ಬೆಂಗಳೂರು: ಕಳೆದ ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮ ಹಾಗೂ ಟಿವಿ ಚಾನಲ್ ಸೇರಿದಂತೆ ಪತ್ರಿಕೆಗಳಲ್ಲಿ ಕೂಡ ಕನ್ನಡ ಚಿತ್ರರಂಗದ ನಟಿ ಶುಭಾ ಪೂಂಜಾ ಅವರ ಸಂಸಾರಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಹಾರಿದಾಡುತ್ತಿತ್ತು. ಇದೀಗ ಈ ಕುರಿತು ಖುದ್ದು ಶುಭಾ ಪೂಂಜಾ ಅವರೇ ತಮ್ಮ instagram ಖಾತೆ ಮೂಲಕ ಮಹತ್ವ ಪೋಸ್ಟ್ ಒಂದನು ಹಂಚಿಕೊಂಡಿದ್ದಾರೆ.
ಹೌದು, ನಟಿ ಶುಭಾ ಪೂಂಜಾ ಈ ಎಲ್ಲಾ ಚರ್ಚೆಗಳ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಮಾಧ್ಯಮ ಮಿತ್ರರಲ್ಲಿ ಮತ್ತು ಅಭಿಮಾನಿಗಳಲ್ಲಿ ಒಂದು ಪ್ರಮುಖ ಮನವಿ ಮಾಡಿದ್ದಾರೆ.
ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು… ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ ನನ್ನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೀರಿ.. ಇದೀಗ ನಾನು ಕೇಳಿಕೊಳ್ಳುವುದು ಇಷ್ಟೇ, ಸಮಯ ಬಂದಾಗ ನನ್ನ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ನಾನೇ ನಿಮಗೆ ಖುದ್ದಾಗಿ ತಿಳಿಸುತ್ತೇನೆ ಅಲ್ಲಿಯವರೆಗೂ ನನಗೂ ಹಾಗೂ ಸುಮಂತ್ ಅವ್ರಿಗೂ ಸ್ವಲ್ಪ ಸಮಯಾವಕಾಶ ಕೊಡಿ ಅಂತ ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರುಕ್ಮಿಣಿ ಬಸಂತ್ ಬಿಕ್ನಿ ಫೋಟೋ ಹರಿ ಬಿಟ್ಟಿರುವವರ ವಿರುದ್ಧ ಪೊಲೀಸರಿಂದ ತನಿಖೆ ಚುರುಕು
ಈ ಪೋಸ್ಟ್ ಮೂಲಕ ಇದೀಗ ಎಲ್ಲಾ ಶುಭಾ ಪೂಂಜಾ ಅಭಿಮಾನಿಗಳಲ್ಲಿ ಒಂದೇ ಒಂದು ಪ್ರಶ್ನೆ ಮೂಡಿರುವುದೇನೆಂದರೆ ಅವರ ಸಂಸಾರಿಕ ಜೀವನದಲ್ಲಿ ಏನಾಗಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಹಾಗಾದ್ರೆ ಪೋಸ್ಟ್ ಮೂಲಕ ಮನವಿ ಮಾಡಿರುವ ಶುಭಾ ಪೂಂಜಾ ಅವರು ಯಾವ ಮಾಹಿತಿ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
