ಕಲಬುರಗಿ: ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನುಅಳಿಸಿ ಎಂಬ ಘೋಷವಾಕ್ಯದೊಂದಿಗೆ ಬಿಜೆಪಿ ದೇಶಾದ್ಯಂತಜನಾಂದೋಲನಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷವುಎಸ್ಐಆರ್ (SIR) ವಿಚಾರದಲ್ಲಿ ಜನರಲ್ಲಿ ಅನಗತ್ಯ ಗೊಂದಲಸೃಷ್ಟಿಸಿ, ದೇಶದ ಪ್ರಜಾಪ್ರಭುತ್ವ ಮತ್ತುಚುನಾವಣಾ ವ್ಯವಸ್ಥೆಯಬಗ್ಗೆ ಅಪನಂಬಿಕೆ ಮೂಡಿಸಲು ಪ್ರಯತ್ನಿಸುತ್ತಿದೆ ಎಂದುಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಕಲಬುರಗಿಯಲ್ಲಿ ಆಯೋಜಿಸಿದ್ದ ಪಾದಯಾತ್ರೆಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿಯವರ ನಾಯಕತ್ವದಲ್ಲಿಭಾರತ ಅಭಿವೃದ್ಧಿಯಪಥದಲ್ಲಿ ಸಾಗುತ್ತಿರುವುದನ್ನು ಕಾಂಗ್ರೆಸ್ ನಾಯಕರಿಗೆಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.ದೇಶದಪ್ರಗತಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದಹೆಚ್ಚುತ್ತಿರುವ ಗೌರವವನ್ನು ಮಲ್ಲಿಕಾರ್ಜುನ ಖರ್ಗೆ ಮತ್ತುರಾಹುಲ್ ಗಾಂಧಿಯವರುಸಹಿಸಿಕೊಳ್ಳುತ್ತಿಲ್ಲ ಎಂದರು.
ರಾಹುಲ್ ಗಾಂಧಿಯವರು ವಿದೇಶಗಳಿಗೆ ತೆರಳಿ ಭಾರತದಬಗ್ಗೆ ಅಪಮಾನಕರವಾಗಿ ಮಾತನಾಡುತ್ತಿದ್ದಾರೆ ಎಂದುಆರೋಪಿಸಿದವಿಜಯೇಂದ್ರ, ಅವರು ಪ್ರಧಾನಿಯಾಗುವಕನಸು ಎಂದಿಗೂ ನನಸಾಗುವುದಿಲ್ಲ. ಮುಂದಿನ ಬಾರಿಯೂನರೇಂದ್ರ ಮೋದಿಯವರೇಪ್ರಧಾನಿಯಾಗಲಿದ್ದು, ಮೋದಿಎಲ್ಲಿಗೂ ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ದೇಶದಲ್ಲಿ ದಂಗೆ ಮತ್ತು ಅರಾಜಕತೆಯವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದುಆರೋಪಿಸಿದ ಅವರು, ಜನರುಮೋದಿಯವರ ನಾಯಕತ್ವದಮೇಲೆ ವಿಶ್ವಾಸ ಹೊಂದಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳ ಗುರಿ
ಕರ್ನಾಟಕದಲ್ಲಿ ಯಾವಾಗ ಚುನಾವಣೆ ನಡೆದರೂಬಿಜೆಪಿ ಕನಿಷ್ಠ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಅಧಿಕಾರಕ್ಕೆ ಬರಲಿದೆ ಎಂದುವಿಜಯೇಂದ್ರ ವಿಶ್ವಾಸವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರ
ಕಳೆದ ಏಳು ದಿನಗಳಿಂದ ಆಶಾ ಕಾರ್ಯಕರ್ತೆಯರು ತಮ್ಮನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆನಡೆಸುತ್ತಿದ್ದರೂರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದುಆರೋಪಿಸಿದರು. ಚುನಾವಣೆಗೂ ಮುನ್ನ ನೀಡಿದ್ದಭರವಸೆಗಳನ್ನು ಅಧಿಕಾರಕ್ಕೆ ಬಂದ ಬಳಿಕಈಡೇರಿಸಲುಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ರೈತರ ಸಮಸ್ಯೆಗಳಿಗೆ ಸರ್ಕಾರ ನಿರ್ಲಕ್ಷ್ಯ
ರಾಜ್ಯದ ರೈತರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದರೂಕಾಂಗ್ರೆಸ್ ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದುವಿಜಯೇಂದ್ರಟೀಕಿಸಿದರು. ರೈತರ ಬದುಕು ಸುಧಾರಿಸುವಬದಲು ರಾಜಕೀಯ ಪ್ರಚಾರ ಮತ್ತು ಅಧಿಕಾರದ ಸ್ವಾರ್ಥದಲ್ಲೇಸರ್ಕಾರ ಮುಳುಗಿದೆ.ರೈತರ ಪಾಲಿಗೆ ರಾಜ್ಯ ಸರ್ಕಾರಬದುಕಿದ್ದರೂ ಸತ್ತಂತಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
