ಉಡುಪಿ: ಮಂಗಳೂರು ಬೆಡಗಿ ಪೂಜಾ ಹೆಗಡೆ ಅವರು ಚಿತ್ರರಂಗದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರೂ ಕೂಡ ತಮ್ಮ ಸಂಸ್ಕೃತಿ ಪರಂಪರೆಯನ್ನು ಮರೆತಿಲ್ಲ.
ಹೌದು, ದಕ್ಷಿಣ ಭಾರತದಲ್ಲಿ ಖ್ಯಾತಿ ಹೊಂದಿರುವ ನಟಿ ಪೂಜಾ ಹೆಗ್ಡೆಯವರು ತಮ್ಮ ಮೂಲ ಜಿಲ್ಲೆಯಾದ ಮಂಗಳೂರಿಗೆ ಭೇಟಿ ನೀಡಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಕುತ್ಯಾರು ಮೂಲದಬೆಟ್ಟು ನಾಗ ಬ್ರಹ್ಮಸ್ಥಾನದಲ್ಲಿ ನಡೆದ ಪವಿತ್ರ ಡೆಕ್ಕೆ ಬಲಿ ಸೇವೆಯಲ್ಲಿ ಭಾಗವಹಿಸಿ ಭಕ್ತರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಮದುವೆ ಇಲ್ಲದೆಯೇ ಮಗು ಪಡೆಯುವುದರಲ್ಲಿ ತಪ್ಪೇನಿಲ್ಲ: ನಿತ್ಯಾ ಮೆನನ್
ಇನ್ನು ಅಪ್ಪಟ ಕುಡ್ಲದ ಪೊಣ್ಣುವಾಗಿ ಮಿಂಚಿದ್ದಾರೆ. ಕುತ್ಯಾರು ಮೂಲದಬೆಟ್ಟು ನಾಗ ಬ್ರಹ್ಮಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಡೆಕ್ಕೆ ಬಲಿ ಸೇವೆಯಲ್ಲಿ ಪೂಜಾ ಹೆಗ್ಡೆ ಕುಟುಂಬ ಸಮೇತರಾಗಿ ಭಾಗವಹಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
