ಬೆಂಗಳೂರು: ರಾಮನಗರ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಬಿಡದಿ ಪುರಸಭೆಯ ಸದಸ್ಯರಾದ ರಾಮಚಂದ್ರಪ್ಪ ಅವರು ನಿಧನರಾಗಿದ್ದು, ಇಟ್ಟಮಡು ಬಿಡದಿಯ ಅವರ ನಿವಾಸಕ್ಕೆ ಭೇಟಿ ನೀಡಿ ರಾಮಚಂದ್ರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಡೆದು, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಇದನ್ನೂ ಓದಿ: ತಮಿಳುನಾಡಿನ ಸಿಎಂ ಗೆ ಶುಭಕೋರಿದ ಕರ್ನಾಟಕದ ಸಿಎಂ
ಸಮಾಜ ಸೇವೆ ಹಾಗೂ ಜನಪರ ಕಾಳಜಿ ಹೊಂದಿದ್ದ ರಾಮಚಂದ್ರಪ್ಪ ಅವರ ನಿಧನವು ದುಃಖಕರ ವಿಷಯವಾಗಿದೆ. ದೇವರು ರಾಮಚಂದ್ರಪ್ಪ ಅವರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಹಾಗೂ ಕುಟುಂಬಸ್ಥರಿಗೆ, ಆತ್ಮೀಯರಿಗೆ ಹಾಗೂ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
