ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಗ್ರೂಪ್ ಸ್ಟೇಜ್ನಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದ ತಂಡ, ಸೂಪರ್ 8 ಹಂತದಲ್ಲಿ ಮೊದಲನೇ ಪಂದ್ಯದಲ್ಲಿಯೇ ಗೆಲುವಿನ ಶುಭಾರಂಭ ಮಾಡಿದೆ. ಅಫ್ಘಾನಿಸ್ತಾನ ಎದುರು ಬಾರ್ಬಡೋಸ್ನಲ್ಲಿ ಟೀಮ್ ಇಂಡಿಯಾಗೆ ಭರ್ಜರಿ ಜಯ ಸಿಕ್ಕಿದೆ.
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಜಯದ ಯಾತ್ರೆ ಮುಂದುವರೆದಿದೆ. ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್ ಮತ್ತು ಯಾರ್ಕರ್ ಕಿಂಗ್ ಬುಮ್ರಾ ದಾಳಿಗೆ ಅಫ್ಘಾನಿಸ್ತಾನ ಪಡೆ ತತ್ತರಿಸಿಹೋಯ್ತು. ಬಾರ್ಬಡೋಸ್ನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದಲ್ಲಿ 47 ರನ್ಗಳಿಂದ ಗೆದ್ದು ಸೂಪರ್ 8 ಹಂತದಲ್ಲಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಟೀಮ್ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ರು. ಒತ್ತಡಕ್ಕೆ ಒಳಗಾಗಿ ಬಿಗ್ಶಾಟ್ ಹೊಡೆಯೋ ಭರದಲ್ಲಿ ರೋಹಿತ್ ಶರ್ಮಾ ವಿಕೆಟ್ ಕೈಚೆಲ್ಲಿದ್ರು. ಬಳಿಕ ಕ್ರಿಸ್ನಲ್ಲಿ ಜೊತೆಯಾದ ವಿರಾಟ್ ಕೊಹ್ಲಿ- ರಿಷಭ್ ಪಂತ್ ತಂಡಕ್ಕೆ ಚೇತರಿಕೆ ನೀಡೋ ಪ್ರಯತ್ನ ಮಾಡಿದ್ರು. ಆದ್ರೆ, ಅಫ್ಘನ್ ನಾಯಕ ರಶೀದ್ ಖಾನ್ ಇದಕ್ಕೆ ಅವಕಾಶ ನೀಡಲಿಲ್ಲ. ಕೊಹ್ಲಿ, ಪಂತ್ ಇಬ್ಬರೂ ರಶೀದ್ ಸ್ಪಿನ್ ಬಲೆಗೆ ಬಿದ್ರು. ಬಳಿಕ ಕಣಕ್ಕಿಳಿದ ಶಿವಂ ದುಬೆಯದ್ದು ಅದೇ ರಾಗ ಅದೇ ಹಾಡು. 10 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ಇದನ್ನೂ ಓದಿ: ಕೆಎಂಜೆಯು ವತಿಯಿಂದ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗಳು
ಇನ್ನು 5ನೇ ವಿಕೆಟ್ಗೆ ಜೊತೆಯಾದ ಹಾರ್ದಿಕ್ ಪಾಂಡ್ಯ-ಸೂರ್ಯಕುಮಾರ್ ಯಾದವ್ ಸೂಪರ್ ಜೊತೆಯಾಟವಾಡಿದ್ರು. 90 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ-ಸೂರ್ಯಕುಮಾರ್ ಆಸರೆಯಾದರು. 60 ರನ್ಗಳ ಜೊತೆಯಾಟ ಆಡಿ ತಂಡಕ್ಕೆ ಬಲತಂದರು. ಇದರಿಂದ ಟೀಮ್ ಇಂಡಿಯಾ, 20 ಓವರ್ಗಳಲ್ಲಿ 181 ರನ್ಗಳ ಬಿಗ್ ಸ್ಕೋರ್ ಕಲೆಹಾಕಿತು.
182 ರನ್ಗಳ ಟಾರ್ಗೆಟ್ ಬೆನ್ನತ್ತಿದ ಅಫ್ಘನ್ ತಂಡಕ್ಕೆ ಬಾದ್ ಷಾ ಬೂಮ್ರಾ ಶಾಕ್ ನೀಡಿದ್ರು. ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್, ಹಝರತ್ತುಲ್ಲಾ ಝಝೈಗೆ ಗೇಟ್ಪಾಸ್ ನೀಡಿದ್ರು. ಇದ್ರ ಬೆನ್ನಲ್ಲೇ ಅಕ್ಷರ್ ಪಟೇಲ್ ಸ್ಪಿನ್ ಮೋಡಿಗೆ ಇಬ್ರಾಹಿಂ ಝರ್ದಾನ್ ಪೆವಿಲಿಯನ್ ಸೇರಿದ್ರು. 23 ರನ್ಗಳಿಸುವಷ್ಟರಲ್ಲೇ ಅಫ್ಘನ್ ತಂಡ 3 ವಿಕೆಟ್ ಕಳೆದುಕೊಳ್ತು.ಆರಂಭಿಕ ಆಘಾತ ಕಂಡ ತಂಡಕ್ಕೆ ಗುಲ್ಬದ್ದೀನ್ ನೈಬ್, ಅಝಮತ್ತುಲ್ಲಾ ಒಮರ್ಝೈ ಕೆಲ ಕಾಲ ನೆರವಾದ್ರು. ಹೆಚ್ಚು ಹೊತ್ತು ಕ್ರಿಸ್ನಲ್ಲಿರಲು ಭಾರತದ ಸ್ಪಿನ್ ಟ್ವಿನ್ಸ್ ಬಿಡಲಿಲ್ಲ. ಗುಲ್ಭದ್ದೀನ್ ಆಟಕ್ಕೆ ಕುಲ್ದೀಪ್, ಒಮರ್ಝೈ ಓಟಕ್ಕೆ ಜಡೇಜಾ ಬ್ರೇಕ್ ಹಾಕಿದ್ರು. ನಂತರ ಕಣಕ್ಕಿಳಿದ ನಜೀಬುಲ್ಲಾ ಝರ್ದಾನ್ ಬೂಮ್ರಾ ಬಿರುಗಾಳಿ ತತ್ತರಿಸಿ ಹೋದ್ರು. ಮೊಹಮ್ಮದ್ ನಬಿ 14 ರನ್ಗಳಿಸಿ ಆಟ ಅಂತ್ಯಗೊಳಿಸಿದ್ರು.