಚ್ಎಸ್, ಶಿವಮೊಗ್ಗ

ಆರೋಪಿತರಿಗೆ ಸೇರಿದ ಒಟ್ಟು 6 ಕಡೆಗಳಲ್ಲಿ ದಾಳಿ. ಈ ವೇಳೆ 5 ನಿವೇಶನಗಳು, 1 ವಾಸದ ಮನೆ, 16.7 ಎಕರೆ ಕೃಷಿ ಜಮೀನು, 10 ಸಾವಿರ ನಗದು, 34.75 ಲಕ್ಷದ ಚಿನ್ನ, 30 ಲಕ್ಷ ಮೌಲ್ಯದ ವಾಹನಗಳು, 25 ಸಾವಿರ ರೂ. ವಿದೇಶಿ ಕರೆನ್ಸಿಗಳು, 15.50 ಲಕ್ಷ ಮೌಲ್ಯದ ಮೇಕೆ ಹಾಗೂ ಹಸುಗಳು, 50 ಲಕ್ಷದ ಮೌಲ್ಯದ ಫಾರ್ಮ್ ಹೌಸ್, 29.75 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್, 28.75 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ಸೇರಿ 6.34 ಕೋಟಿ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಮಚಂದ್ರ ಮಸರಕಲ್, ಪಿಡಿಒ, ಸಣ್ಣೂರು ಗ್ರಾಮ ಪಂಚಾಯಿತಿ, ಕಲಬುರಗಿ:

4 ಸ್ಥಳಗಳಲ್ಲಿ ದಾಳಿ. 3 ನಿವೇಶನಗಳು, 3 ವಾಸದ ಮನೆಗಳು, 35 ಎಕರೆ ಕೃಷಿ ಜಮೀನು, 1 ಲಕ್ಷ ನಗದು, 8.50 ಲಕ್ಷ ಮೌಲ್ಯದ ಚಿನ್ನ, 18 ಲಕ್ಷ ಮೌಲ್ಯದ ವಾಹನಗಳು, 20.95 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ ಒಟ್ಟು 2.18 ಕೋಟಿ ಆಸ್ತಿ ಪತ್ತೆಯಾಗಿದೆ.

About the Author

admin

Administrator

Visit Website View All Posts

Spread the love

Post navigation

Previous: ಸ್ಥಳ ನಮೂದಿಸುವಲ್ಲಿ ಎಡವಟ್ಟು, ಮತ್ತೊಬ್ಬರಿಂದ ಹಣ ಬಳಕೆ ಲೋಕಾಯುಕ್ತ ವರೆಗೆ ದೂರು 
Next: ಅಡ್ಜಸ್ಟ್ಮೆಂಟ್ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ: ಎಂಬಿ ಪಾಟೀಲ್!

Views:

21

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.