ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ಕನ್ನಡ ಚಿತ್ರದಲ್ಲಿ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮನಸ್ಸಲ್ಲಿ ಬೇರುರಿದ್ದಾರೆ.
ಇನ್ನು ತೆಲುಗಿನಲ್ಲೂ ನಟ ಶಿವರಾಜ್ ಕುಮಾರ್ ಅವರು ನಟಿಸುತ್ತಿದ್ದು, ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ ಪೆದ್ದಿ ಸಿನಿಮಾದಲ್ಲಿ ಕರುನಾಡ ಕಿಂಗ್ ಶಿವರಾಜ್ ಕುಮಾರ್ ಅವರು ಅಭಿನಯಿಸಿದ್ದು, ತೆಲುಗಿನ ಗೌರ್ ನಾಯ್ಡು ಅವತಾರದಲ್ಲಿ ನಟ ಶಿವರಾಜ್ ಕುಮಾರ್ ಅವರು ಮಿಂಚಲಿದ್ದಾರೆ.
ಹೌದು, ಜೂನ್ 4ರಂದು ಅದ್ದೂರಿಯಾಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿರುವ ಪೆದ್ದಿ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರು ಖಡಕ್ ಲುಕ್ಕಿನಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಹೆಗಲ ಮೇಲೆ ಶಾಲು ಗತ್ತು ಗಾಂಭೀರ್ಯದಿಂದ ನಟ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್ ರಚಿತಾ ರಾಮ್ ಬಣ್ಣದ ಪಯಣಕ್ಕೆ 14 ವರ್ಷದ ಸಂಭ್ರಮ
ಇನ್ನು ಶಿವಣ್ಣ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣ-ರಾಮ್ ಚರಣ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇವರಿಬ್ಬರನ್ನು ನೋಡಿ ಥ್ರಿಲ್ ಆಗಿದ್ದಾರೆ.
