ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಜೀರುಂಡೆ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಸಮಾರಂಭದಲ್ಲಿ, ಪ್ರಖ್ಯಾತ ಚಿಂತಕ ಶ್ರೀ ಕಂಚ ಐಲಯ್ಯ ಶೆಫರ್ಡ್ ಅವರ ‘ಶೂದ್ರ ಬಂಡಾಯ’ ಕೃತಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಡುಗಡೆಗೊಳಿಸಿದರು.
ಕೃತಿ ಲೋಕಾರ್ಪಣೆ ಮಾಡಿ ನಂತರ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ ತರಲು ಶಿಕ್ಷಣವೇ ಅತ್ಯಂತ ಪ್ರಬಲ ಅಸ್ತ್ರ. ಶೂದ್ರ ಸಮುದಾಯಗಳ ಐತಿಹಾಸಿಕ ಹಿನ್ನೆಲೆ, ಸಂಸ್ಕೃತಿ ಹಾಗೂ ಅವರು ಎದುರಿಸುತ್ತಿರುವ ಸಾಮಾಜಿಕ ಸವಾಲುಗಳನ್ನು ಈ ಕೃತಿಯು ಆಳವಾಗಿ ವಿಶ್ಲೇಷಿಸುತ್ತದೆ. ಇಂತಹ ವೈಚಾರಿಕ ಕೃತಿಗಳು ಓದುಗರಲ್ಲಿ ಹೊಸ ಆಲೋಚನೆ ಹಾಗೂ ಸಾಂಸ್ಕೃತಿಕ ಹೋರಾಟದ ಕಿಚ್ಚನ್ನು ಹಚ್ಚುತ್ತವೆ. ಸರ್ವರಿಗೂ ಸಮಾನ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಇದನ್ನೂ ಓದಿ: ಕ್ರೀಡೆ ಕೇವಲ ಮನರಂಜನೆಗಾಗಿ ಮಾತ್ರವಲ್ಲ: ಡಾ ಮಂಜುನಾಥ್
ಈ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಕರಾದ ಎ. ನಾರಾಯಣ್, ಕವಯಿತ್ರಿ ಶ್ರೀಮತಿ ಭಾರತಿ ದೇವಿ, ಅನುವಾದಕಿ ಶ್ರೀಮತಿ ಜಯಲಕ್ಷ್ಮಿ, ಪ್ರಕಾಶಕರಾದ ಧನಂಜಯ ಎನ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
