ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತುಮಕೂರಿನಲ್ಲಿ ಅದ್ದೂರಿಯಾಗಿ ಸಾಧನ ಸಮಾವೇಶವನ್ನ ಹಮ್ಮಿಕೊಂಡಿದ್ದರು.
ಇನ್ನು ಕಾಂಗ್ರೆಸ್ ಪಕ್ಷದ ಸಾಧನ ಸಮಾವೇಶ ಕುರಿತು ಈಗ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರು ಒಂದಲ್ಲ ಒಂದು ಟೀಕೆ ಮಾಡುತ್ತಿದ್ದಾರೆ.
ಸಾಧನ ಸಮಾವೇಶ ಕುರಿತು ಇದೀಗ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದ್ದು, ಸಾರ್ವಜನಿಕರ ಹಣದಲ್ಲಿ ಮೋಜು-ಮಸ್ತಿ ಮಾಡಲು ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶದಲ್ಲಿ ಹಣ ದುಂದು ವೆಚ್ಚ ಮಾಡುತ್ತಿದೆ ಎಂದು ಕಿರಿಕರಿದ್ದಾರೆ.
ಈ ಕುರಿತು ನಗರದಲ್ಲಿ ಇಂದು (ಮಂಗಳವಾರ ಮೇ 19) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಸಾಧನೆ ಸಮಾವೇಶ ಮಾಡುತ್ತಿದ್ದಾರೆ ಗೊತ್ತಿಲ್ಲ. ಜನ ಸಾಮಾನ್ಯರೇ ವಿಪಕ್ಷಗಳಿಗಿಂದ ಹೆಚ್ಚು ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಎಂದು ನೋಡುತ್ತಿದ್ದೇವೆ. ನೌಕರರಿಗೆ ಅರಿಯರ್ಸ್ ಬಾಕಿ ಉಳಿಸಿಕೊಂಡಿದೆ. ಸಂಧಾನ ಸಭೆ ಮಾಡಿದರೂ ಫಲ ಆಗಿಲ್ಲ. ಶಕ್ತಿ ಯೋಜನೆ ಮೂಲಕ ಫ್ರೀ ಬಸ್ ಅಂದು ಅಂದು ಇವತ್ತು ಸಾರಿಗೆ ಇಲಾಖೆ ಎಲ್ಲಿಗೆ ಬಂದು ನಿಂತಿದೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ತುಮಕೂರು ಅನ್ನ, ಅಕ್ಷರ, ಆಶ್ರಯ ನೀಡಿರುವ ಪವಿತ್ರ ಭೂಮಿ: ಡಿಕೆಶಿ
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಒಂದು ಟಯರ್ ಬದಲಾವಣೆ ಮಾಡೋಕೆ ಆಗಿಲ್ಲ ಈ ಸರ್ಕಾರಕ್ಕೆ. ಬಸ್ ಮೇಂಟೇನ್ ಮಾಡೋಕೆ ಸರ್ಕಾರದ ಬಳಿ ಬಿಡಿಗಾಸು ಹಣವಿಲ್ಲ. ಸಂಬಳ ಕೊಡೋದಕ್ಕೂ ಸರಿಯಾಗಿ ತೀರ್ಮಾನ ಮಾಡುತ್ತಿಲ್ಲ. ಕುಮಾರಸ್ವಾಮಿ ಅವರು 4,500 ಇವಿ ಬಸ್ ಬೆಂಗಳೂರಿಗೆ ಕೊಡದೇ ಹೋಗಿದ್ರೆ ಪರಿಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.
