Skip to content
November 25, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ‘ಮೆಟಾ ಬಿಜೆಪಿ ಕಾ ಬೇಟಾ’: ಯುವ ಕಾಂಗ್ರೆಸ್‌ನಿಂದ ವಿನೂತನ ಬ್ಯಾನರ್ ಅಭಿಯಾನ
  • Bangalore
  • Front news
  • Politics
  • State

‘ಮೆಟಾ ಬಿಜೆಪಿ ಕಾ ಬೇಟಾ’: ಯುವ ಕಾಂಗ್ರೆಸ್‌ನಿಂದ ವಿನೂತನ ಬ್ಯಾನರ್ ಅಭಿಯಾನ

Praja Vahini November 24, 2026
IMG_3247
Spread the love

ಬೆಂಗಳೂರು: ಸಾಮಾಜಿಕ ಜಾಲತಾಣ ದಿಗ್ಗಜ ಮೆಟಾ ಸಂಸ್ಥೆಯು ರಾಜಕೀಯ ಪಕ್ಷಪಾತದ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಬೆಂಗಳೂರಿನಲ್ಲಿ ವಿನೂತನ ಬ್ಯಾನರ್ ಅಭಿಯಾನ ಆರಂಭಿಸಿದೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ‘ಮೆಟಾ ಬಿಜೆಪಿ ಕಾ ಬೇಟಾ’ ಎಂಬ ಘೋಷವಾಕ್ಯದ ಬೃಹತ್ ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಈ ಅಭಿಯಾನದಲ್ಲಿ ಮೆಟಾ ಸಂಸ್ಥೆ ಮಾತ್ರವಲ್ಲದೆ, ಅದರ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರನ್ನೂ ಗುರಿಯಾಗಿಸಿಕೊಂಡು ವ್ಯಂಗ್ಯವಾಡಲಾಗಿದೆ. ಜುಕರ್‌ಬರ್ಗ್ ಅವರನ್ನು ‘ಮಾರ್ಕ್ ಬಿಜೆಪಿಬರ್ಗ್’ ಎಂದು ಉಲ್ಲೇಖಿಸಿರುವ ಯುವ ಕಾಂಗ್ರೆಸ್ ನಾಯಕರು, ಸಂಸ್ಥೆಯ ರಾಜಕೀಯ ನಿಲುವು ಹಾಗೂ ಸಾಮಾಜಿಕ ಜಾಲತಾಣಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

ನಗರದ ಸಾದಹಳ್ಳಿ ಗೇಟ್, ನ್ಯೂ ಏರ್‌ಪೋರ್ಟ್ ರಸ್ತೆಯ ಟೋಲ್ ಪ್ಲಾಜಾ ಸಮೀಪ ಹಾಗೂ ಚಿಕ್ಕಜಾಲ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಈ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮೆಟಾ ಸಂಸ್ಥೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಸಾರ್ವಜನಿಕರ ಗಮನಕ್ಕೆ ತರುವ ಪ್ರಯತ್ನವನ್ನು ಯುವ ಕಾಂಗ್ರೆಸ್ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಭಾಷಣಗಳ ಪ್ರಸಾರವನ್ನು ನಿಯಂತ್ರಿಸುವ ವಿಚಾರದಲ್ಲಿ ಮೆಟಾ ಸಂಸ್ಥೆ ತಾರತಮ್ಯ ಮಾಡುತ್ತಿದೆ ಎಂಬುದು ಯುವ ಕಾಂಗ್ರೆಸ್ ನಾಯಕರ ಪ್ರಮುಖ ಆರೋಪವಾಗಿದೆ. ಸುಳ್ಳು ಸುದ್ದಿಗಳ ಪ್ರಸಾರಕ್ಕೆ ಅವಕಾಶ ನೀಡಲಾಗುತ್ತಿದೆ ಹಾಗೂ ರಾಜಕೀಯ ಪ್ರಭಾವಕ್ಕೆ ಸಂಸ್ಥೆ ಮಣಿಯುತ್ತಿದೆ ಎಂದು ನಾಯಕರು ದೂರಿದ್ದಾರೆ.

ಇದರ ಜೊತೆಗೆ ಬಳಕೆದಾರರ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ಸುರಕ್ಷತೆಯ ವಿಚಾರದಲ್ಲೂ ಮೆಟಾ ಸಂಸ್ಥೆಯ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳು ಯಾವುದೇ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸದೆ, ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ದ್ವೇಷಪೂರಿತ ವಿಷಯಗಳ ನಿಯಂತ್ರಣ, ಸುಳ್ಳು ಸುದ್ದಿಗಳ ತಡೆ ಹಾಗೂ ಬಳಕೆದಾರರ ಮಾಹಿತಿಯ ರಕ್ಷಣೆಯಲ್ಲಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ನೀತಿಯನ್ನು ಅನುಸರಿಸಬೇಕು ಎಂದು ಯುವ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

ಮೆಟಾ ಸಂಸ್ಥೆಯ ವಿರುದ್ಧದ ಈ ಬ್ಯಾನರ್ ಅಭಿಯಾನ ಇದೀಗ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

About the Author

Praja Vahini

Editor

View All Posts

Spread the love

Post navigation

Previous: ಆಶಾ ಕಾರ್ಯಕರ್ತೆಯರೇ, ಕೇವಲ 12 ದಿನ ಕಾಯಿರಿ; ಯು.ಟಿ. ಖಾದರ್ ಭರವಸೆ
Next: ಶಕ್ತಿ ಯೋಜನೆ ಫಲಾನುಭವಿಗಳಿಗೆ ಹೊಸ ನಿಯಮ

Views:

0

You may have missed

22001c31-cceb-4553-be5a-af2a290c9870
  • Bangalore
  • Front news
  • Politics
  • State

ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಬಗ್ಗೆ ಅಪಪ್ರಚಾರ: ವಿಜಯೇಂದ್ರ ವಾಗ್ದಾಳಿ

Praja Vahini November 25, 2026
IMG_3273
  • Bangalore
  • Front news
  • Politics
  • State

ಬೆಂಗಳೂರಿನಲ್ಲಿ ಅನಧಿಕೃತ OFC ಕೇಬಲ್‌ಗಳಿಗೆ ಕಡಿವಾಣ

Praja Vahini November 25, 2026
IMG_3272
  • Bangalore
  • Crime
  • Front news
  • National
  • Politics
  • State

ವಿನಯ್ ಕುಲಕರ್ಣಿ ಜಾಮೀನು ರದ್ದು, 2 ವಾರಗಳಲ್ಲಿ ಶರಣಾಗಲು ಸುಪ್ರೀಂ ಆದೇಶ

Praja Vahini November 25, 2026
IMG_3271
  • Bangalore
  • Front news
  • Politics
  • State

ಕರ್ನಾಟಕದಲ್ಲಿ ₹800 ಕೋಟಿ ಹೂಡಿಕೆಗೆ ಕವಾಸಕಿ ಬದ್ಧತೆ

Praja Vahini November 25, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.