Skip to content
November 21, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಬಡವರಿಗೆ ಕರ್ನಾಟಕ ಸರ್ಕಾರದ ಭರ್ಜರಿ ಕೊಡುಗೆ: 15 ಲಕ್ಷ ಉಚಿತ ನಿವೇಶನ
  • Bangalore
  • Front news
  • Politics
  • State

ಬಡವರಿಗೆ ಕರ್ನಾಟಕ ಸರ್ಕಾರದ ಭರ್ಜರಿ ಕೊಡುಗೆ: 15 ಲಕ್ಷ ಉಚಿತ ನಿವೇಶನ

Praja Vahini November 21, 2026 1 minute read
IMG_3201
Spread the love

ಬೆಂಗಳೂರು: ಸ್ವಂತ ನಿವೇಶನ ಮತ್ತು ಮನೆ ಇಲ್ಲದ ಬಡ ಹಾಗೂ ದುರ್ಬಲ ವರ್ಗದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟದ 26ನೇ ಸಭೆಯಲ್ಲಿ 15 ಲಕ್ಷ ಉಚಿತ ನಿವೇಶನ ಹಂಚಿಕೆ ಹಾಗೂ ₹2,241 ಕೋಟಿ ವೆಚ್ಚದಲ್ಲಿ ಒಂದು ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ಭೂಗ್ಯಾರಂಟಿ ಯೋಜನೆಯಡಿ 15 ಲಕ್ಷ ನಿವೇಶನ

‘ಭೂಗ್ಯಾರಂಟಿ’ ಯೋಜನೆಯಡಿ ಅರ್ಹ ಭೂರಹಿತ ಕುಟುಂಬಗಳಿಗೆ 15 ಲಕ್ಷ ಉಚಿತ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 9 ಲಕ್ಷ ನಿವೇಶನಗಳಿಗೆ ಸುಮಾರು 45 ಸಾವಿರ ಎಕರೆ ಹಾಗೂ ನಗರ ಪ್ರದೇಶದಲ್ಲಿ 5 ಲಕ್ಷ ಫಲಾನುಭವಿಗಳಿಗೆ ಜಿ+3 ಮಾದರಿಯಲ್ಲಿ ವಸತಿ ಕಲ್ಪಿಸಲು ಯೋಜಿಸಲಾಗಿದೆ. ಈಗಾಗಲೇ ರಾಜ್ಯದ 31 ಜಿಲ್ಲೆಗಳಲ್ಲಿ 23,500 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದೆ.

ಮೊದಲ ಹಂತದಲ್ಲಿ 25 ಸಾವಿರ ಎಕರೆ ಪ್ರದೇಶದಲ್ಲಿ 5 ಲಕ್ಷ ನಿವೇಶನ ಅಭಿವೃದ್ಧಿಪಡಿಸಲು ₹1,000 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಮಾಜಿ ಸೈನಿಕರು, ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಶೇಷ ಮೀಸಲಾತಿ ಕಲ್ಪಿಸಲು ಉದ್ದೇಶಿಸಲಾಗಿದೆ.

ಅರ್ಹತಾ ಮಾನದಂಡಗಳು

ಪಿಎಚ್‌ಎಚ್ ಅಥವಾ ಎಎವೈ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಹಾಗೂ ನಗರ ಪ್ರದೇಶದ ಆದಾಯ ₹2 ಲಕ್ಷ ಮೀರಬಾರದು. ಒಂದು ಕುಟುಂಬಕ್ಕೆ ಒಂದು ನಿವೇಶನ ಮಾತ್ರ ನೀಡಲಾಗುತ್ತದೆ. ಪತಿ-ಪತ್ನಿ ಜಂಟಿಯಾಗಿ ಅರ್ಜಿ ಸಲ್ಲಿಸಬೇಕು.

ನಾಡಕಚೇರಿ, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಮೂಲಕ ಆಧಾರ್ ಆಧಾರಿತ ಇ-ಕೆವೈಸಿ ಬಳಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. 2018ರಿಂದ ಬಾಕಿ ಇರುವ 5.8 ಲಕ್ಷ ಗ್ರಾಮೀಣ ಅರ್ಜಿಗಳನ್ನೂ ಮರುಪರಿಶೀಲಿಸಲಾಗುತ್ತದೆ.

ಒಂದು ಲಕ್ಷ ಹೊಸ ಮನೆಗಳ ನಿರ್ಮಾಣ

ಬಸವ ವಸತಿ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ, ದೇವರಾಜ ಅರಸು ವಸತಿ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗಳಡಿ 2026-27ನೇ ಸಾಲಿನಲ್ಲಿ ಒಂದು ಲಕ್ಷ ಮನೆ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ ಒಟ್ಟು ₹2,241 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ಮನೆ ನಿರ್ಮಾಣ ಸಹಾಯಧನವನ್ನು ಸಾಮಾನ್ಯ ವರ್ಗಕ್ಕೆ ₹1.20 ಲಕ್ಷದಿಂದ ₹2 ಲಕ್ಷಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ನೆರವು ಹೊಸದಾಗಿ ಮಂಜೂರಾಗುವ ಮನೆಗಳಿಗೆ ಮಾತ್ರ ಅನ್ವಯವಾಗಲಿದೆ.

ಒಟ್ಟು ಒಂದು ಲಕ್ಷ ಮನೆಗಳ ಪೈಕಿ 68 ಸಾವಿರ ಗ್ರಾಮೀಣ ಪ್ರದೇಶಕ್ಕೆ ಹಾಗೂ 32 ಸಾವಿರ ನಗರ ಪ್ರದೇಶಕ್ಕೆ ಹಂಚಿಕೆಯಾಗಲಿವೆ. ಪರಿಶಿಷ್ಟ ಜಾತಿಗೆ 17,150, ಪರಿಶಿಷ್ಟ ಪಂಗಡಕ್ಕೆ 6,950, ಅಲ್ಪಸಂಖ್ಯಾತರಿಗೆ 15 ಸಾವಿರ ಹಾಗೂ ಸಾಮಾನ್ಯ ವರ್ಗಕ್ಕೆ 60,900 ಮನೆಗಳನ್ನು ಮೀಸಲಿಡಲಾಗಿದೆ.

ನಿವೇಶನಗಳಿಗೆ ರಸ್ತೆ, ಚರಂಡಿ ಹಾಗೂ ಗಡಿ ಕಲ್ಲುಗಳ ವ್ಯವಸ್ಥೆ ಮಾಡಲಾಗುತ್ತದೆ. ಫಲಾನುಭವಿಗಳಿಗೆ ಡಿಜಿಟಲ್ ಮಾಲೀಕತ್ವದ ದಾಖಲೆ ನೀಡಲಾಗುವುದಲ್ಲದೆ, ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕ ಸಂಪೂರ್ಣ ಮನ್ನಾ ಮಾಡಲು ನಿರ್ಧರಿಸಲಾಗಿದೆ.

ಈ ಮೂಲಕ ನಿವೇಶನ ಮತ್ತು ಸ್ವಂತ ಮನೆ ಇಲ್ಲದ ಬಡ ಕುಟುಂಬಗಳಿಗೆ ವಸತಿ ಭದ್ರತೆ ಒದಗಿಸುವ ಮಹತ್ವದ ಯೋಜನೆಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ.

About the Author

Praja Vahini

Editor

View All Posts

Spread the love

Post navigation

Previous: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಲೇಖಕ ರವಿ ಹಂಜ್ ವಶಕ್ಕೆ
Next: ಗಂಗಾ ನದಿಗೆ ಅಡ್ಡಲಾಗಿ 9.76 ಕಿ.ಮೀ ಉದ್ದದ ‘ನಿತೀಶ್ ಸೇತು’ ಲೋಕಾರ್ಪಣೆ

Views:

2

You may have missed

WhatsApp Image 2026-11-21 at 18.10.26
  • Politics
  • State
  • ಶಹಾಪುರ

ನಿಲ್ಲದ ರೈತರ ಧರಣಿ, ಕ್ಷಣ ಕ್ಷಣಕ್ಕೂ ಸರ್ಕಾರಕ್ಕೆ ಎಚ್ಚರಿಕೆ

Praja Vahini November 21, 2026
IMG_3223
  • Bangalore
  • Front news
  • Politics
  • State

ಬೆಂಗಳೂರು ಕನಕಪುರ ರಸ್ತೆ ವಾಹನ ಸವಾರರಿಗೆ ಗುಡ್‌ನ್ಯೂಸ್

Praja Vahini November 21, 2026
IMG_3222
  • Bangalore
  • Crime
  • State

ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Praja Vahini November 21, 2026
IMG_3221
  • Cricket
  • Front news
  • International

ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಮುನ್ನಡೆ

Praja Vahini November 21, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.