ಮಂಗಳೂರು: ಕರ್ನಾಟಕ ರಾಜ್ಯದಲ್ಲಿರುವ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಕೂಡ ಒಂದು ಶಕ್ತಿಶಾಲಿ ದೇವಾಲಯವಾಗಿದೆ. ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಮತ್ತೊಂದು ದಾಖಲೆ ಬರೆದಿದೆ.
ಹೌದು, ರಾಜ್ಯದ ಶ್ರೀಮಂತ ದೇವಾಲಯವಾದ ಕುಕ್ಕೆ ಸುಬ್ರಹ್ಮಣ್ಯ 2025-26ನೇ ಸಾಲಿನಲ್ಲಿ 167 ಕೋಟಿ 89 ಲಕ್ಷ ಆದಾಯ ಗಳಿಸಿ ದಾಖಲೆ ಬರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.
ದೇವಾಲಯದ ಪ್ರಮುಖ ಆದಾಯ ಮೂಲವೇ ಹರಕೆ ಸೇವೆಗಳಾಗಿವೆ. ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಂದಲೇ 64 ಕೋಟಿಗೂ ಅಧಿಕ ಆದಾಯ ಬಂದಿದೆ. ಹುಂಡಿ ಕಾಣಿಕೆಯಿಂದ 24 ಕೋಟಿ ರೂಪಾಯಿ, ಸಾಮಾನ್ಯ ಕಾಣಿಕೆಯಿಂದ 5 ಕೋಟಿ ರೂಪಾಯಿ, ಹೂಡಿಕೆಗಳ ಮೇಲಿನ ಬಡ್ಡಿಯಿಂದ ಸುಮಾರು 49 ಕೋಟಿ ರೂಪಾಯಿ ಆದಾಯ ಲಭಿಸಿದೆ. ಇದನ್ನೂ ಓದಿ: ಜೈಲಿನಲ್ಲಿರುವ ಪತಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ
ಇದರ ಜೊತೆಗೆ ಛತ್ರಗಳ ಬಾಡಿಗೆ, ಕಟ್ಟಡ ಹಾಗೂ ಅಂಗಡಿಗಳ ಬಾಡಿಗೆ, ಕೃಷಿ ತೋಟದ ಉತ್ಪನ್ನಗಳು, ಅನ್ನಸಂತರ್ಪಣೆ ನಿಧಿ ಸೇರಿದಂತೆ ವಿವಿಧ ಮೂಲಗಳಿಂದಲೂ ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ.
