ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ 2026ರ ವಿಧಾನಸಭಾ ಚುನಾವಣೆ ಇಡೀ ದೇಶದ ಜನರನ್ನ ನಿಬ್ಬೆರಗಾಗಿಸುವಂತೆ ಮಾಡಿದೆ…
ಹೌದು, ತಮಿಳುನಾಡಿನಲ್ಲಿ ಹೊಸದಾಗಿ ರಾಜಕೀಯ ಪಕ್ಷ ಕಟ್ಟಿ ಮೊದಲ ಪ್ರಯತ್ನದಲ್ಲಿಯೇ 108 ಸ್ಥಾನಗಳ ಪಡೆಯುವ ಮೂಲಕ ರಾಜಕೀಯ ಇತಿಹಾಸದಲ್ಲೇ ಹೊಸ ಇತಿಹಾಸವನ್ನು ಸೃಷ್ಟಿಸಿದ ನಟ ವಿಜಯ್ ಅವರಿಗೆ ತಮಿಳುನಾಡು ಮಾತ್ರವಲ್ಲದೆ ಇಡೀ ದೇಶದಾದ್ಯಂತ ವಿಜಯ್ ಅವರಿಗೆ ಶುಭ ತಿಳಿಸುತ್ತಿದ್ದಾರೆ..
ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ನಟ ವಿಜಯ್ ಅವರಿಗೆ ವಿಶ್ ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಟ ಶಿವರಾಜ್ ಕುಮಾರ್ ಅವರು, ಈ ಚುನಾವಣೆಯಲ್ಲಿ ನೀವು ಅರ್ಹವಾದ ಗೆಲುವುನ್ನು ಸಾಧಿಸಿದ್ದೀರಿ. ಟೀಕಿಸುತ್ತಿರುವ ಸಮಯದಲ್ಲಿ ಮೌನವಾಗಿದ್ದು, ನಿಮ್ಮ ಕೆಲಸಗಳ ಮೂಲಕ ಉತ್ತರಿಸಿದ್ದೀರಿ. ಇದೇ ನಿಜವಾದ ಗೆಲುವು. ಇದನ್ನೂ ಓದಿ: ಕೇವಲ ಒಂದೇ ಒಂದು ಮತ ಸಚಿವರನ್ನೇ ಬುಡಮೇಲು ಮಾಡಿದ ಸಾಮಾನ್ಯ ವ್ಯಕ್ತಿ ಶ್ರೀನಿವಾಸ ಸೇತುಪತಿ
ಒಮ್ಮೆ ಮಾಧ್ಯಮಗಳ ಜೊತೆ ಮಾತನಾಡುವಾಗ ನಾನು ತಮಾಷೆಯಾಗಿ, ಟಿವಿಕೆ ಅಂದ್ರೆ Try Vijay as King ಅಂದಿದ್ದೆ. ಇಂದು ನಿಜವಾಗಿಯೂ ನೀವು ರಾಜನಂತೆ ಎದ್ದು ನಿಂತಿದ್ದೀರಿ. ಟಿವಿಕೆ ಮೂಲಕ ತಮಿಳುನಾಡಿನ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ನೀವು ನೆರವೇರಿಸುವಂತಾಗಲಿ, ಸದಾ ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದ್ದಾರೆ.
