ಶಹಾಪುರ: ನಗರದ ಹಳೆ ಬಸ್ ನಿಲ್ದಾಣದ ಬಳಿ ದೇವದುರ್ಗ ಡಿಪೋಕೆ ಸೇರಿದ ಕೆಎಸ್ಆರ್ಟಿ ಬಸ್ ಕಲಬುರಗಿ ಹೊರಟಿದ್ದ ವೇಳೆ ಸುಮಾರು ೪೦ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬ್ರೇಕ್ಫೇಲ್ ಆಗಿದ್ದು, ಚಾಲಕಣ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ, ಬಸ್ಹಿಂದೆ ಇದ್ದ ಆಟೋ, ಕಾರ್ ಸೇರಿ ಮತ್ತಿತರ ವಾಹನಗಳ ಜಖಂಗೊಂಡಿದ್ದು , ಚಾಲಕನ ಸಮಯಪ್ರಜ್ಞೆಯಿಂದ ಯಾವದೇ ಅಪಾಯ ಸಂಬವಿಸಿಲ್ಲ.
ನಗರದ ಹಳೆ ಬಸ್ ನಿಲ್ದಾಣದ ಬಳಿ ಬಸ್ನ ಅಪಘಾತಕ್ಕಿಡಾಗಿದ್ದು, ಬಸ್ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದ್ದು ಅವಘಡ ಸಂಭವಿಸಿದೆ. ಬಸ್ ವೇಗವಾಗಿ ಸಾಗಿ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದಿದ್ದು, ಹಿಂದೆಯಿದ್ದ ಆಟೋ, ಕಾರ್ ಸೇರಿ ಮತ್ತಿತರ ವಾಹನಗಳು ಸರಣಿ ಡಿಕ್ಕಿ ಹೊಡೆದಿವೆ. ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಇದು ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ಸ್ಥಳಿಯರು ನಿಟ್ಟುಸಿರು ಬಿಡುವಂತಾಯಿತು. ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
