Skip to content
November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
prajavahini-logo-sm

Primary Menu
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Live
  • Home
  • ಜಗತ್ತಿನಲ್ಲಿ ಮಾನವೀಯತೆ ಸಂಪೂರ್ಣ ಮಾಯವಾಗಿದೆ: ಬೊಮ್ಮಾಯಿ
  • Politics
  • State
  • ಗದಗ

ಜಗತ್ತಿನಲ್ಲಿ ಮಾನವೀಯತೆ ಸಂಪೂರ್ಣ ಮಾಯವಾಗಿದೆ: ಬೊಮ್ಮಾಯಿ

Praja Vahini May 7, 2026 1 minute read
WhatsApp Image 2026-05-07 at 18.22.10
Spread the love

ಗದಗ(ಗಜೇಂದ್ರಗಢ)ನಮ್ಮ ದೇಶದಲ್ಲಿ ಕೃಷಿ ಬೆಳೆದಿದೆ ಆದರೆ, ರೈತ ಎಲ್ಲಿದ್ದಾನೆ ಅಲ್ಲಿಯೇ ಇದ್ದಾನೆ. ಕೃಷಿಯಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಕೃಷಿಯಿಂದ ಶೇ 60 ಕ್ಕಿಂತ ಹೆಚ್ಚು ಜಿಡಿಪಿ ಇತ್ತು. ಆದರೆ, ಕೃಷಿಯಿಂದ ಜಿಡಿಪಿ ಕಡಿಮೆಯಾಗಿದೆ. ಕೃಷಿ ವಲಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಚರ್ಚೆ ನಡೆಸುವುದು ಅಗತ್ಯವಿದೆ ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಇಂದು (ಗುರುವಾರ ಮೇ 07) ವೀರಶೈವ ಧರ್ಮಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ 50 ನೇ ವರ್ಷದ ರಥೋತ್ಸವದ ನಿಮಿತ್ತವಾಗಿ ನೂತನ ರಥ ಲೋಕಾರ್ಪಣೆ ಹಾಗೂ ಧರ್ಮ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದರು. ನಾವೆಲ್ಲರೂ ಮನುಷ್ಯರಾಗಿ ಹುಟ್ಟಿ ಮನುಷ್ಯರಾಗಿಯೇ ಹೋಗುತ್ತೇವೆ. ಆದರೆ, ಕೆಲವರು ಮನುಷ್ಯರಾಗಿ ಹುಟ್ಟಿ ಮಾನವರಾಗಿ ದೇವ ಮಾನವರಾಗುತ್ತಾರೆ. ಮನುಷ್ಯ ಮತ್ತು ಮಾನವರ ನಡುವೆ ಇರುವ ವ್ಯತ್ಯಾಸ ಇಷ್ಟೆ.

ಕಾಮ, ಕ್ರೋಧ, ಮೋಹ, ಮದ, ಮತ್ಸರದ ಸಂಕೋಲೆಯಲ್ಲಿ ಸಿಲುಕಿರುವವನು ಮನುಷ್ಯ, ನ್ಯಾಯ, ನೀತಿ, ಧರ್ಮ, ಪ್ರೀತಿ, ಕರುಣೆಯಲ್ಲಿ ಸಿಲುಕಿರುವವನು ಮಾನವ. ಮಾನವೀಯ ಗುಣಗಳು ಎಂದರೆ ಏನು ಅಂತಕರಣ ಇರುವಂತಹ ಬದುಕನ್ನು ನಡೆಸುವುದು. ಅಂತಕರಣ ದಿಂದ ಜೀವನ ನಡೆಸಿದರೆ ನಮ್ಮ ಬದುಕಿನ ಪಯಣ ಮನುಷ್ಯನಿಂದ ಮಾನವೀಯತೆಯ ಕಡೆಗೆ ಹೋಗುತ್ತದೆ ಎಂದು ಹೇಳಿದರು.

ಅಂತಃಕರಣ ಮಾಯ

ಇವತ್ತಿನ ಜಗತ್ತು ಮಾನವೀಯತೆಯನ್ನು ಕಳೆದುಕೊಂಡಿದೆ. ಪ್ರತಿ ದಿನ ಯುದ್ದ ನಡೆಯುತ್ತಿದೆ. ಯುದ್ಧ ಹಿಂದೆ ನ್ಯಾಯಕ್ಕಾಗಿ, ಧರ್ಮಕ್ಕಾಗಿ ನಡೆಯುತ್ತಿತ್ತು. ಸತ್ಯದ ಸ್ಥಾಪನೆಗಾಗಿ ಯುದ್ಧ ನಡೆಯುತ್ತಿತ್ತು. ಈಗ ಯಾರು ಯಾಕೆ ಯುದ್ಧ ಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಇದು ಸರಿಯಲ್ಲ ಎಂದು ಹೇಳುವ ಶಕ್ತಿ ಯಾರಿಗೂ ಇಲ್ಲ. ಹೀಗಾಗಿ ಇವತ್ತು ಜಗತ್ತಿನಲ್ಲಿ ಮಾನವೀಯತೆ ಸಂಪೂರ್ಣ ಮಾಯವಾಗಿದೆ.

ಜಾಗತೀಕರಣ, ಉದಾರಿಕರಣ, ಖಾಸಗೀಕರಣ ಬಂದ ಮೇಲೆ ಅಂತಕರಣ ಇಲ್ಲದಾಗಿದೆ. ರೈತರು ಬೆಳೆದ ಬೆಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ನಿಗದಿ ಮಾಡುತ್ತದೆ. ರೈತನಿಗೆ ಆರ್ಥಿಕತೆಯ ಹಿಡಿತ ಸಿಗುತ್ತಿಲ್ಲ. ಎಷ್ಟು ಬಂಡವಾಳ ಹೂಡಬೇಕು, ಎಷ್ಟು ಲಾಭ ಬರುತ್ತದೆ ಎನ್ನುವ ಲೆಕ್ಕ ಸಿಗುತ್ತಿಲ್ಲ. ಸುಗ್ಗಿ ನಂತರ ಕೃಷಿ ಬಹಳ ಮುಖ್ಯ, ಜಾಗತೀಕರಣ, ಖಾಸಗೀಕರಣ, ಉದಾರಿಕರಣದಲ್ಲಿ ಅಂತಕರಣ ಕಳೆದುಹೋಗಿದೆ. ಪರೋಪಕಾರಿ ಭಾವನೆ ಅಂತಕರಣದಿಂದ ಬರುತ್ತದೆ. ಅದು ಆಧ್ಯಾತ್ಮದಿಂದ ಬರುತ್ತದೆ. ಕೃಷಿಯ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ವಿಚಾರದ ಬಗ್ಗೆ ಬಹಳ ಚರ್ಚೆಗಳು ನಡೆಯಬೇಕು. ಅಂದಾಗ ಕೃಷಿ ಬೆಳೆಯುತ್ತದೆ. ಇಲ್ಲದಿದ್ದರೆ ಜಗತ್ತು ವೇಗವಾಗಿ ಬೆಳೆಯುತ್ತದೆ. ಇನ್ನೊಂದು ಕಡೆ ರೈತ ಅದರಿಂದ ದೂರ ಉಳಿಯುತ್ತಾನೆ ಎಂದು ಹೇಳಿದರು.

 

 

 

About the Author

Praja Vahini

Editor

View All Posts

Spread the love

Post navigation

Previous: ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೆಲ್, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
Next: ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದು ಯಾವಾಗಲೂ ನನ್ನ ಆದ್ಯತೆ: ತೇಜಸ್ವಿ ಸೂರ್ಯ

Views:

24

You may have missed

WhatsApp Image 2026-11-20 at 18.19.22
  • State
  • ಶಹಾಪುರ

ಸರ್ಕಾರಕ್ಕೆ ರೈತರ ಕಣ್ಣಿರ ಕೂಗಿನ ಶಾಪ ತಟ್ಟುತ್ತೆ!

Praja Vahini November 20, 2026
b7450925-5c98-4ed7-8028-dedea32c3225
  • Bangalore
  • Front news
  • Politics
  • State
  • Uncategorized

ರೈತರಿಗೆ ಪರಿಹಾರಧನ ನೀಡದಿದ್ದರೆ ಅಧಿವೇಶನ ನಡೆಯಲು ಬಿಡೆವು: ಬಿ.ವೈ.ವಿ ಸವಾಲು

Praja Vahini November 20, 2026
35f5bdd0-bdc4-46bf-b1ed-718da444b857
  • Bangalore
  • Front news
  • Politics
  • State

ರೈತರ ಪರಿಹಾರಕ್ಕೆ ಷರತ್ತು ವಿಧಿಸಿ ಬದುಕಿನ ಜೊತೆ ಚೆಲ್ಲಾಟ: ವಿಜಯೇಂದ್ರ

Praja Vahini November 20, 2026
2dc07879-99e3-482c-82f4-eaf32cc8fcd4
  • Bangalore
  • Front news
  • Politics
  • State

ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಚಲುವರಾಯಸ್ವಾಮಿ

Praja Vahini November 20, 2026
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
  • E-Paper
  • Bangalore
  • State
  • Politics
  • Bangalore
  • Cinema
  • Cricket
  • Crime
  • International
  • National
  • Politics
  • Sports
  • State
Copyright © All rights reserved. | MoreNews by AF themes.