ಇಂದು 8 ರಾಜ್ಯಗಳಲ್ಲಿ 5ನೇ ಹಂತದ ಮತದಾನ

ಇಂದು 8 ರಾಜ್ಯಗಳಲ್ಲಿ 5ನೇ ಹಂತದ ಮತದಾನ

 

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು (ಸೋಮವಾರ ಮೇ20) ರಂದು ದೇಶದಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದ್ದು, ಎಲ್ಲ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ಇಂದು ಸುಮಾರು ಎಂಟು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಸ್ಥಾನಗಳಲ್ಲಿ ಭರ್ಜರಿ ಮತದಾನ ನಡೆಯುತ್ತಿದೆ.

ಈಗಾಗಲೇ ಬೆಳಿಗ್ಗೆ 7:00 ಘಂಟೆ ಇಂದಾನೆ ಮತದಾನ ಪ್ರಾರಂಭವಾಗಿದ್ದು, ಎಲ್ಲಾ ಮತದಾನ ಬಾಂಧವರು ಬಿರುಸಿನ ಮತದಾನದಲ್ಲಿ ತೊಡಗಿದ್ದಾರೆ.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಒಡಿಶಾದ 5, ಬಿಹಾರದ 5, ಜಾರ್ಖಂಡ್‌ನ 3, ಜಮ್ಮು ಮತ್ತು ಕಾಶ್ಮೀರದ ಒಂದು ಮತ್ತು ಲಡಾಖ್‌ನ ಒಂದು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಈ ಹಂತದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ರಾಹುಲ್ ಗಾಂಧಿ, ಚಿರಾಗ್ ಪಾಸ್ವಾನ್, ರಾಜೀವ್ ಪ್ರತಾಪ್ ರೂಡಿ, ರೋಹಿಣಿ ಆಚಾರ್ಯ, ಒಮರ್ ಅಬ್ದುಲ್ಲಾ ಮತ್ತು ಪಿಯೂಷ್ ಗೋಯಲ್ ಅವರಂತಹ ಹಿರಿಯ ನಾಯಕರನ್ನು ಒಳಗೊಂಡಿದ್ದು, ಅವರ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

 

Related