ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿತ್ತು. ಈ ಪದ್ಧತಿ ಹಿಂದಿನಿಂದಲೇ ಇದ್ದ ಪದ್ಧತಿ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಈ ಕುರಿತು ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರಿಗೆ ಪ್ರಚೋದನೆ ಮಾಡುವ ರೀತಿಯಲ್ಲಿ ಸರ್ಕಾರ ನೀತಿ, ಕಾನೂನುಗಳನ್ನು ತರಬಾರದು. ಕರ್ನಾಟಕದಲ್ಲಿ ಹಿಜಾಬ್ ಹಿಂದಿನಿಂದಲೂ ಇದ್ದ ಧಾರ್ಮಿಕ ಪದ್ಧತಿ, ಹೊಸದಾಗಿ ನಾವು ನೀತಿ ತಂದಿಲ್ಲ ಎಂದರು. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿ ಗಮನಿಸಿ; ಭಾನುವಾರ ಈ ಮಾರ್ಗ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ
ಬಿಜೆಪಿಯವರೇ ಮಧ್ಯದಲ್ಲಿ ಹಿಜಾಬ್ ಧರಿಸಬಾರದು ಎಂದು ಕಾನೂನು ತಂದರು. ಎಷ್ಟೋ ವರ್ಷಗಳಿಂದ ಇದ್ಧ ಪದ್ಧತಿಗೆ ತಡೆ ತಂದಿದ್ದೇ ಅವರು. ಜನಿವಾರ ಹಾಕಿ ಎಂದು ನಾವು ಹೊಸದಾಗಿ ಹೇಳುತ್ತಿಲ್ಲ, ಈಗಾಗಲೇ ಧರಿಸುವವರಿಗೆ ಬೇಡ ಅಂದಿಲ್ಲ, ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಲಿ ಎಂದರು.
