ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ನಾನಾ ಅಭಿವೃದ್ಧಿ ಯೋಜನೆಗಳ ಪ್ರಗತಿ ಸಂಬಂಧ ಬಿಎಂಆರ್ ಡಿಎ ಕಚೇರಿಯಲ್ಲಿ ಇಂದು (ಶುಕ್ರವಾರ ಮೇ 22) ಅಧಿಕಾರಿಗಳ ಸಭೆ ನಡೆಸಿದರು.
ಸಭೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್ ಐ ಆರ್ ಇದೀಗ ಕರ್ನಾಟಕ ರಾಜ್ಯದಲ್ಲಿ ಅನೌನ್ಸ್ ಆಗಿದ್ದು, ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದರೆ ತಮ್ಮ ವೋಟುಗಳನ್ನು ಕಳೆದುಕೊಳ್ಳಬಹುದು ಹಾಗಾಗಿ ಎಲ್ಲರೂ ಕೂಡ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಈಗಾಗಲೇ ಬೇರೆ ರಾಜ್ಯದಲ್ಲಿ ನಾವು ನೋಡಿದ್ದೇವೆ, ಬಡವರ ಮತದಾನದ ಹಕ್ಕನ್ನ ತೆಗೆದು ಹಾಕಲು ದೊಡ್ಡ ಸಂಚು ನಡೆಯುತ್ತಿದೆ. ಹಾಗಾಗಿ ನಾವೆಲ್ಲರೂ ಬಹಳ ಜಾಗೃತರಾಗಿರಬೇಕು ಎಂದು ತಿಳಿಸಿದರು.
ಈಗಾಗಲೇ ನಾವು ನಮ್ಮ ಪಕ್ಷದ ಶಾಸಕರಿಗೆ ತಿಳಿಸಿರುವ ಹಾಗೆ ಎಲ್ಲರನ್ನ ಸಭೆಗೆ ಕರೆದು ಮಾತುಕತೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ನೋಟಿಫಿಕೇಶನ್ ಬಂದಾಗಿದೆ ಹಾಗಾಗಿ ಎಲ್ಲರೂ ಅರ್ಜಿ, ದಾಖಲೆಗಳನ್ನು ಕೊಡಬೇಕಾಗಿ ಎಂದು ನಾನು ಸಭೆ ಮೂಲಕ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವರು ಮಾಡ್ತಿರೋದು ಅತಿರೇಕ ವಾಗ್ತಿದೆ: ಯತ್ನಾಳ್
ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ವೋಟ್ ಕಳೆದುಕೊಳ್ಳುವ ಭಯ ಇರುತ್ತದೆ ಹಾಗಾಗಿ ಮುನ್ನೆಚ್ಚರಿಕೆಯಿಂದ ಎಲ್ಲರೂ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ವೋಟ್ ಕಳೆದುಕೊಂಡರೆ ಅವರು ಮುಂದಿನ ದಿನಗಳಲ್ಲಿ ಉಚಿತ ಬಸ್ ಹಾಗೂ ಶಕ್ತಿ ಯೋಜನೆ ಸೇರಿದಂತೆ ಯಾವುದೇ ಯೋಜನೆಗೂ ಅವರು ಅರ್ಹರಿರುವುದಿಲ್ಲ ಎಂದು ಹೇಳಿದರು.
