Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಕಾಂಗ್ರೆಸ್ ನವರು ಬಣ್ಣ ಬಣ್ಣದ ಚಿತ್ರ ಹಾಕಿ ಪ್ರಚಾರ ಮಾಡಿದ್ದಾರೆ: ಹೆಚ್‌ ಡಿಕೆ
  • Bangalore
  • Politics
  • State

ಕಾಂಗ್ರೆಸ್ ನವರು ಬಣ್ಣ ಬಣ್ಣದ ಚಿತ್ರ ಹಾಕಿ ಪ್ರಚಾರ ಮಾಡಿದ್ದಾರೆ: ಹೆಚ್‌ ಡಿಕೆ

Praja Vahini May 19, 2026 1 minute read
WhatsApp Image 2026-05-19 at 16.36.58
Spread the love

ಬೆಂಗಳೂರು: ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿರುವ ರೈತರ ಸಮಾಧಿ ಮೇಲೆ ಸಾಧನ ಸಮಾವೇಶ ಪ್ರದರ್ಶನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಹೊರ ಹಾಕಿದ್ದಾರೆ.

ನಗರದಲ್ಲಿ ಇಂದು (ಮಂಗಳವಾರ ಮೇ 19) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಸಮರ್ಪಣಾ ಸಮಾವೇಶ ಮಾಡುತ್ತಿದ್ದಾರೆ. ಕಳೆದ ವರ್ಷವೂ ಸಮಾವೇಶ ಮಾಡಿದರು. ಬಣ್ಣ ಬಣ್ಣದ ಚಿತ್ರ ಹಾಕಿ ಪ್ರಚಾರ ಮಾಡಿದ್ದಾರೆ. 1.54 ಲಕ್ಷ ಹಕ್ಕು ಪತ್ರ ವಿತರಣೆ ಮಾಡುತ್ತೇನೆ ಅಂದಿದ್ದಾರೆ. ಕಳೆದ ವರ್ಷವೂ ಇದೆ ಮಾಡಿದ್ದಾರೆ. ಪ್ರತಿನಿತ್ಯ ಪ್ರಚಾರ ಮಾಡೋದು ನೋಡಿದ್ದೇವೆ.

ಸಚಿವರೊಬ್ಬರು ರೈತರ ಆತ್ಮಹತ್ಯೆ ಕಡಿಮೆ ಆಗಿದೆ ಅಂತಾರೆ. ಎನ್‌ಸಿಆರ್ ಎಂಬ ಸಂಸ್ಥೆ ಸರ್ವೆ ಪ್ರಕಾರ 2023ರಲ್ಲಿ 2,400 ರೈತರ ಆತ್ಮಹತ್ಯೆ, 2024ರಲ್ಲಿ 2,900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆತ್ಮಹತ್ಯೆ ಪ್ರಕರಣವನ್ನ ಜಾಣತನದಿಂದ ಈ ಸರ್ಕಾರ ಮುಚ್ಚಿಟ್ಟಿದ್ದಾರೆ. ಎರಡು ವರ್ಷಗಳಲ್ಲಿ 5 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅವರ ಸಾಧನೆ. ರೈತರ ಆತ್ಮಹತ್ಯೆ ದಾಖಲೆಗಳನ್ನು ಸಮರ್ಪಣೆ ಮಾಡಲು ಇವರು ತುಮಕೂರಿಗೆ ಹೋಗಿದ್ದಾರಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಎಂಟಿಸಿ ಬಸ್ ಟಯರ್ ಬದಲಾವಣೆ ಮಾಡೋ ಯೋಗ್ಯತೆ ಕೂಡ ಸರ್ಕಾರಕ್ಕಿಲ್ಲ: ನಿಖಿಲ್

ಈ ಸರ್ಕಾರ ವಿಷಯಗಳನ್ನು ಮುಚ್ಚಿಡಲು ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಏನಾಗಿದೆ. ನಿನ್ನೆ 10 ನಿಮಿಷ ಮಳೆ ಬಂದಿದ್ದಕ್ಕೆ ಹಲವಾರು ಭಾಗದಲ್ಲಿ ನೀರು ನಿಂತು ಸಮಸ್ಯೆ ಆಗಿದೆ. ಈ ಸಮಾವೇಶಕ್ಕೆ ಕೊಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾರೆ. ಸಮಾವೇಶಕ್ಕೆ ಜನರನ್ನು ಕರೆಸೋಕೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಇವರು ಕಾರ್ಯಕ್ರಮ ಮಾಡಿದರೆ ಜನ ಬರಲ್ಲ. ಅದಕ್ಕಾಗಿ ಅಧಿಕಾರಿಗಳ ಮೂಲಕ ಜನ ಸರ್ಕಾರದ ದುಡ್ಡಲ್ಲಿ ತರಿಸುತ್ತಿದ್ದಾರೆ. ರೈತರ ಸಮಾಧಿ ಮೇಲೆ ಈ ಸರ್ಕಾರ ಈ ಪ್ರದರ್ಶನ ಮಾಡಿದ್ದಾರೆ. ಇದು ಖಂಡನೀಯ ಅಂತ ಕಿಡಿಕಾರಿದರು.

 

About the Author

Praja Vahini

Editor

View All Posts

Spread the love

Post navigation

Previous: ಬಿಎಂಟಿಸಿ ಬಸ್ ಟಯರ್ ಬದಲಾವಣೆ ಮಾಡೋ ಯೋಗ್ಯತೆ ಕೂಡ ಸರ್ಕಾರಕ್ಕಿಲ್ಲ: ನಿಖಿಲ್
Next: ಕ್ರಿಕೆಟಿಗನ ಜೊತೆ ಶ್ರೀಲೀಲಾ ಡೇಟಿಂಗ್; ಶ್ರೀಲೀಲಾ ತಾಯಿ ಹೇಳಿದ್ದೇನು?

Views:

17

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.