ಚಿಂಚೋಳಿ: ತಾಲ್ಲೂಕಿನ ಚಂದ್ರಂಪಳ್ಳಿಯ ಪ್ರವಾಸಿ ತಾಣದಲ್ಲಿ ತೋಟಗಾರಿಕೆ ಜಮೀನು ಲಭ್ಯವಿದ್ದು, ಇಲ್ಲಿಯೇ ಅರಣ್ಯ ಕಾಲೇಜು ಸ್ಥಾಪನೆಗೆ ಈಗಾಗಲೇ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ ಸಚಿವ ಈಶ್ವರ ಖಂಡ್ರೆ,ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು ಚಿಂತನೆ ನಡೆಸಿದ್ದು, ಶೀಘ್ರವೇ ರಾಯಚೂರು ವಿಶ್ವವಿದ್ಯಾಲಯದ ತಂಡ ಭೇಟಿ ನೀಡಿ ಪರಿಶೀಲನೆ ವರದಿ ನೀಡಬೇಕು. ಶ್ರೀಘ್ರವೇ ಅರಣ್ಯ ಕಾಲೇಜು ಸ್ಥಾಪನೆಯಾಗಲಿದೆ ಎಂದು ಬೀದರ ಸಂಸದ ಸಾಗರ ಖಂಡ್ರೆ ಹೇಳಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತ ಸಭೆ ನಡೆಸಿ ನಂತರ ಚಂದ್ರಂಪಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಪಕ್ಷಾತೀತವಾಗಿ ಕೇಂದ್ರ ಸರಕಾರದ ಬಳಿ ನಿಯೋಗ ತೆರಳಿ ರಾಜ್ಯದ ಬರ ಪರಸ್ಥಿತಿ ಮನವರಿಕೆ ಮಾಡಿ ಬರ ಪರಿಹಾರಕ್ಕೆ ಒತ್ತಾಯಿಸೋಣ ಎಂದು ಮನವಿ ಮಾಡಿದರು.
ಮುಂಬರುವ ದಿನಗಳಲ್ಲಿ ಕುಡಿಯುವ ನೀರು, ವಿದ್ಯುತ್,ಮೇವಿನ ಸಮಸ್ಯೆ ಉಲ್ಬಣವಾಗಲಿದ್ದು,ಜನ ಸಾಮಾನ್ಯರು ಮೀತವಾಗಿ ಬಳಕೆಗೆ ಮುಂದಾಗಬೇಕು. ಪ್ರಸ್ತುತ ನರೇಗಾ ಯೋಜನೆಯನ್ನು ಕೇಂದ್ರ ಸರಕಾರವು ವಿಬಿಜಿ ರಾಮಜೀ ಯೋಜನೆಯನ್ನಾಗಿ ಮಾಡಿ ಮುಕ್ತವಾಗಿ ಕೆಲಸ ನಿರ್ವಹಸಿಲು ಬಿಡದೆ ಮೂಗುದಾರ ಹಾಕಿದೆ. ಅವರ ನೀಡುವ ಕಾಮಗಾರಿ ಮಾತ್ರ ಮಾಡಬೇಕು.ಹೊಸ ಕಾನೂನು ರೂಪಿಸಿ ಕಾರ್ಮಿಕ,ರೈತ,ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಚಿಂಚೋಳಿ ಮಾರ್ಗವಾಗಿ ರೈಲು ಸಂಚಾರ ವಿಚಾರ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಹೋರಾಟಗಾರರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಕೇಂದ್ರ ರೈಲ್ವೆ ಸಚಿವರ ಬಳಿ ನಿಯೋಗ ತೆರಳಿ ರೈಲ್ವೆ ಮಾರ್ಗಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಈ ಭಾಗದ ಜನತೆಗೆ ಉದ್ಯೋಗ, ವ್ಯಾಪಾರ ವಹಿವಾಟು ಹೆಚ್ಚಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಮಾಲಿ, ಅನೀಲಕುಮಾರ ಜಮಾದಾರ,ಶರಣು ಮೋತಕಪಳ್ಳಿ,ಅಬ್ದುಲ್ ಬಾಸೀದ,ಸಂತೋಷ ಗುತ್ತೇದಾರ,ಆನಂದ ಟೈಗರ್,ಶರಣಪ್ಪ ಪಾಟೀಲ್,ಸೇರಿದಂತೆ ಅನೇಕರು ಇದ್ದರು.
