Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಗದಗ ಶಹರ್ ಠಾಣೆಯ ಸಿಪಿಐ ಡಿಬಿ ಪಾಟೀಲ್ ಚಳಿ ಬಿಡಿಸಿದ ಲೋಕಾಯುಕ್ತ
  • Crime
  • Front news
  • State

ಗದಗ ಶಹರ್ ಠಾಣೆಯ ಸಿಪಿಐ ಡಿಬಿ ಪಾಟೀಲ್ ಚಳಿ ಬಿಡಿಸಿದ ಲೋಕಾಯುಕ್ತ

admin June 24, 2025
Spread the love

ಗದಗ: ಲೋಕಾಯುಕ್ತ ಅಧಿಕಾರಿಗಳು ಇಂದು ಭ್ರಷ್ಟ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದಾರೆ. ಗದಗ ಶಹರ್ ಪೊಲೀಸ್ ಠಾಣೆಯ ಸಿಪಿಐ ಡಿಬಿ ಪಾಟೀಲ್ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ ಆರೋಪದ ಮೇಲೆ ಸಿಪಿಐ ಡಿ ಬಿ ಪಾಟೀಲ್ ಮನೆ ಸೇರಿದಂತೆ ಸುಮಾರು 7 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಯೆಸ್… ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಆದಾಯಕ್ಕೂ ಮೀರಿ ಆಸ್ತಿ ಮಾಡಿದ ಗದಗ ಶಹರ್ ಠಾಣೆಯ ಸಿಪಿಐ ಡಿಬಿ ಪಾಟೀಲ್ ಅವರ ವಿರುದ್ಧ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ಬಾಗಲಕೋಟೆಗಳಲ್ಲಿರುವ ಮನೆಗಳ ಮೇಲು ಲೋಕ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಗಡ ಗಡ ನಡುಗಿದ ಡಿ ಬಿ ಪಾಟೀಲ್, ಅಧಿಕಾರಿಗಳ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟದ ಭಾಗವಾಗಿ ಪ್ರಭಾವಿ ಅಧಿಕಾರಿಗಳನ್ನೂ ನಿಗಾದಲ್ಲಿ ತೆಗೆದುಕೊಳ್ಳುತ್ತಿರುವ ಲೋಕಾಯುಕ್ತ ಸಂಚಲನಕಾರಿ ಕ್ರಮದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಗದಗಿನ ಶಿವಾನಂದ ನಗರದಲ್ಲಿರುವ ಡಿ.ಬಿ. ಪಾಟೀಲ ವಾಸಿಸುತ್ತಿರುವ ಬಾಡಿಗೆ ಮನೆಯ ಮೇಲೆಯೂ ಪರಿಶೀಲನೆ ನಡೆದಿದೆ. ಅಲ್ಲದೆ, ಪಾಟೀಲರ ಮೂಲ ವಾಸಸ್ಥಳಗಳಾದ ಬಾಗಲಕೋಟೆ, ಜಮಖಂಡಿ ಮತ್ತು ಕೆರೂರ ಪ್ರದೇಶದಲ್ಲಿರುವ ಅವರ ಸ್ವಂತ ಮನೆಗಳ ಮೇಲೆಯೂ ಏಕಕಾಲದಲ್ಲಿ ತಪಾಸಣೆ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು ಹಲವೆಡೆ ಲೋಕಾಯುಕ್ತ ದಾಳಿ

ಈ ಕಾರ್ಯಾಚರಣೆಗೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಅವರ ನೇತೃತ್ವವಿದ್ದು, ಅವರೊಂದಿಗೆ ಪಿ.ಎಸ್. ಪಾಟೀಲ, ಸಿಪಿಐ ಪರಶುರಾಮ ಕವಟಗಿ ಹಾಗೂ ಲೋಕಾಯುಕ್ತ ವಿಭಾಗದ ಇತರ ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದಾರೆ.

ಆಪ್ತ ವೃತ್ತಗಳಿಂದ ಲಭಿಸಿದ ಮಾಹಿತಿ ಪ್ರಕಾರ, ಡಿ.ಬಿ. ಪಾಟೀಲ ಮೇಲೆ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಪ್ರಾಥಮಿಕ ತನಿಖೆಯ ಬಳಿಕ ಲೋಕಾಯುಕ್ತ ಇಲಾಖೆ ಈಗ ಕಠಿಣ ಕ್ರಮ ಕೈಗೊಂಡಿರುವುದು ಸ್ಪಷ್ಟವಾಗಿದೆ.

About the Author

admin

Administrator

Visit Website View All Posts

Spread the love

Post navigation

Previous: ರಾಷ್ಟ್ರಪತಿಗಳ ಭೇಟಿಮಾಡಿದ ಸಿಎಂ
Next: ನ್ಯೂ ಲುಕ್ ನಲ್ಲಿ ಚಿಕ್ಕಣ್ಣ ಫುಲ್ ಶೈನಿಂಗ್!

Views:

34

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.