Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಸ್ಥಳ ನಮೂದಿಸುವಲ್ಲಿ ಎಡವಟ್ಟು, ಮತ್ತೊಬ್ಬರಿಂದ ಹಣ ಬಳಕೆ ಲೋಕಾಯುಕ್ತ ವರೆಗೆ ದೂರು 
  • Crime
  • State

ಸ್ಥಳ ನಮೂದಿಸುವಲ್ಲಿ ಎಡವಟ್ಟು, ಮತ್ತೊಬ್ಬರಿಂದ ಹಣ ಬಳಕೆ ಲೋಕಾಯುಕ್ತ ವರೆಗೆ ದೂರು 

admin June 24, 2025 1 minute read
Spread the love

ಶಹಾಪುರ: ತಾಲೂಕಿನ ರಸ್ತಾಪೂರ ಗ್ರಾಮ ಪಂಚಾಯಿತಿಯ ರಸ್ತಾಪೂರ ಗ್ರಾಮದಲ್ಲಿ ಒಂದೇ ಹೆಸರಿನ ಮೇಲೆ ಶಾರದಹಳ್ಳಿ ಗ್ರಾಮದ ಬೇರೆ ವ್ಯಕ್ತಿಯ ಹೆಸರಿನ ಮೇಲೆ ಜಿಪಿಎಸ್ ಮಾಡಿ ದೇವರಾಜ ಅರಸು ನಿಗಮದ ವಸತಿ ಯೋಜನೆಯ ಹಣವನ್ನು ಪಡೆದುಕೊಂಡಿದ್ದು ಈ ಕುರಿತು ಲೋಕಯುಕ್ತರ ವರೆಗೆ ದೂರು ಮತ್ತು ಇಓ ಅವರ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲಾ ಎಂದು ನೊಂದ ಫಲಾನುಭವಿ ದೇವಿಂದ್ರಪ್ಪ ಯಲ್ಲಪ್ಪ ರಸ್ತಾಪೂರ ಅವರು ಆರೋಪಿಸಿದ್ದಾರೆ.
ಘಟನೆ ವಿವರ;
2021-22 ಸಾಲಿನಲ್ಲಿ ರಸ್ತಾಪುರ ಗ್ರಾಮದ ನಿವಾಸಿ ದೇವಿಂದ್ರಪ್ಪ ಯಲ್ಲಪ್ಪ ಹೆಸರಿನ ಮೇಲೆ ಶಾರದಹಳ್ಳಿ ಗ್ರಾಮದ ಒಂದೇ ಹೆಸರಿನ ಬೇರೆ ವ್ಯಕ್ತಿ ದೇವಪ್ಪ ತಂದೆ ಯಲ್ಲಪ್ಪ ಹೆಸರಿನ ಮೇಲೆ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿಕೊಂಡು ಜಿಪಿಎಸ್ (ಫಲಾನುಭವಿ ಸಂಖ್ಯೆ 462036) ಮಾಡಿ ಹಣವನ್ನು ಪಡೆದು ಕೊಂಡಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುಖಾಂತರ ದೇವರಾಜ ಅರಸು ವಸತಿ ನಿಗಮದಿಂದ ಆಯ್ಕೆಯಾಗಿದ್ದು, ನಮೂದು ಪ್ರಕ್ರಿಯೆ ಸಮಯದಲ್ಲಿ ದೇವರಾಜ ಅರಸು ನಿಗಮದಿಂದ ರಸ್ತಾಪೂರ ಗ್ರಾಮ ಪಂಚಾಯಿತಿ ಬದಲು ಶಾರದಹಳ್ಳಿ ಗ್ರಾಮ ಎಂದೂ ನಮೂದಿಸಿದ್ದು, ಅದೇ ಸಮುದಾಯದ ದೇವಿಂದ್ರಪ್ಪ ತಂದೆ ಯಲ್ಲಪ್ಪ ಹೆಸರಿನ ಮತ್ತೊರ್ವ ವ್ಯಕ್ತಿ ಶಾರದಹಳ್ಳಿ ಗ್ರಾಮದಲ್ಲಿ ಇದ್ದು, ಈ ವ್ಯಕ್ತಿ ಕೂಡ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಸತಿಗಾಗಿ ಅರ್ಜಿ ಸಲ್ಲಿಸಿದ್ದು, ನಿಗಮದಿಂದ ಮಂಜೂರಾದ ವಸತಿಯನ್ನು ತನಗೆ ಮಂಜೂರಾಗಿದೆ ಎಂದು ಭಾವಿಸಿ ಸ್ಥಳ ಜಿಪಿಎಸ್ ಮಾಡಿಸಿ ಹಂತವಾರು ಮನೆ ನಿರ್ಮಿಸಿಕೊಂಡು ಅನುದಾನ ಪಡೆದು ಕೊಂಡಿದ್ದಾರೆ.
ಶಾರದಹಳ್ಳಿ ಗ್ರಾಮದ ದೇವಿಂದ್ರಪ್ಪ ತಂದೆ ಯಲ್ಲಪ್ಪ ಅನುದಾನವನ್ನು ಪಡೆದುಕೊಂಡ ವಿವರವನ್ನು ಡಿಲೀಟ್ ಮಾಡಿ ರಸ್ತಾಪುರ ಗ್ರಾಮದ ದೇವಿಂದ್ರಪ್ಪ ತಂದೆ ಯಲ್ಲಪ್ಪ ಅವರಿಗೆ ಮಂಜೂರಿ ಮಾಡಿಕೊಡಬೇಕು ಎಂದು ನಿತ್ಯ ಜಿ.ಪಂ ಕಾರ್ಯಲಯ, ತಾ.ಪಂ ಇಓ ಅವರ ಕಚೇರಿಗೆ ನಿತ್ಯ ಅಲೆದಾಡಿದರು ಸೂಕ್ತ ಸ್ಫಂದನೆ ಸಿಗುತ್ತಿಲ್ಲಾ, ಆದ್ದರಿಂದ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ನೊಂದ ದೇವಿಂದ್ರಪ್ಪ ರಸ್ತಾಪುರ ಮನವಿ ಮಾಡಿದ್ದಾರೆ.
ಜನರಿಗೆ ವಂಚಿಸಿ ಹಣದ ಬೇಡಿಕೆ
ತಾಲೂಕಿನಾದ್ಯಂತ ಕೇಲ ಗ್ರಾ.ಪಂಗಳ ಪಿಡಿಓಗಳು ಗ್ರಾ.ಪಂ ಸದಸ್ಯರು ಮತ್ತು ಜನರಿಗೆ ವಂಚಿಸಿ ಹಣದ ಬೇಡಿಕೆ ಇಟ್ಟು ಮನೆಗಳನ್ನು ಮಂಜೂರಿ ಮಾಡಿಸಿಕೊಡುವ ಆಮಿಷ ತೋರಿಸಿ ಲಕ್ಷಾನುಗಟ್ಟಲೆ ಹಣ ಪಡೆದಿದ್ದಾರೆ. ಈಗಾಗಲೇ ಸಗರ, ಕನ್ಯಾಕೊಳ್ಳೂರ ಗ್ರಾ.ಪಂ ವ್ಯಾಪ್ತಿಯಲ್ಲಿ 15 ನೇ ಹಣಕಾಸು ಯೋಜನೆ ಯಡಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ಲೂಟಿ ಹೊಡೆದಿದ್ದು ತನಿಖೆ ಆಗಬೇಕು ಎಂದು ದಲಿತ ಮುಖಂಡ ಶರಣು ಸಗರ ಆಗ್ರಹಿಸಿದ್ದಾರೆ.
 ಜಿ.ಪಂ, ತಾ.ಪಂ, ಗ್ರಾ.ಪಂ ಕಚೇರಿಗೆ ಅಲೆದು ಸಾಕಾಗಿದೆ
2021-22ನೇ ಸಾಲಿನಲ್ಲಿ ಶಾರದಹಳ್ಳಿಯ ನನ್ನದೇ ಹೆಸರಿರುವ ದೇವಪ್ಪ ಎನ್ನುವ ವ್ಯಕ್ತಿಯ ಹೆಸರಿಗೆ ಮನೆ ಮಂಜೂರಿಯಾಗಿದೆ. ನಿಗಮದಲ್ಲಿ ಎಲ್ಲಾ ದಾಖಲಾತಿಗಳು ನನ್ನದೇ ಇದೆ. ನನ್ನ ದಾಖಲಾತಿಯೇ ಮೇಲೆಯೇ ಹಣ ಪಡೆದಿದ್ದಾನೆ. ಕಳೆದ 4 ವರ್ಷದಿಂದ ಜಿ.ಪಂ, ತಾ.ಪಂ, ಗ್ರಾ.ಪಂ ಕಚೇರಿಗೆ ಅಲೆದು ಸಾಕಾಗಿದೆ. ದಯಾಮಾಡಿ ನನಗೆ ನ್ಯಾಯ ಒದಗಿಸಿಕೊಡಿ ದೇವಿಂದ್ರಪ್ಪ ಯಲ್ಲಪ್ಪ ರಸ್ತಾಪುರ ನೊಂದ ವ್ಯಕ್ತಿ ಹೇಳಿದ್ದಾರೆ.

About the Author

admin

Administrator

Visit Website View All Posts

Spread the love

Post navigation

Previous: ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವರನ್ನ ಭೇಟಿಮಾಡಿದ ಸಿಎಂ
Next: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಲೋಕಾಯುಕ್ತ; ಒಟ್ಟು 34.90 ಕೋಟಿ ಜಪ್ತಿ!

Views:

14

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.