ನಿಮ್ಮ ಓಣಿಯಲ್ಲೇ ಮುಂಜಾನೆ ಕಿರಾಣಿ ಅಂಗಡಿ

  • In State
  • March 25, 2020
  • 839 Views
ನಿಮ್ಮ ಓಣಿಯಲ್ಲೇ ಮುಂಜಾನೆ ಕಿರಾಣಿ ಅಂಗಡಿ

ಗದಗ, ಮಾ. 25: ಮನೆ ಮುಂದೆಯೇ ತರಕಾರಿ ಭಾಗ್ಯ ಒದಗಿಸಿದ ಗದಗ ಪೊಲೀಸರು ಈಗ ನಿಮ್ಮ ಮನೆ ಬಳಿಯೇ ಕಿರಾಣಿ ಪದಾರ್ಥ ಸಿಗುವ ವ್ಯವಸ್ಥೆ ಮಾಡಿದ್ದಾರೆ.

ಪ್ರತಿ ವಾರ್ಡಿನ ಓಣಿಗಳಲ್ಲಿನ ಹೋಲ್‌ಸೇಲ್ ಮತ್ತು ರಿಟೇಲ್ ಅಂಗಡಿಗಳಿಗೆ ಪ್ರತಿದಿನ ಬೆಳಿಗ್ಗೆ 7ರಿಂದ 10ರವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಎಸ್‌ಪಿ ಎನ್ ಯತೀಶ್ ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಅವರು ನಗರದ ಕಿರಾಣಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಈ ವಿಷಯ ತಿಳಿಸಿದರು. ಬೇರೆಡೆಯಿಂದ ಸಾಮಗ್ರಿ ತರುವ ಹಾಗೂ ತರಲು ತೆರಳುವ ವಾಹನಗಳಿಗೆ ನಿರ್ಬಂಧವಿಲ್ಲ. ಅಂಗಡಿ ಮಾಲೀಕರು ಆ ವಾಹನಗಳ ಚಾಲಕರಿಗೆ ಈ ಕುರಿತು ಮಾಹಿತಿ ನೀಡಬೇಕು. ಜನರ ಅನುಕೂಲಕ್ಕಾಗಿ ಸಮಸ್ಯೆಯಾದರೂ ಸಹಕರಿಸಬೇಕು ಎಂದು ಎಸ್‌ಪಿ ಸೂಚಿಸಿದರು.

ನಗರಾಭಿವೃದ್ಧಿ ಕೋಶದ ರುದ್ರೇಶ್ ನಗರಸಭೆ ಆಯುಕ್ತ ಮನ್ಸೂರ್ ಅಲಿ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಡಿವೈಎಸ್‌ಪಿ ಪ್ರಹ್ಲಾದ್, ಸಿಪಿಐ ಆರ್‌ ಎಫ್ ದೇಸಾಯಿ, ಕಿರಾಣಿ ವ್ಯಾಪಾರಸ್ಥರಾದ ಭೀಮಸಿಂಗ್ ರಾಠೋಡ್, ಅಜ್ಜಣ್ಣ ಮಲ್ಲಾಡದ, ಸಿದ್ದಣ್ಣ ಮಲ್ಲಾಡದ, ಧೀರಜ್ ಜೈನ್, ರಾಘವೇಂದ್ರ ಶ್ಯಾವಿ, ಮಂಜುನಾಥ್ ಮೇರವಾಡೆ, ಜ್ಞಾನೇಶ್ ಕೋಕ್ಲೆ, ಸೇರಿದಂತೆ ಇತರ ಕಿರಾಣಿ ಅಂಗಡಿ ಮಾಲೀಕರು ಉಪಸ್ಥಿತರಿದ್ದರು.

Related