ಬೆಂಗಳೂರು: ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದು 13 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಕೂಡ ಕೆಲವರಿಗೆ ನೀಡಿರುವ ಸಚಿವ ಸ್ಥಾನ ಒಪ್ಪದಿದ್ದ ಕಾರಣ ಇನ್ನೂ ಕೂಡ ತಮ್ಮ ಸಚಿವ ಸ್ಥಾನದ ಜವಾಬ್ದಾರಿಯನ್ನ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ.
ಹೌದು, ಇಷ್ಟವಿಲ್ಲದ ಸಚಿವ ಸ್ಥಾನವನ್ನ ವಹಿಸಿಕೊಳ್ಳಲು ಆಗದೆ ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಾಮಲಿಂಗ ರೆಡ್ಡಿ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಇದೀಗ ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ತಮ್ಮ ಸಚಿವ ಸ್ಥಾನದ ಜವಾಬ್ದಾರಿಯನ್ನ ವಹಿಸಿಕೊಂಡಿಲ್ಲ.
ನನಗೆ ನೀಡಿರುವ ಸಚಿವ ಸ್ಥಾನದಲ್ಲಿ ನನಗೆ ಆಸಕ್ತಿ ಇಲ್ಲ ಹಾಗಾಗಿ ನಾನು ಮೊದಲು ಯಾವ ಸಚಿವ ಸ್ಥಾನದಲ್ಲಿದೆ ಅದನ್ನ ವಹಿಸಿದರೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬಹುದು ಎಂದು ಈಗಾಗಲೇ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಆದರೆ ಸಿಎಂ ಡಿಕೆಶಿ ಅವರ ಸಚಿವ ಸಂಪುಟದಲ್ಲಿ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ದಿ ಖಾತೆಯನ್ನು ವಹಿಸಿದ್ದರು ಕೂಡ ಅದನ್ನು ಒಪ್ಪಿಕೊಳ್ಳದ ಕೃಷ್ಣ ಬೈರೇಗೌಡ ಅವರು ಒಪ್ಪಿಕೊಳ್ಳುತ್ತಿಲ್ಲ.
ಖಾತೆ ಅಧಿಕಾರ ವಹಿಸಿಕೊಳ್ಳದ ಬಗ್ಗೆ ಮಾತನಾಡಿದ ಅವರು, ಖಾತೆ ವಿಚಾರಕ್ಕೆ ಕೆಲವು ಸ್ಪಷ್ಟತೆ ಬೇಕಿದೆ. ಖಾತೆ ಜವಾಬ್ದಾರಿ ತೆಗೆದುಕೊಳ್ಳುವಾಗ ಕೆಲ ಸ್ಪಷ್ಟತೆ ಇರಬೇಕು. ಜವಾಬ್ದಾರಿಗೆ ಸರಿಯಾಗಿ ನಿರ್ವಹಣೆ ಮಾಡಿ ರಿಸಲ್ಟ್ ಕೊಡಬೇಕು. ಸಿಎಂ ಅವರಿಗೆ ಯಾವ ಸ್ಪಷ್ಟತೆ ಇರಬೇಕು ಎಂದು ಮನವರಿಕೆ ಮಾಡಿದ್ದೇನೆ. ಆದಷ್ಟು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದ ಕಠಿಣ ಜವಾಬ್ದಾರಿಗಳಲ್ಲಿ ಬೆಂಗಳೂರು ಖಾತೆ ಕೂಡ ಒಂದು. ಸಿಎಂ ಖಾತೆ ಬಗ್ಗೆ ಸ್ಪಷ್ಟತೆ ನೀಡಿದ ನಂತರ ನಾನು ಮುಂದುವರೆಯುತ್ತೇನೆ. ಅಧಿಕಾರ ಒಂದೇ ನೋಡೋದಲ್ಲ, ಮುಂದೆ ನಾನು ಉತ್ತರ ಕೊಡಬೇಕಾಗುತ್ತದೆ. ಸ್ಪಷ್ಟತೆ ಇಲ್ಲದೇ ಕೆಲಸ ಮಾಡಲು ಹೋದರೆ ತೊಂದರೆಯಾಗುತ್ತದೆ. ಸಿಎಂ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಕೆರೆಗೆ ಕೊಳಚೆ ನೀರು ಸೇರಬಾರದು: ಸುಷಮಾ ಗೋಡಬೋಲೆ
ಹಾಗಾಗಿ ನಾನು ಸಿಎಂ ಅವರ ಸ್ಪಷ್ಟತೆಗೆ ಕಾಯುತ್ತಿದ್ದೇನೆ ಅಲ್ಲಿವರೆಗೂ ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
