ಬೆಂಗಳೂರು: ಬಹುನಿರೀಕ್ಷಿತ ‘ಪೆಡ್ಡಿ’ ಸಿನಿಮಾ ಜೂನ್ 04 ರಂದು ಅದ್ದೂರಿಯಾಗಿ ಬಿಡುಗಡೆಗೆ ಆಗುತ್ತಿದ್ದು, ಈ ಸಿನಿಮಾದ ಪ್ರಚಾರದಲ್ಲಿ ಇದೀಗ ರಾಮ್ ಚರಣ್ ಹಾಗೂ ಸಾನ್ವಿ ಕಪೂರ್, ದೇಶದಾದ್ಯಂತ ಪೆದ್ದಿ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದು, ಇದೀಗ ಈ ಪ್ರಚಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮಾಡಿದ್ದು ಈ ಕಾರ್ಯಕ್ರಮದಲ್ಲಿ ರಾಮ್ ಚರಣ್ ಹಾಗೂ ಸಾನ್ವಿಯವರು ಕನ್ನಡ ಅಭಿಮಾನಿಗಳಿಗೆ ಕನ್ನಡದಲ್ಲಿ ಮಾತನಾಡಿ ಮನರಂಜಿಸಿದ್ದಾರೆ.
ಹೌದು, ಬೆಂಗಳೂರಿನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದ ಫೋಟೋಗಳನ್ನ ರಾಮಚರಣ್ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಇದೀಗ ಈ ಫೋಟೋ ನೋಡಿದ ಅಭಿಮಾನಿಗಳು ವಿಧ ವಿಧ ಕಾಮೆಂಟ್ ಹಾಕುವ ಮೂಲಕ ಪೆಡ್ಡಿ ಸಿನಿಮಾಗೆ ಆಲ್ ದ ಬೆಸ್ಟ್ ಹೇಳಿದ್ದಾರೆ.
ಇನ್ನು ಫೋಟೋಗಳನ್ನ ರಾಮ್ ಚರಣ್ ಅವರ ಲುಕ್ ಜೊತೆಗೆ ಎಲ್ಲರ ಗಮನ ಸೆಳೆಯುತ್ತಿರುವುದು ಅವರ ಪಕ್ಕದಲ್ಲೇ ಇರುವ ಒಂದು ಬೃಹತ್ ಕಟೌಟ್‌ನಂತಹ ವ್ಯಕ್ತಿ. ಸೋಷಿಯಲ್ ಮೀಡಿಯಾದಲ್ಲಿ ಬೀಸ್ಟ್ ಎಂದೇ ವೈರಲ್ ಆಗಿರುವ ಈ ವ್ಯಕ್ತಿ, ರಾಮ್ ಚರಣ್ ಅವರ ಹಿಂದೆ ರಕ್ಷಣಾತ್ಮಕ ಗುರಾಣಿಯಂತೆ ನಿಂತು ಭದ್ರತೆ ಒದಗಿಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ನಟ ರಣವೀರ್ ಸಿಂಗ್ ಭೇಟಿ
ಈ ಹೊಸ ಬಾಡಿಗಾರ್ಡ್ ಹೆಸರು ಕೆವಿನ್ ಕುಂಟಾ. ಆಫ್ರಿಕಾದ ಗ್ಯಾಂಬಿಯಾ ಮೂಲದ ಕೆವಿನ್, ಪ್ರಸ್ತುತ ಇಟಲಿಯಲ್ಲಿ ವೃತ್ತಿಪರ ಮಿಶ್ರ ಸಮರ ಕಲೆಗಳ ಹೋರಾಟಗಾರರಾಗಿದ್ದು, ಅಲ್ಲಿನ ರಾಷ್ಟ್ರೀಯ ಮಿಡಲ್‌ವೇಟ್ ಎಂಎಂಎ ಚಾಂಪಿಯನ್ ಕೂಡ ಆಗಿದ್ದಾರೆ. ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಹಾಗೂ ವಿವಿಐಪಿಗಳಿಗೆ ಅತ್ಯುನ್ನತ ಮಟ್ಟದ ಕ್ಲೋಸ್ ಪ್ರೊಟೆಕ್ಷನ್ ಭದ್ರತೆ ಒದಗಿಸುವಲ್ಲಿ ಇವರು ವಿಶ್ವದಾದ್ಯಂತ ಭಾರಿ ಬೇಡಿಕೆ ಹೊಂದಿದ್ದಾರೆ.
