ಶಹಾಪುರ: ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಅವರ 43 ನೇ ಹುಟ್ಟು ಹಬ್ಬದ ನಿಮಿತ್ಯವಾಗಿ ನಮ್ಮ ಕರ್ನಾಟಕ ಸೇನೆ ತಾಲೂಕ ಘಟಕ ಹಾಗೂ ಅಭಿಮಾನಿಗಳ ವತಿಯಿಂದ ತಾಲೂಕಿನ ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು, ಹಾಲು, ಬ್ರೇಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಮಾದೇವಯ್ಯಸ್ವಾಮಿ, ಡಾ.ಗೀತಾ ಪಾಟೀಲ್, ಡಾ.ಅಕ್ಷಯ ಪಾಟೀಲ್, ನಮ್ಮ ಕರ್ನಾಟಕ ಸೇನೆ ಜಿಲ್ಲಾ ಸಂಚಾಲಕ ಅಂಬ್ರೇಶ ತೆಲಗೂರ್, ಜಿಲ್ಲಾ ಪ್ರಧಾನ ಸಂಚಾಲಕ ಅಂಬರೀಶ್ ದೋರನಹಳ್ಳಿ, ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ, ಹೊನ್ನಪ್ಪ ಗುಂಟ್ನೂರ, ಶೇಖಪ್ಪ ಪಾಲ್ಕಿ, ಅಂಬಣ್ಣ ನಾಟೇಕರ, ದೇವು ಕುಂಬಾರ, ಪ್ರಧಾಂತ ಪತ್ತಾರ, ಮಹಾಂತೇಶ ದಿಗ್ಗಿ, ವಿಜಯಕುಮಾರ ಕುರಕುಂದಿ, ದೇವರಾಜ, ಸಕ್ಮೀರ ಕನ್ಯಾಕೊಳ್ಳೂರ, ಸಾಬು ಮಾಲಿಪಾಟೀಲ್, ಕಿರಣ ಗುಂಟೂರ, ವಿಜಯಕುಮಾರ, ದೇವು ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಅಭಿಮಾನಿಗಳು ಇದ್ದರು.
