Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ನೀರು ಕೊಡಿ, ಯಾವ ತಪ್ಪಿಗಾಗಿ ರೈತರಿಗೆ ಈ ಶಿಕ್ಷೆ..?
  • Politics
  • State
  • ಶಹಾಪುರ

ನೀರು ಕೊಡಿ, ಯಾವ ತಪ್ಪಿಗಾಗಿ ರೈತರಿಗೆ ಈ ಶಿಕ್ಷೆ..?

Praja Vahini November 16, 2026 1 minute read
WhatsApp Image 2026-11-16 at 18.28.07 (1)
Spread the love

ರೈತ ಸಂಘಟನೆಗಳಲ್ಲಿ ಬಣ, ಅನ್ನದಾತರಲ್ಲಿ ಗೊಂದಲ

ಶಹಾಪುರ: ಇಡೀ ದೇಶಕ್ಕೆ ಅನ್ನ ಕೊಡುವ ನಮಗೆ ಬೆಳೆಗೆ ನೀರಿಗಾಗಿ ಭಿಕ್ಷುಕರಂತೆ ಅಂಗಲಾಚಿ ಬೇಡುವ ಪರಿಸ್ಥಿತಿ ಬಂದಿದ್ದು, ಯಾವ ತಪ್ಪಿಗಾಗಿ ಸರ್ಕಾರ ರೈತರಿಗೆ ಈ ಶೀಕ್ಷೆ ನೀಡುತ್ತಿದೆ, ರೈತರು ಉಳಿದರೆ ಇಡೀ ದೇಶ ಉಳಿಯುತ್ತದೆ ಆದ್ದರಿಂದ ನೀರು ಕೊಡಿ ರೈತರ ಜೀವ ಉಳಿಸಿ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.

ನಗರದಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ಧೇಶಕ ಕೃಷ್ಣಮೂರ್ತಿ ಕುಲ್ಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಕೆಂಭಾವಿ ಬಾಗದ ಎನ್‌ಆರ್‌ಬಿಸಿ, ಎನ್‌ಎಲ್‌ಬಿಸಿಗೆ 5 ಸಾವಿರ ಕ್ಯೂಸಿಕ್ ನೀರು ಹತ್ತು ದಿನಕ್ಕೆ ಹರಿಸಿದರೆ, ಅಂದರೆ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ 10 ದಿನಕ್ಕೆ ಮತ್ತು ಡಿಸೆಂಬರ್ 21 ವರೆಗೆ, ಬಳಿಕ ಡಿ. 31 ನೇ ತಾರಿಖಿನ ವರೆಗೆ ಪ್ರತಿ 10 ದಿನಗಳಿಗೆ 5 ಸಾವಿರ ಟಿಎಮ್‌ಸಿ ನೀರು ಹರಿಸಿದರೆ 1 ಸಾವಿರ ಕೋಟಿಕ್ಕಿಂತಲೂ ಹೆಚ್ಚಿ ಬೆಳೆ ಉಳಿಸಿದಂತಾಗುತ್ತದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸಿ, ರೈತರನ್ನು ಉಳಿಸಬೇಕು ಎಂದರು.

ಸರ್ಕಾರ ಮೊದಲೇ ರೈತರಿಗೆ ಡ್ಯಾಂನಲ್ಲಿ ನೀರಿನ ಅಭಾವವಿದ್ದು ಬೆಳೆ ಬೆಳೆಯಬಾರದು ಎಂದು ಹೇಳಬೇಕಿತ್ತು ಆಗ ನಾವೆಲ್ಲರೂ ಬಿತ್ತುವುದನ್ನು ಬಿಟ್ಟು ಮನೆ ಸೇರುತ್ತಿದ್ದೇವು. ಆದರೆ ಮೆಣಸಿನಕಾಯಿಯಂತೆ ಬೆಳೆಗೆ ಒಂದೊAದು ಎಕರೆಗೆ ೧ ಲಕ್ಷ ಖರ್ಚು ಮಾಡಿ ಬೆಳೆದಿದ್ದಾರೆ. ಪ್ರಸ್ತುತ ಆಲಮಟ್ಟಿ, ನಾರಾಯಣಪುರ ಡ್ಯಾಂನಲ್ಲಿ 75 ಟಿಎಮ್‌ಸಿ ನೀರಿದ್ದು, ಸರ್ಕಾರ 42 ಟಿಎಮ್‌ಸಿ ಕೈಗಾರಕೆಗೆ, ಕುಡಿಯುವ ನೀರಿಗಾಗಿ ಮೀಸಲಿದೆ ಎನ್ನುತ್ತಾರೆ, ಕೈಗಾರಿಕೆ ನೀಡುವ ನೀರು ರೈತರಿಗೆ ನೀಡುತ್ತಿಲ್ಲಾ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಡಾ. ಚಂದ್ರಶೇಖರ ಸುಬೇದಾರ, ರಶೀದ್ ಮುತ್ಯಾ, ಅಡಿವೆಪ್ಪ ಜಾಕಾ, ಲಕ್ಷ್ಮಿಕಾಂತ ಪಾಟೀಲ್, ಶರಣು ಸಲಗರ, ಮಲ್ಲಿಕಾರ್ಜುನ ಕಂದಕೂರ ಸೇರಿದಂತೆ ರೈತರು ಇದ್ದರು. ಪ್ರತಿಭಟನೆ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನೀರು ಬಿಡದೇ ಹೋದರೆ ಉಗ್ರ ಹೋರಾಟ

ತಾಲೂಕಿನಲ್ಲಿ 15 ಸಾವಿರಕ್ಕೂ ಹೆಚ್ಚು ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ, ಅವರಿಗೆ ನೀರಿನ ಅಗತ್ಯವಿದೆ. ನೀರು ಬಿಡದೇ ಹೋದರೆ ಮತ್ಯಾರಡು ದಿನಗಳಲ್ಲಿ ಮತ್ತೆ ಉಗ್ರ ಹೋರಾಟ ನಡೆಯಲಿದೆ. ಇದಕ್ಕೆ ಅವಕಾಶ ನೀಡದೆ ರೈತರಿಗೆ ಆದಷ್ಟು ಬೇಗ ಶುಭ ಸುದ್ದಿ ನೀಡಬೇಕು ಎಂದು ಬಿಜೆಪಿ ಮುಖಂಡರಾದ ಅಮೀನರೆಡ್ಡಿ ಯಾಳಗಿ ಹೇಳಿದರು.

ಮಹಾರಾಷ್ಟ್ರಕ್ಕೆ ನೀರು ಕೇಳುವ ಗಂಡಸ್ತನ ಇಲ್ಲಾ; ದೊಡ್ಡಪ್ಪಗೌಡ ನರಬೋಳಿ

ಈ ಭಾಗದ ರೈತರಿಗೆ ಈವರೆಗೆ ಸರಿಯಾದ ಬೆಳೆ ಪರಿಹಾರವೇ ಕೈಸಿಕ್ಕಿಲ್ಲ, ರೈತರ ತಾಳ್ಮೆ ಪರಿಕ್ಷೀಸಬೇಡಿ. ನಮಗೆ ಬೇಕಾಗಿರುವುದು ಕೇವಲ 10 ಟಿಎಮ್‌ಸಿ ನೀರು ಮಾತ್ರ, ಭೀಮಾ ನದಿಗೆ ಮಹಾರಾಷ್ಟದಿಂದ ಬರಬೇಕಾದ 15 ಟಿಎಮ್‌ಸಿ ನೀರು ಕೇಳುವ ಗಂಡಸ್ತನ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲಾ. ಈ ಭಾಗದ ಶಾಸಕರಿಗೆ ಮುಖ್ಯಮಂತ್ರಿಗಳ ಎದುರು ಮಾತನಾಡಲು ಬರುವುದಿಲ್ಲ. ಹಾವಿಗೆ ಹಲ್ಲು ಕಿತ್ತಿದ್ದಂತೆ ಈ ಬಾಘದ ಶಾಸಕರಿದ್ದಾರೆ. ದಪ್ಪ ಚರ್ಮದ ಸರ್ಕಾರದಿಂದ ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ. ನೀರು ಕೊಡದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಪ್ರಕೃತಿ ಮುನಿಸಿಕೊಂಡಿದ್ದು ಪ್ರಸ್ತುತ ಬರಗಾಲವಿದೆ. ಅದೃಷ್ಟವಶಾತ್ ಮಹಾರಾಷ್ಟçದಲ್ಲಿ ಮಳೆ ಬಂದ ಪರಿಣಾಮ ಎರಡು ಡ್ಯಾಂಗಳು ತುಂಬಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ನೀರು ಅವಶ್ಯವಾಗಿದೆ. ಆದ್ದರಿಂದ ಸಚಿವರು ಮತ್ತು ಮೇಲಾಧಿಕಾರಿಗಳಿಗೆ ರೈತರ ಪರವಾಗಿ ಮನವರಿಕೆ ಮಾಡಿಕೊಡುವ ಪ್ರಮಾಣಿಕ ಪ್ರಯತ್ನ ಮಾಡುವೆ ಎಂದು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ಧೇಶಕರಾದ ಕೃಷ್ಣಮೂರ್ತಿ ಕುಲ್ಕಕರ್ಣಿ ಹೇಳಿದರು.

ರೈತ ಸಂಘಗಳಲ್ಲೆ ಮೂರನಾಲ್ಕು ಬಣಗಳಿವೆ ಇದರಿಂದ ತಮಗೆ ಬೇಕಾದ ರೀತಿಯಲ್ಲಿ ರೈತರ ಹೋರಾಟವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದಲಿತ ಮುಖಂಡ ನಾಗಣ್ಣ ಬಡಿಗೇರ ಆರೋಪಿಸಿದ್ದಾರೆ.

ಮುಖಂಡರು ವಿವಿಧ ಬಣಗಳಾಗಿ ಹೋರಾಟ ಮಾಡುವ ಬದಲು ರೈತರ ಹಿತ ಬಯಸುವವರೇ ಆಗಿದ್ದರೆ ಒಗ್ಗಟ್ಟಾಗಿ ಪ್ರತಿಭಟನೆ ಮಾಡಿ. ಆದರೆ ನಿಮ್ಮ ಬೆಳೆ ಬೆಯಿಸಿಕೊಳ್ಳುವ ಸಲುವಾಗಿ ರೈತರನ್ನು ಬಲಿಪಶು ಮಾಡಿ, ಗಾಳಿಯಲ್ಲಿ ಗುಂಡು ಹೊಡೆದು. ರಾಜಕೀಯ ಬಣ್ಣ ನೀಡಬೇಡಿ ಎಂದು ಕಿಡಿಕಾರಿದ್ದಾರೆ.

ಏನೂ ಅರಿಯದ ಮುಗ್ಧ ರೈತರು ಈಗಾಗಲೇ ನೀರಿಲ್ಲದೇ ಬೆಳೆ ಕಳೆದು ಕೊಳ್ಳುವ ಆತಂಕದಲ್ಲೆ ದಿನದೂಡುತ್ತಿದ್ದಾರೆ, ಅವರನ್ನು ಮುಂದಿಟ್ಟುಕೊAಡು ನಾಟಕದ ಮಾತುಗಳನ್ನು ಬಿಡಬೇಕು. ಕಾಲುವೆಗೆ ನೀರು ಬರದೇ ಹೋದರೆ ಎಷ್ಟೋ ರೈತರು ಆತ್ಮಹತ್ಯೆಯ ದಾರಿ ನೋಡಿಕೊಳ್ಳುವ ಎಚ್ಚರಿಕೆ ಸಹ ನೀಡಿದ್ದಾರೆ. ಅವರ ಪರ ನಿಂತು ಪ್ರಮಾಣಿಕವಾಗಿ ನಡೆಯುವ ಹೋರಾಟಕ್ಕೆ ಜಯ ಸಿಗುವವರೆಗೂ ಅವರೊಡನೆ ನಿಂತು ಹೋರಾಟ ಮಾಡಿ ಸರ್ಕಾರದ ಗಮನಕ್ಕೆ ತಂದು ನೀರು ಕೊಡಿಸಿ. ನಮ್ಮ ಅನ್ನದಾತರು ಯಾವುದೇ ರಾಜಕೀಯ ಕುಮ್ಮಕ್ಕಿಗೆ ಒಳಗಾಗಬಾರದು ನಿಮಗೆ ಸಿಗಬೇಕಾದ ನ್ಯಾಯ ಸಿಕ್ಕೆ ಸಿಗಲಿದೆ ಆದರೆ ಅವರನ್ನು ದಾರಿ ತಪ್ಪಿಸುವ ಹುನ್ನಾರ ನಿಲ್ಲಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.

ಕೆಬಿಜೆಎನ್‌ಎಲ್ ಕಚೇರಿ ವರೆಗೆ ಪ್ರತಿಭಟನೆ

ನಗರದಲ್ಲಿ ಮಾಜಿ ಶಾಸಕ ಗುರುಪಾಟೀಲ್ ಶಿರವಾಳ ಹಾಗೂ ಬಿಜೆಪಿ ಯುವ ಮುಖಂಡ ಅಮೀನರೆಡ್ಡಿ ಯಾಳಗಿ ಅವರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ಕಾವು ಏರಿತು. ನಗರದ ಎಪಿಎಂಸಿಯಿಂದ ಭೀಮರಾಯನಗುಡಿ ಕೆಬಿಜೆಎನ್‌ಎಲ್ ಕಚೇರಿ ವರೆಗೆ ಪ್ರತಿಭಟನೆ ನಡೆಯಿತು. ಎರಡು ಗುಂಪುಗಳಾಗಿ ಸಾಗಿ ಕೊನೆಗೆ ಪ್ರತಿಭಟನೆ ತಲುಪಿದ್ದು ಕೆಬಿಜೆಎನ್‌ಎಲ್ ಕಚೇರಿ ವರೆಗೆ. ಕೆಬಿಜೆಎನ್‌ಎಲ್ ಕಛೇರಿ ಎದುರು ಕಾಣಸಿಗುವ ಎರಡು ಗುಂಪುಗಳ ಹೋರಾಟವನ್ನು ನೋಡಿದರೆ, ಅನ್ನದಾತರ ನಡುವಲ್ಲೇ ಗೊಂದಲ ಉಂಟಾಗಿತ್ತು. ರೈತರ ಪರವಾಗಿ ಪ್ರತಿಭಟನೆ ನಡೆಯುತ್ತಿದಿಯಾ ಅಥವಾ ಪಕ್ಷಗಳ ಶಕ್ತಿ ಪ್ರದರ್ಶನ ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಕೇಲವರಲ್ಲಿ ಮೂಡಿದ್ದರಿಂದ ಬಹುತೇಕ ರೈತರು ಪ್ರತಿಭಟನೆ ತೊರೆದು ಹೊರ ನಡೆದ ಘಟನೆ ನಡೆಯಿತು.

 

About the Author

Praja Vahini

Editor

View All Posts

Spread the love

Post navigation

Previous: ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ ₹4,500ಕ್ಕೆ ಹೆಚ್ಚಿಸಲು ಆಗ್ರಹ
Next: ಮಹಿಳೆಯರು ಅಧಿಕಾರದ ಜತೆಗೆ ನೀತಿ ನಿರ್ಧಾರಗಳ ಮೇಲೂ ಪ್ರಭಾವ ಬೀರಬೇಕು: ಡಿ.ಕೆ.ಶಿ

Views:

73

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.