ಶಹಾಪುರ: ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಭಾರತ ಗ್ಲೊಬಲ್ ಡಾ.ಅಂಬೇಡ್ಕರ್ ಬೌದ್ಧ ಮಿಷನ್ , ಯು.ಎಸ್.ಎ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್ ಭಿಕ್ಕು ಸಂಘ ಮತ್ತು ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ ಸನ್ನತಿ ಅವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಐತಿಹಾಸಿಕ ಕಾರ್ಯಕ್ರಮದ ಯಶಸ್ವಿಗೆ ಜನ ಸಹಕರಿಸಬೇಕು ಎಂದು ಬೌದ್ಧ ಮಹಾಸಭ ಸಮಿತಿ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಾಯಿಬಣ್ಣ ಬನ್ನಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಅ.5 ರಂದು ಕಲಬುರಗಿಯ ಡಾ.ಅಂಬೇಡ್ಕರ್ ಪ್ರತಿಮೆ, ಜಗತ್ತ ವೃತ್ತದಿಂದ ಐತಿಹಾಸಿಕ ಯಾತ್ರೆಗೆ ಚಾಲನೆ ಸಿಗಲಿದೆ. ಆ ಮೂಲಕ ರಾಜ್ಯದ ಸುತ್ತಲೂ ಜಾಗ್ರತಿ ಯಾತ್ರೆ ನಡೆಯಲಿದೆ. ನಂತರ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರವಾದ ಪ್ರಾಚೀನ ಕಾಲದ ಸಾಮ್ರಾಟ್ ಅಶೋಕ ಸ್ತೂಪ ಸನ್ನತಿ (ಕನಗನಹಳ್ಳಿ) ಯಲ್ಲಿ ನವೆಂಬರ್ ೧ ರಂದು ಸಂವಿಧಾನ ಆಧಾರಿತ ಪ್ರಬೂದ್ಧ ಭಾರತ ನಿರ್ಮಾಣಕ್ಕಾಗಿ ಹಾಗೂ 70ನೇ ಬೌದ್ಧ ಧಮ್ಮ ದೀಕ್ಷ ಪ್ರಯುಕ್ತ 5 ಲಕ್ಷ ಜನರ ಭವ್ಯ ಬೌದ್ಧ ಧಮ್ಮ-ದೀಕ್ಷಾ ಸಮಾರಂಭ ಕಾರ್ಯಕ್ರಮದ ಸಮಾರೋಪ ಹಾಗೂ ಕರ್ನಾಟಕ ಧಮ್ಮ ಜಾಗೃತಿ ಯಾತ್ರೆ ಸಮಾರೋಭ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮತಕ್ಷೇತ್ರದ ಶಾಸಕರು, ಸಚಿವರುಗಳು ಪಾಲ್ಗೊಳ್ಳಲಿದ್ದಾರೆ.
ಈ ಐತಿಹಾಸಿಕ ಅಭಿಯಾನವನ್ನು ಯಶಸ್ವಿಗೊಳಿಸಲು ತಮ್ಮ ತನು, ಮನ ಮತ್ತು ಧನದಿಂದ ಸಹಕರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಈ ಒಂದು ಭವ್ಯವಾದ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
