ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಅವರ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ. ಸಂಬಂಧಿಕರಿಂದಲೇ ಒಂದು ಕೋಟಿ ಹದಿಮೂರು ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಂಟೋನ್ಮೆಂಟ್ ನಲ್ಲಿರುವ ಸಚಿವ ಜಮೀರ್ ಅಹ್ಮದ್ ಮನೆಯಲ್ಲಿ ಈ ಕಳ್ಳತನವಾಗಿದೆ. ಕಳ್ಳರು ಪ್ರತಿನಿತ್ಯ ಜಮೀರ್ ಅಹ್ಮದ್ ಅವರ ಮನೆಗೆ ಬರ್ತಾ ಇದ್ರು. ಸೈಯದ್ ಹಾಗೂ ಅಮೀರ್ ಎಂದು ಆರೋಪಿಗಳನ್ನು ಗುರುತಿಸಲಾಗಿದೆ.
ಟ್ರಾವೆಲ್ ಬಿಜಿನೆಸ್ ನಲ್ಲಿ ನಷ್ಟವಾಗಿ ಹಣಕ್ಕಾಗಿ ಪರ್ದಾಡುತ್ತಿದ್ದರಂತೆ ಎಂದು ತಿಳಿದು ಬಂದಿದೆ. ಹಣಕ್ಕಾಗಿ ಪರದಾಡುತ್ತಿರುವ ಇವರು ಜಮೀರ್ ಅಹ್ಮದ್ ಅವರ ಮನೆಯಲ್ಲಿದ್ದ ಅವರ ತಾಯಿಗೆ ಸೇರಿದ ಒಡವೆಗಳ ಮೇಲೆ ಕಣ್ಣು ಇಟ್ಟಿದ್ದ ಇವರು ಜಮೀರ್ ಅವರ ಮನೆಗೆ ಬಂದಿದ್ದ ವೇಳೆ ಪ್ಲ್ಯಾನ್ ಮಾಡಿ ಚಿನ್ನವನ್ನ ಎಗರಿಸಿದ್ದಾರೆ.
ಹೌದು, ಸಚಿವ ಜಮೀರ್ ಅಹಮದ್ ಖಾನ್ ನಿವಾಸದಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಸಯ್ಯದ್ ಅಮೀರ್ ಮತ್ತು ಅಮೀರ್ ಅಹಮದ್ ಬಂಧಿತ ಆರೋಪಿಗಳಾಗಿದ್ದಾರೆ.
ಇನ್ನು ಪ್ರಮುಖ ಆರೋಪಿ ಸೈಯದ್ ಅಮೀರ್ ಅಹಮದ್, ಟ್ರಾವೆಲ್ಸ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಹಿನ್ನೆಲೆಯಲ್ಲಿ ಹಣದ ಅವಶ್ಯಕತೆ ಎದುರಿಸಬೇಕಾಗಿತ್ತು. ಫೈನಾನ್ಸ್ ಮೂಲಕವೂ ಹಣ ಸಿಗದ ಕಾರಣ, ಪರಿಚಿತ ಮನೆಯನ್ನೇ ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರು: ಗೋವಿಂದ್ ಕಾರಜೋಳ
ಘಟನೆಯ ನಂತರ ಆರೋಪಿ ಮನೆಗೆ ಬರುವುದನ್ನು ನಿಲ್ಲಿಸಿದ್ದು, ಕರೆ ಮಾಡಿದರೂ ಸ್ಪಂದಿಸದೇ ಇರುವುದರಿಂದ ಅನುಮಾನ ಹೆಚ್ಚಾಯಿತು. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ಹಿನ್ನೆಲೆ ಪೊಲೀಸರು ಶಂಕಿತರನ್ನು ಪತ್ತೆ ಹಚ್ಚಿ ಬಂಧಿಸಿದರು. ಬಂಧನದ ನಂತರ ಆರೋಪಿಗಳು ಕಳ್ಳತನದ ಅಸಲಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
