ಧರ್ಮಸ್ಥಳ: ಇತ್ತೀಚಿಗಷ್ಟೇ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಲ್ಲಿ ಅಡ್ಡ ಮತದಾನ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಶಾಸಕರೆಲ್ಲರೂ ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿ ಆಣೆ, ಪ್ರಮಾಣ ಮಾಡಿ ಯಾರೆಲ್ಲಾ ಬೇರೆ ಪಕ್ಷಗಳಿಗೆ ಮತ ಹಾಕಿದ್ದಾರೆ ಎಂದು ಪ್ರಮಾಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಇದನ್ನ ಬಳಸಿದರೆ ರಾಜಕೀಯದಲ್ಲಿ ಹೊಡೆತ ಬೀಳಲಾಗುತ್ತದೆ ಎಂಬ ಕಾರಣಕ್ಕೆ ಆಣೆ, ಪ್ರಮಾಣದ ಕಸರ ತನಕ ಕೈ ಬಿಟ್ಟು ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನಾಡಿನ ಪ್ರಸಿದ್ಧ ದೇವಾಲಯವಾದ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹೌದು, ಧರ್ಮಸ್ಥಳದ ಸಭೆಯ ಯೋಜನೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ, ಪಕ್ಷದ ಕೆಲವು ನಾಯಕರು ಈ ಇಡೀ ಗೊಂದಲಕ್ಕೆ ವಿಜಯೇಂದ್ರ ಅವರನ್ನೇ ದೂಷಿಸಲು ಆರಂಭಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಬೇಸರಗೊಂಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ಈಗ ಎಲ್ಲಾ ಶಾಸಕರನ್ನು ಕರೆದೊಯ್ಯುವ ನಿರ್ಧಾರ ಕೈಬಿಟ್ಟು ತಾವು ಒಬ್ಬರೇ ಧರ್ಮಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಮಾಡಿದ್ದಾರೆ. ಇದನ್ನೂ ಓದಿ: ವೈಶಾಖ್ ಆತ್ಮಹತ್ಯೆ ವಿಚಾರವನ್ನ ಪೊಲೀಸರಿಗೆ ತಿಳಿಸಿದ್ದೇ ಕೃಷಿ
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಶ್ರ Captain Brijesh Chowta, ಶಾಸಕರುಗಳಾದ Dr Bharath Shetty Y , ಹರೀಶ್ ಪೂಂಜಾ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ರಾಜೇಶ್ ನಾಯ್ಕ್, ಗುರುರಾಜ ಗಂಟಿಹೊಳೆ, ವೇದವ್ಯಾಸ್ ಕಾಮತ್, ಶ್ರೀಮತಿ ಭಾಗೀರಥಿ ಮುರಳ್ಯ, ಕಿರಣ್ ಕುಮಾರ್ ಕೊಡ್ಗಿ , ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮತ್ತಿತರರು ಜೊತೆಗಿದ್ದರು.
