ಬೆಂಗಳೂರು: ನಟಿ ಕೃಷಿ ತಾಪಂಡ ಅವರ ಆರ್‌ಆರ್ ನಗರದ ಮನೆಯಲ್ಲಿ ಗೆಳೆಯ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಕೃಷಿ ತಾಪಂಡ ಗೆಳೆಯ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ನಟಿ ಕೃಷಿ ತಾಪಂಡ ಅವರೇ ಪೊಲೀಸರಿಗೆ ತಿಳಿಸಿದ್ದರು ಎಂಬ ವಿಚಾರ ತಿಳಿದುಬಂದಿದೆ. ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಅವರು ನೆಲಮಂಗಲದಲ್ಲಿದ್ದರು. ಈ ವೇಳೆ ಹಲವು ಬಾರಿ ಕೃಷಿ ತಾಪಂಡ ಅವರಿಗೆ ವೈಶಾಖ್ ಕರೆ ಮಾಡಿದ್ದರು. ಆದರೂ ನಟಿ ಕಾಲ್ ರಿಸಿವ್ ಮಾಡಿರಲಿಲ್ಲ. ರಾತ್ರಿ 8:30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೈಶಾಖ್ ಮೆಸೆಜ್ ಕಳಿಸಿದ್ದರು.
ಈ ವಿಚಾರವನ್ನು ತಕ್ಷಣ ವೈಶಾಖ್ ಮನೆಯವರಿಗೆ ಕೃಷಿ ತಾಪಂಡ ತಿಳಿಸಿದ್ದರು. ಕೃಷಿ ತಾಪಂಡ ವಾಸವಾಗಿದ್ದ ಆರ್‌ಆರ್ ನಗರದ ಬಿ ಬ್ಲಾಕ್ 4ನೇ ಪ್ಲೋರ್‌ನ 403ನೇ ಫ್ಲಾಟ್‌ಗೆ ಹೋಗಿ ನೋಡುವಷ್ಟರಲ್ಲಿ ವೈಶಾಖ್ ಆತ್ಮಹತ್ಯೆಗೆ ಶರಣಾಗಿದ್ದರು.
ಅನೇಕ ದಿನಗಳಿಂದ ಇದೇ ನಿವಾಸದಲ್ಲಿದ್ದ ವೈಶಾಕ್ ವಾಸವಾಗಿದ್ದರು. ಇಬ್ಬರ ಬಳಿಯೂ ಮನೆಯ ಕೀ ಇತ್ತು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯದ 33 ಸ್ಪಿಲ್ ವೇ ಗೇಟುಗಳ ಲೋಕಾರ್ಪಣೆ
ಮೆಸೆಜ್ ಮಾಡಿದ ಬಳಿಕ ವೈಶಾಖ್ ಜೊತೆ ಮಾತಾಡಿದ್ದರು. ಈ ವೇಳೆ ಮನವೊಲಿಕೆಗೆ ಪ್ರಯತ್ನ ಮಾಡಿದ್ದರು. ಈ ವೇಳೆ ಕುಕ್ಕೆಗೆ ಹೋಗೋಣ ಬಾ ಎಂದಿದ್ದ ವೈಶಾಕ್, ಆಯ್ತು ನಾನು ಬರ್ತೀನಿ ಎಂದು ಕೃಷಿ ಹೇಳಿದ್ದರು.
ಇದೀಗ ವೈಶಾಕ್ ಆತ್ಮಹತ್ಯೆಯ ಬಳಿಕ ನೂರಾರು ಅನುಮಾನಗಳು ಹುಟ್ಟಿಕೊಂಡಿದ್ದು ವಿಚಾರಣೆ ನಂತರ ಇವರ ಆತ್ಮಹತ್ಯೆಗೆ ಪ್ರಮುಖ ಕಾರಣ ಏನಿದು ತಿಳಿಯಲಿದೆ.
