Skip to content
November 21, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನಿಲ್ಲದ ರೈತರ ಧರಣಿ, ಕ್ಷಣ ಕ್ಷಣಕ್ಕೂ ಸರ್ಕಾರಕ್ಕೆ ಎಚ್ಚರಿಕೆ
  • Politics
  • State
  • ಶಹಾಪುರ

ನಿಲ್ಲದ ರೈತರ ಧರಣಿ, ಕ್ಷಣ ಕ್ಷಣಕ್ಕೂ ಸರ್ಕಾರಕ್ಕೆ ಎಚ್ಚರಿಕೆ

Praja Vahini November 21, 2026 1 minute read
WhatsApp Image 2026-11-21 at 18.10.26
Spread the love

ಕೋರಿಯುವ ಚಳಿಯಲ್ಲಿ ರೈತರಿಂದ ಅಹೋರಾತ್ರಿ ಹೋರಾಟ/ 3ನೆ ದಿನಕ್ಕೆ ಕಾಲಿಟ್ಟ ರೈತರ ಹೋರಾಟ / ಹೆದ್ದಾರಿಗಳು ಸಂಪೂರ್ಣ ಬಂದ್

ಶಹಾಪುರ: ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕಾಲುವೆಗೆ ನೀರು ಹರಿಸುವಂತೆ ನೂರಾರು ರೈತರು ಕಳೆದ ಎರಡು ದಿನಗಳಿಂದ ಕೋರಿಯುವ ಚಳಿ, ಬಿಸಿಲನ್ನು ಲೆಕ್ಕಿಸದೇ ಹಗಲು ರಾತ್ರಿ ಎನ್ನದೇ ಬಸವೇಶ್ವರ ವೃತ್ತದಲ್ಲಿ ರೈತರು ಹಸಿರು ಶಾಲು ಬೀಸುತ್ತಾ, ಸರ್ಕಾರ ಜನಪ್ರತಿನೀಧಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ಹೊರಹಾಕಿದರು.

ಇಂದು (ಶನಿವಾರವು) ಸಹ ದನ ಕರುಗಳನ್ನು ವೃತ್ತದಲ್ಲಿ ಕಟ್ಟಿದರು, ಟ್ಯಾಂಕರ್ ಗಳನ್ನು ಅಡ್ಡ ನಿಲ್ಲಿಸಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಿದ್ದರು. ಬಸವೇಶ್ವರ ವೃತ್ತದಲ್ಲಿ ಎರಡು ದಿನಗಳಿಂದ ಹೋರಾಟ, ಭೀಮರಾಯನಗುಡಿಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಹೋರಾಟ ನಡೆಸುತ್ತಿರುವ ಅನ್ನದಾತರ ಸಂಕಷ್ಟ ಕೇಳಲು ಯಾವೊಬ್ಬ ಮೇಲಾಧಿಕಾರಿ ದಾವಿಸುತ್ತಿಲ್ಲಾ. ರೈತರ ಜೀವ ಸರ್ಕಾರದ ಲೆಕ್ಕಕ್ಕಿಲ್ಲ ಎಂದು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ರೈತರು ಹೆದ್ದಾರಿಯನ್ನು ತಡೆಹಿಡಿದು, ಕೇಲವೆಡೆ ಕಲ್ಲು ತೂರಾಟಗಳು ನಡೆದವು. ಇದರಿಂದ ನೀರಿಗಾಗಿ ರೈತರು ಶಾಂತಿಯುತ ಪ್ರತಿಭಟನೆಯನ್ನು ಬಿಟ್ಟು, ತಮ್ಮ ಹೋರಾಟವನ್ನು ಇತರ ರೂಪಗಳಲ್ಲಿ ಮುಂದುವರಿಸುವ ಸಾಧ್ಯತೆಯಿದೆ. ಕ್ಷಣಕ್ಷಣಕ್ಕೂ ಪರಿಸ್ಥೀತಿ ಬದಲಾಗುತ್ತಿದೆ ಮತ್ತು ರೈತರ ಹೋರಾಟ ಮತ್ತಷ್ಟು ತೀವ್ರರೂಪ ಪಡೆಯುವ ಸಾಧ್ಯತೆ ಇದೆ. ಪ್ರತಿಭಟನೆ ಘೋರವಾಗುವ ಮೊದಲು ಸರ್ಕಾರ ಎಚ್ಚೆತ್ತರೆ ಒಳಿತು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ತೀವ್ರಗೊಂಡ ಅನ್ನದಾತರ ಪ್ರತಿಭಟನೆ

ರೈತರ ತಾಳ್ಮೆಯನ್ನು ಪರಿಕ್ಷಿಸಿಬೇಡಿ ಎಂದು ರೈತ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದರು. ಶ್ರಮ ಪಟ್ಟು ದುಡಿಯುವ ರೈತರು ಕಣ್ಣಿರಲ್ಲಿ ಬದುಕುವಂತ ಪರಿಸ್ಥಿತಿ ಇದೆ. ಅನ್ನ ನೀಡುವ ರೈತರನ್ನು ಬೀದಿಯಲ್ಲಿ ಕೂಡಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ ಶಿವುಕುಮಾರ ಅವರಿಗೆ ನಾಚಿಕೆ ಆಗಬೇಕು ಎಂದು ಅನ್ನದಾತರು ಕಿಡಿಕಾರಿದರು. ಅಪಾರ ಸಂಖ್ಯೆಯ ರೈತರು ಧರಣಿ ಮುಂದುವರೆಸಿದರು.

ರೈತರಿಂದ ಬೆದರಿಕೆ, ಲಕ್ಷಾö್ಯಂತರ ರೂಪಾಯಿ ವೆಚ್ಚದ ತರಕಾರಿ ನಷ್ಟ

 

ಎಂದಿನಂತೆ ಮಾರುಕಟ್ಟೆಗೆ ಬರಬೇಕಾಗಿದ್ದ ತರಕಾರಿ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಮಾರುಕಟ್ಟೆಗೆ ಬಂದಿತ್ತು, ಆದರೆ ತರಕಾರಿಯನ್ನು ತಂದಿದ್ದ ವಾಹನದ ಮೇಲೆ ಕೇಲ ರೈತ ಮುಖಂಡರು ದಬ್ಬಾಳಿಕೆ ಮಾಡಿ ಕಷ್ಟಕಟ್ಟು ನಾವು ಹೋರಾಟ ಮಾಡುತ್ತಿದ್ದೇವೆ ಅದಕ್ಕೆ ಸಹಕರಿಸುವುದನ್ನು ಬಿಟ್ಟು ಯಾಕೆ ಮಾರಟಕ್ಕೆ ಬಂದಿದ್ದೀರಿ ಎಂದು ಬೆದರಿಸಿದ್ದು ಮಾರುಕಟ್ಟೆಗೆ ಬಂದಿದ್ದ ತರಕಾರಿ ವಾಹನಗಳನ್ನು ಮಾಲೀಕರು ವಾಪಸ್ ತೆಗೆದುಕೊಂಡು ಹೋಗಿದ್ದು ಲಕ್ಷಾö್ಯಂತರ ರೂಪಾಯಿ ನಷ್ಟವಾಗಿದೆ, ಇದರಿಂದ ರೈತರ ಹೋರಾಟವು ನ್ಯಾಯಯುತ ಬೇಡಿಕೆಯನ್ನು ತಮ್ಮ ಹೋರಟದ ಮೂಲಕ ಪಡೆಯಲಿ ಆದರೆ ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿಯಲ್ಲಾ ಎಂದು ಕೇಲ ವ್ಯಾಪರಸ್ಥರು ಅಳಲು ತೋಡಿಕೊಂಡರು.

ಹೋರಾಟದ ಹೆಸರಲ್ಲಿ ದಬ್ಬಾಳಿಕೆ, ವ್ಯಾಪರಸ್ಥರ ಸಂಕಟ

ಕೇಲ ಅನ್ನದಾತರು ಹೋರಾಟ ಹೆಸರಿನಲ್ಲಿ ಕೇಲವರು ಸಾರ್ವಜನಕರಿಗೆ ಬೆದರಿಕೆ ಹಾಕಿ ದಬ್ಬಾಳಿಕೆ, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದು, ತಳ್ಳಾಟ ಮಾಡುವುದು ಈಗೆ ಹಲವು ಘಟನೆಗಳು ನಡೆಯುತ್ತಿದ್ದು, ಪೊಲೀಸರು ನಿಂತು ಮಜಾ ತೆಗೆದು ಕೊಳ್ಳುತ್ತಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ಕರೆ ನೀಡಿದ್ದ ಶುಕ್ರವಾರ ಎಲ್ಲಾ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿಕೊಂಡಿದ್ದರು, ಆದರೆ ಶನಿವಾರ ಕೇಲವರು ದಬ್ಬಾಳಿಕೆ ಮಾಡಿ ಅಂಗಡಿಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿದ್ದು ಖಂಡನೀಯ ಎಂದು ಕೇಲ ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.

ಉಸ್ತುವಾರಿ ಸಚಿವರು ಮತ್ತು ಶಾಸಕರೇ ನೇರ ಹೊಣೆ

ಅನ್ನದಾತರಿಗೆ ನೀರು ಸಿಗದೇ ಇರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರೇ ನೇರ ಹೊಣೆಯಾಗಿದ್ದು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ಆಲಿಮಟ್ಟಿ, ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ರೈತರಿಗೆ ಸಿಗಬೇಕಾದ ನೀರು ಇದೆ, ಆದರೆ ರೈತರಿಗೆ ಸರ್ಕಾರ ನೀರು ಕೊಡಲು ಮೀನಾಮೇಷ ಎಣಿಸುತ್ತಿರುವುದು ಖಂಡನೀಯ, ಸ್ಥಳೀಯ ಶಾಸಕರು ಇಲಾಖೆ ಸಚಿವÀರನ್ನು ಬೇಟಿ ಮಾಡಿದ್ದಾರೆ, ಆದರೆ ರೈತರ ತೊಂದರೆಯ ಕುರಿತು ಖುದ್ದಾಗಿ ಮುಖ್ಯಂಮತ್ರಿಗಳೊನೆ ಚರ್ಚೆ ಮಾಡಿ ರೈತರ ಪರವಾಗಿ ಒತ್ತಾಯಿಸಿದ್ದೆ ಆದರೆ ರೈತರಿಗೆ ನೀರು ಸಿಗಲಿದೆ ಎಂದು ರೈತ ಹೋರಾಟಗಾರ ಶರಣು ಮಂದರವಾಡ ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣು ಮಂದರವಾಡ, ಮಹೇಶಗೌಡ ಸುಬೇದಾರ, ಎಸ್.ಎಂ ಸಾಗರ, ಭೀಮರಾಯ ಪೂಜಾರಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

About the Author

Praja Vahini

Editor

View All Posts

Spread the love

Post navigation

Previous: ಬೆಂಗಳೂರು ಕನಕಪುರ ರಸ್ತೆ ವಾಹನ ಸವಾರರಿಗೆ ಗುಡ್‌ನ್ಯೂಸ್

Views:

1

You may have missed

WhatsApp Image 2026-11-21 at 18.10.26
  • Politics
  • State
  • ಶಹಾಪುರ

ನಿಲ್ಲದ ರೈತರ ಧರಣಿ, ಕ್ಷಣ ಕ್ಷಣಕ್ಕೂ ಸರ್ಕಾರಕ್ಕೆ ಎಚ್ಚರಿಕೆ

Praja Vahini November 21, 2026
IMG_3223
  • Bangalore
  • Front news
  • Politics
  • State

ಬೆಂಗಳೂರು ಕನಕಪುರ ರಸ್ತೆ ವಾಹನ ಸವಾರರಿಗೆ ಗುಡ್‌ನ್ಯೂಸ್

Praja Vahini November 21, 2026
IMG_3222
  • Bangalore
  • Crime
  • State

ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Praja Vahini November 21, 2026
IMG_3221
  • Cricket
  • Front news
  • International

ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಮುನ್ನಡೆ

Praja Vahini November 21, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.