ಇತ್ತೀಚೆಗೆ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ವೈವಾಹಿಕ ಜೀವನದ ಕತೆ ‘ನಾನೊಂದು ತೀರಾ ನೀನೊಂದು ತೀರಾ’ ಎಂಬಂತೆ ಬಿತ್ತರವಾಗಿತ್ತು. ಪತ್ನಿ ನತಾಶಾಗೆ ಡಿವೋರ್ಸ್ ನೀಡಿದ್ದಾರೆ ಎನ್ನಲಾಗಿತ್ತು.
ಅದಕ್ಕೆ ತಕ್ಕಂತೆ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು.
ಇದನ್ನ ಗಮನಿಸಿದ್ದ ಫ್ಯಾನ್ಸ್ ಇಬ್ಬರ ನಡುವಿನ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ ಅಂದುಕೊಂಡಿದ್ದರು. ಆದರೀಗ ಫ್ಯಾನ್ಸ್ ಅಂದುಕೊಂಡಿರುವುದು ಸುಳ್ಳಾಗಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಪ್ರಲ್ಹಾದ್ ಜೋಶಿ
ನತಾಶಾ ಹಾರ್ದಿಕ್ ಜೊತೆಗಿನ ಮದುವೆಯ ಫೋಟೋವನ್ನು ಮತ್ತೆ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಈ ಮೂಲಕ ಹಳೆಯ ಬ್ರೇಕಿಂಗ್ ಸ್ಟೋರಿಗೆ ಹೊಸ ಶಾಕಿಂಗ್ ಸಂದೇಶ ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ now and forever ಎಂದು ಫೋಸ್ಟ್ ಹಾಕಿ ಶೇರ್ ಮಾಡಿದ್ದಾರೆ…ಸದ್ಯ ಈ ಜೋಡಿ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಎನ್ನಲಾಗ್ತಿದೆ…