ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರವು ಮುಸ್ಲಿಮರ ಓಲೈಕೆಗಾಗಿ ಈಗಾಗಲೇ ಹಲವಾರು ರೀತಿ ತಪ್ಪುಗಳನ್ನು ಮಾಡಿದ್ದರು ಕೂಡ ನಾವೆಲ್ಲರೂ ಹಿಂದೂಗಳು ಅದನ್ನೆಲ್ಲ ಸಹಿಸಿಕೊಂಡು ಸುಮ್ಮನೆ ಇದ್ದೇವೆ. ಆದರೆ ಹಿಂದೂಗಳನ್ನ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿ ಲೆಕ್ಕಿಸದೆ ಕೇವಲ ಮುಸ್ಲಿಮರ ವೋಟ್ ಬ್ಯಾಂಕಿಂಗ್ ಪಡೆಯಲು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಪುಂಡ ಪೋಕರಿಗಳಿಗೆ ಬಿಡುಗಡೆ ನೀಡುತ್ತಿರುವುದು ಮಹಾಕಂಡನಿಯಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದರ ಮೇಲೆ ಕಲ್ಲು ತೂರಾಟ ಮಾಡಿದವರು, ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಾಟೆ ಮಾಡಿದವರು, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಕೇಸ್ ಹಿಂಪಡೆದಿದ್ದಾರೆ. ಈಗ ರಾಜ್ಯ ಸರ್ಕಾರ ಲಾಡ್ಲೆ ಮಶಾಕ್ ಕೇಸ್ ಹಿಂಪಡೆದ ವಿಚಾರಕ್ಕೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಅವರು ಜಿಬಿಎ ಚುನಾವಣೆ ಬಗ್ಗೆ ಹೇಳಿದ್ದೇನು?
ಇದು ಮತ್ತಷ್ಟು ಕ್ರೈಂಗೆ ಉತ್ತೇಜನ ಕೊಟ್ಟಂತಾಗುತ್ತೆ. ಇದನ್ನ ವಿರೋಧಿಸಬೇಕಾದ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ವಿಜಯೇಂದ್ರ ಕೂಡ ಅನೇಕ ವಂಚನೆ, ನಕಲಿ ಸಹಿ ಮಾಡಿ ಹಣ ಲೂಟಿ ಹೊಡೆಸಿದ್ದಾನೆ. ಹೀಗಾಗಿ ಇಂತಹ ವಿಷಯಗಳ ಬಗ್ಗೆ ವಿರೋಧ ಮಾಡುವ ನೈತಿಕತೆ ವಿಜಯೇಂದ್ರ ಬಳಿ ಇಲ್ಲ ಎಂದಿದ್ದಾರೆ.
