ಬೆಂಗಳೂರು: ಹಲವು ಟೀಕೆಗಳನ್ನ ಎದುರಿಸಿ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ʼಕೆಡಿʼ ಸಿನಿಮಾಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಹೌದು, ಏಪ್ರಿಲ್ 30 ರಂದು ರಾಜ್ಯದಾದ್ಯಂತ ಬಿಡುಗಡೆಗೊಂಡ ಕೆಡಿ ಸಿನಿಮಾಗೆ ಕಳೆದ ಹಲವು ದಿನಗಳಿಂದ ಅಡೆತಡೆಗಳಿದ್ದವು ಆ ಎಲ್ಲಾ ಅಡೆ-ತಡೆಗಳನ್ನು ದಾಟಿ ಈಗ ಕರ್ನಾಟಕ ರಾಜ್ಯದಾದ್ಯಂತ ಮಾತ್ರವಲ್ಲದೆ ಇನ್ನು ಹಲವು ಭಾಷೆಗಳಲ್ಲಿ ಕೆಡಿ ಕಮಲ್ ಮಾಡುತ್ತಿದೆ.
ಯೆಸ್…ಧ್ರುವ ಸರ್ಜಾ ಅಭಿನಯ ನಿರ್ದೇಶಕ ಜೋಗಿ ಪ್ರೇಮ್ನ ಸೆಂಟಿಮೆಂಟ್ ಕಾಂಬಿನೇಷನ್ ಮೂಲಕ ಹಿಟ್ ಟ್ರ್ಯಾಕ್ ಹಿಡಿದಿದ್ದಾರೆ.
ಇನ್ನು ಸಾಮಾನ್ಯವಾಗಿ ಇತರರ ಸಿನಿಮಾಗೆ ಶುಭ ಹಾರೈಸಲು ಹಿಂದೇಟು ಹಾಕುವ ಚಿತ್ರರಂಗದಲ್ಲಿ, ‘ಕೆಡಿ’ಗಾಗಿ ಮಾತ್ರ ಭಾರಿ ಬೆಂಬಲ ವ್ಯಕ್ತವಾಗಿದೆ. ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಪೋಸ್ಟ್ ಮಾಡಿ ಧ್ರುವ ಸರ್ಜಾ ಹಾಗೂ ತಂಡಕ್ಕೆ ಸಪೋರ್ಟ್ ನೀಡಿದ್ದಾರೆ. ಇದರಿಂದ ಚಿತ್ರದ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಯೂಟ್ಯೂಬ್ ನಿಂದ ಕೆಡಿ ಸಿನಿಮಾದ ಟ್ರೈಲರ್ ಡಿಲೀಟ್!
ಎಪಿ ಅರ್ಜುನ್, ತರುಣ್ ಸುಧೀರ್, ಡಾರ್ಲಿಂಗ್ ಕೃಷ್ಣ, ಉಗ್ರಂ ಮಂಜು, ಡಾಲಿ ಧನಂಜಯ್, ನವೀನ್ ಶಂಕರ್, ರಾಗಿಣಿ ದ್ವಿವೇದಿ, ದೀಕ್ಷಿತ್ ಶೆಟ್ಟಿ, ಚಂದನ್ ಶೆಟ್ಟಿ, ಚೈತ್ರಾ ಆಚಾರ್, ಜ್ಯೋತಿ ರೈ, ಅಶ್ವಿನಿ ಪುನೀತ್ ರಾಜ್ಕುಮಾರ್, ಪ್ರಮೋದ್, ತನಿಷಾ ಕುಪ್ಪಂಡ, ಅಮೃತಾ ಅಯ್ಯಂಗಾರ್, ಪೃಥ್ವಿ ಅಂಬಾರ್, ಸಿಂಪಲ್ ಸುನಿ, ಸಂಜನಾ ಆನಂದ್, ರೂಪೇಶ್ ಶೆಟ್ಟಿ, ಯಶ ಶಿವಕುಮಾರ್, ಭಾವನಾ ರಾವ್, ಚೇತನ್ ಕುಮಾರ್, ಸತೀಶ್ ನೀನಾಸಂ, ಚಿಕ್ಕಣ್ಣ ಸೇರಿದಂತೆ ಹಲವರು ಸಿನಿಮಾಗೆ ಶುಭ ಹಾರೈಸಿದ್ದಾರೆ.
